ಧಾರವಾಡ: ಎರಡು ದಿನಗಳ ಹಿಂದೆ ಕಿಟಕಿಯಿಂದ ಯುವಕನೊಬ್ಬ ಬಸ್ ಹತ್ತಿದ್ದಕ್ಕೆ ಕೋಪಗೊಂಡ ಸರ್ಕಾರಿ ಬಸ್ ಚಾಲಕ, ಬಸ್ ಅನ್ನು ನೇರವಾಗಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ದೂರು ದಾಖಲಿಸಿದ ಘಟನೆ ನಡೆದಿದೆ.
ಇದರಿಂದ ಸಿಟ್ಟಿಗೆದ್ದ ಯುವಕ ಇಂದು ಅದೇ ಬಸ್ ಚಾಲಕನೊಂದಿಗೆ ಜಗಳವಾಡಿ, ಕಿತ್ತಾಟ ನಡೆಸಿದ ಘಟನೆ ಧಾರವಾಡ ಜಿಲ್ಲೆಯ ಅಳ್ನಾವರ ಬಸ್ ನಿಲ್ದಾಣದಲ್ಲಿ ನಿನ್ನೆ ಸಂಜೆ ನಡೆದಿದೆ.

ಒಬ್ಬರಿಗೊಬ್ಬರು ಶರ್ಟ್ ಕಾಲರ್ ಹಿಡಿದು ಕಿತ್ತಾಡಿದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಇದೀಗ ಸಾಕಷ್ಟು ವೈರಲ್ ಆಗಿದೆ. ಜಗಳ ತಾರಕಕ್ಕೆ ಹೋಗಿದ್ದರಿಂದ ಪೊಲೀಸರು ಮಧ್ಯೆ ಪ್ರವೇಶ ಮಾಡಿ ಜಗಳವನ್ನು ಬಿಡಿಸಿದ್ದಾರೆ. ಅಳ್ನಾವರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.




