IMORAL RELATIONSHIP MURDER: ಅತ್ತಿಗೆ ಜತೆ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ : ಅಣ್ಣನಿಂದಲೇ ತಮ್ಮನ ಭೀಕರ ಕೊಲೆ

ಹಾವೇರಿ: ಅನೈತಿಕ ಸಂಬಂಧದ ಶಂಕೆ ಹಿನ್ನಲೆಯಲ್ಲಿ ತಮ್ಮನ ಎದೆಗೆ ಅಣ್ಣನೇ ಚೂರಿ ಇರಿದು ಕೊಲೆಗೈದ ಘಟನೆ ಹಾವೇರಿ ತಾಲೂಕಿನ ನೆಲೋಗಲ್ಲ ತಾಂಡಾದಲ್ಲಿ ಜರುಗಿದೆ.

ತನ್ನ ಹೆಂಡತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಸಂಶಯದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾನೆ ಎಂದು ದೂರು ದಾಖಲಿಸಿ ತನಿಖೆ ನಡೆಸುತ್ತಿರುವ ಹಾವೇರಿ ಪೊಲೀಸರು ತಿಳಿಸಿದ್ದಾರೆ.

ಹಾವೇರಿ ತಾಲೂಕಿನ ನೆಲೋಗಲ್ಲ ತಾಂಡಾದ ನಿವಾಸಿ ಹನುಮಂತಪ್ಪ ಲಮಾಣಿ (42) ಸಾವನ್ನಪ್ಪಿದ ದುರ್ದೈವಿಯಾಗಿದ್ದು, ಈತ ತನ್ನ ಅಣ್ಣ ಶಂಕ್ರಪ್ಪ ಲಮಾಣಿ (55) ಎಂಬಾತನಿಂದ ಕೊಲೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮದ್ಯಸೇವಿಸಿ ಮನೆಗೆ ಬಂದ ಆರೋಪಿ ಅಣ್ಣ ಶಂಕ್ರಪ್ಪ, ತಮ್ಮದ ಜತೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ತಮ್ಮ ಹನುಮಂತಪ್ಪನ ಎದೆಗೆ ಚೂರಿ ಇರಿದಿದ್ದಾನೆ. ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಹಾವೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಆರೋಪಿ ಶಂಕ್ರಪ್ಪನನ್ನು ಹಾವೇರಿ ಗ್ರಾಮೀಣ ಠಾಣಾ ಪೊಲೀಸರು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.

More News