FOUR KARNATAKA MP’S DID NOT SPEAK IN LOK SABHA: ಸಂಸತ್ತನಲ್ಲಿ ಒಮ್ಮೆಯೂ ಮಾತನಾಡದ ಪ್ರಶ್ನೆಯನ್ನು ಕೇಳದ ಕರ್ನಾಟಕದ ನಾಲ್ವರು ಸಂಸದರು

ನವದೆಹಲಿ : ಲೋಕಸಭೆ ಚುನಾವಣೆ ಮತ್ತೆ ಬರುತ್ತಿದೆ. ಕಳೆದ ಐದು ವರ್ಷಗಳಲ್ಲಿ ಲೋಕಸಭೆಯಲ್ಲಿ ಒಮ್ಮೆಯೂ ಮಾತನಾಡದ, ಒಂದೂ ಪ್ರಶ್ನೆ ಕೇಳದ ಕರ್ನಾಟಕದ ನಾಲ್ವರು ಸಂಸದರಿದ್ದಾರೆ.
ಅದರಲ್ಲೂ ರಾಜ್ಯದಲ್ಲಿ ಫೈರ್ ಬ್ರಾಂಡ್ ಎಂದೇ ಖ್ಯಾತಿ ಪಡಿದಿರುವ ಅನಂತಕುಮಾರ ಹೆಗಡೆ, ವಿ ಶ್ರೀನಿವಾಸ ಪ್ರಸಾದ್, ರಮೇಶ್ ಜಿಗಜಿಣಗಿ ಹಾಗೂ ಬಿ ಎನ್ ಬಚ್ಚೇಗೌಡ ಇವರ ಹೆಸರುಗಳಿವೆ.
ಕಳೆದ ಐದು ವರ್ಷದಲ್ಲಿ 1354 ಗಂಟೆ ಕಲಾಪ ನಡೆದಿದೆ. ಈ ಅವಧಿಯಲ್ಲಿ ಕರ್ನಾಟಕದ ನಾಲ್ವರು ಸೇರಿದಂತೆ ಒಂಟು 9 ಸದಸ್ಯರು ಒಂದೂ ಮಾತನ್ನು. ಯಾವುದೇ ರೀತಿಯ ಚರ್ಚೆಯಲ್ಲೂ ಅವರು ಪಾಲ್ಗೊಂಡಿಲ್ಲ.
ಲೋಕಸಭೆಯಲ್ಲಿ ಮೌನಕ್ಕೆ ಶರಣಾದ ಪಟ್ಟಿಯಲ್ಲಿ ಆರು ಮಂದಿ ಬಿಜೆಪಿಯ ಸಂಸದರು, ಇಬ್ಬರು ತೃಣಮೂಲ ಕಾಂಗ್ರೆಸ್ ಸದಸ್ಯರು ಒಬ್ಬರು ಬಿಎಸ್ ಪಿ ಪಕ್ಷದ ಸದಸ್ಯರಾಗಿದ್ದಾರೆ.
ಶತ್ರುಘ್ನ ಸಿನ್ಹಾ, ಸನ್ನಿ ಡಿಯೋಲ್, ಅತುಲ್ ರೈ, ಪ್ರಧಾನ್ ಬರುಅ ಮತ್ತು ದಿಬ್ಯೇಂದು ಅಧಿಕಾರಿ ಈ ಪಟ್ಟಿಯಲ್ಲಿರುವ ಇತರ ಸಂಸದರಾಗಿದ್ದಾರೆ.
ಪಟ್ಟಿಯಲ್ಲಿರುವ ಒಂಬತ್ತು ಸದಸ್ಯರಲ್ಲಿ ಮೂವರು ಕನಿಷ್ಠ ಒಂದು ಪ್ರಶ್ನೆಯನ್ನೂ ಕೇಳಿಲ್ಲ, ಉಳಿದ ಆರು ಮಂದಿ ಕನಿಷ್ಠ ಒಂದು ಅವಕಾಶವನ್ನು ಬಳಸಿಕೊಂಡಿದ್ದಾರೆ.
ಜನಸಮಾನ್ಯರ ಸಮಸ್ಯೆಗಳಿಗೆ ಸಂಸತ್ತಿನಲ್ಲಿ ಚರ್ಚಿಸಿ ಪರಿಹಾರ ಕೊಂಡುಕೊಳ್ಳುವ ಉದ್ದೇಶದಿಂದ ಇವರನ್ನು ಆಯ್ಕೆ ಮಾಡಿ ಕಳುಹಿಸಲಾಗುತ್ತದೆ. ಆದರೆ, ಇವರು ಒಂದು ಮಾತು ಆಡದೇ ಇರುವುದು ಮಾತ್ರ ಸೋಜಿಗದ ಸಂಗತಿಯಾಗಿದೆ.

More News