ವಿಧಾನಸಭೆ : ದೊಡ್ಡಬಳ್ಳಾಪುರದಲ್ಲಿ ಅಕ್ರಮವಾಗಿ ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಇದರ ಬಗ್ಗೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಬಿಜೆಪಿ ಶಾಸಕ ಧೀರಜ್ ಮುನಿರಾಜ್ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು.
ಪ್ರಶೋತ್ತರ ವೇಳೆಯಲ್ಲಿ ಶಾಸಕ ಧೀರಜ್ ಅವರು ಕೇಳಿದೆ ಪ್ರಶ್ನೆಗೆ ಪ್ರತಿಪಕ್ಷ ನಾಯಕ ಅಶೋಕ್ ಕೂಡ ಧ್ವನಿಗೂಡಿಸಿದ್ದು, ನಾನು ಕೂಡ ನೋಡಿದ್ದೇನೆ, ಮೊದಲು ಇದಕ್ಕೆ ಕಡಿವಾಣ ಹಾಕಿ ಎಂದು ಸರ್ಕಾರವನ್ನು ಆಗ್ರಹಿಸಿದರು.

ಮಾಜಿಗೃಹ ಸಚಿವ ಅರಗ ಜ್ಞಾನೇಂದ್ರ ಕೂಡ ಧ್ವನಿಗೂಡಿಸಿ, ನಮ್ಮ ಕ್ಷೇತ್ರದಲ್ಲೂ ಇಂತಹ ಪರಿಸ್ಥಿತಿ ಇದೆ, ಜನ ನಮ್ಮನ್ನೇ ಪ್ರಶ್ನೆ ಮಾಡ್ತಾರೆ, ನಿಮಗೂ ಪಾಲಿದ್ಯಾ ಅಂತ ಕೇಳ್ತಾರೆ, ಇದರ ಬಗ್ಗೆ ನೀವು ಕ್ರಮ ಜರುಗಿಸಿ ಎಂದರು.

ಸದಸ್ಯರ ಪ್ರಶ್ನೆಗೆ ಅಬಕಾರಿ ಸಚಿವ ಆರ್ ಬಿ ತಿಮ್ಮಾಪೂರ ಉತ್ತರಿಸಿ, ಇದರ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು, ಇಂತಹದಕ್ಕೆಲ್ಲ ಅವಕಾಶ ನೀಡಲ್ಲ ಎಂದು ಸದನಕ್ಕೆ ಭರವಸೆ ನೀಡಿದರು.




