DEBATE ON COCONUT PRICE FALL: ಕೊಬ್ಬರಿ ಬೆಲೆ ಕುಸಿತ ಮತ್ತು ಖರೀದಿ ಸ್ಥಗಿತ ಕುರಿತ ಚರ್ಚೆ: ಆಡಳಿತ ಪಕ್ಷ ಮತ್ತು ವಿರೋಧಪಕ್ಷದ ಸದಸ್ಯರ ನಡುವೆ ಮಾತಿನ ಜಟಾಪಟಿ

ವಿಧಾನಸಭೆ : ವಿಧಾನಸಭೆಯಲ್ಲಿ ಕೊಬ್ಬರಿ ಬೆಲೆ ಕುಸಿತ ಹಾಗೂ ಖರೀದಿ ಕೇಂದ್ರ ಸ್ಥಗಿತವಾಗಿರುವ ಕುರಿತು ಜೆಡಿಎಸ್ ಶಾಸಕ ಹೆಚ್ ಡಿ.ರೇವಣ್ಣ ಪ್ರಸ್ತಾಪಿಸಿದರು. ನಿಲುವಳಿ ಸೂಚನೆ ಮೂಲಕ ಕೊಬ್ಬರಿ ಬೆಳೆಗಾರರ ಸಮಸ್ಯೆ ಕುರಿತು ಸದನದಲ್ಲಿ ಇದು ಚರ್ಚಿಸಿದರು.

ವಿಷಯದ ಕುರಿತು ಚರ್ಚೆಯ ಸಂದರ್ಭದಲ್ಲಿ ಜೆಡಿಎಸ್ – ಕಾಂಗ್ರೆಸ್ ಶಾಸಕರ ನಡುವೆ ವಾಕ್ಸಮರ ನಡೆಯಿತು. ಕೊಬ್ಬರಿ ಖರೀದಿ ಮಾಡಲು ಡಿ.ಕೆ.ಶಿವಕುಮಾರ್ ಗೆ ಅಧಿಕಾರವಿಲ್ಲ, ಖರೀದಿ ಮಾಡುವ ಅಧಿಕಾರ ಇರೋದು ಪ್ರಧಾನಿ ಮೋದಿಗೆ ಮಾತ್ರ ಎಂದು ಶಿವಲಿಂಗೇಗೌಡ ನೀಡಿರುವ ಹೇಳಿಕೆ ವಾಕ್ಸಮರಕ್ಕೆ ಕಾರಣವಾಯಿತು.

ಶಾಸಕ ಶಿವಲಿಂಗೇಗೌಡ ಹೇಳಿಕೆಗೆ ಬಿಜೆಪಿ ,ಜೆಡಿಎಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ರೈತರ ಸಮಸ್ಯೆ ಬಗ್ಗೆ ಮಾತಾಡುವಾಗ ರಾಜಕೀಯ ಬೇಡ ಎಂದು ಶಾಸಕ ಸುರೇಶ್ ಗೌಡ ಮನವಿ ಮಾಡಿದರಲ್ಲದೆ, ಶಾಸಕ ಶಿವಲಿಂಗೇಗೌಡ ವಿರುದ್ಧ ಆಕ್ರೋಶ ಹೊರ ಹಾಕಿದ ತುಮಕೂರು ಗ್ರಾಮಾಂತರ ಶಾಸಕರು.

ಯಾರ ಮನೆಯಿಂದಲೂ ರೈತರಿಗೆ ಹಣ ಕೊಡೋದಿಲ್ಲ, ಯಾವುದೇ ಸರಕಾರ ಕೊಟ್ಟರೂ ಸರಕಾರದಿಂದಲೇ ಹಣ ಕೊಡಬೇಕು. ರೈತರ ಪರವಾಗಿ ಇಲ್ಲಿ ಮಾತಾಡಿ ಎಂದು ಶಾಸಕ ಸುರೇಶ್ ಗೌಡ ಆಗ್ರಹಿಸಿದರು.

More News