ಬೆಂಗಳೂರು : ಇಡಿ ಯವರು ಅವರ ಕೆಲಸ ಮಾಡಿದ್ದಾರೆ, ಬಂದು ಶೋಧ ನಡೆಸಿದ್ದಾರೆ. ದಾಳಿ ವೇಳೆ ನನ್ನದು 2 ಲಕ್ಷ ರೂಪಾಯಿ, ಅಮ್ಮನದ್ದು 3 ಲಕ್ಷ ಹಣ ಸಿಕ್ಕಿದೆ ಎಂದು ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ದಿನಗಳ ಕಾಲ ತಮ್ಮ ಮನೆ ಮತ್ಿತು ಕಚೇರಿ ಹಾಗೂ ಸಂಬಂಧಿಕರ ಮನೆ ಮೇಲೆ ಇಡಿ ದಾಳಿ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದರು.
ನನ್ನ ಮೊಬೈಲ್ ಗಳನ್ನು ಇಡಿ ಅಧಿಕಾರಿಗಳು ಸೀಜ್ ಮಾಡಿದ್ದಾರೆ, ತನಿಖೆಗೆ ಕರೆದರೆ ಖಂಡಿತ ನಾನು ಸಹಕಾರ ನೀಡುತ್ತೇನೆ ಎಂದು ತಿಳಿಸಿದ ಅವರು, ದಾಳಿ ಆಗಿರೋದು ಮೊದಲೇನಲ್ಲ, ಹಿಂದೆನೂ ಕೂಡ IT ದಾಳಿ ಆಗಿತ್ತು ಎಂದು ಭರತ್ ರೆಡ್ಡಿ ತಿಳಿಸಿದ್ದಾರೆ.




