ಹಾವೇರಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮಾಜಿ ಶಾಸಕರೊಬ್ಬರು 40 ಕೋಟಿ ರೂಪಾಯಿ ಹಣದ ಹೊಳೆ ಹರಿಸಿದ್ದರೂ ಕೂಡ ಗೆಲ್ಲಲು ಸಾಧ್ಯವಾಗಿಲ್ಲ ಅಂತೆ. ಹೀಗಂತಾ ಅವರೇ ಖುದ್ದಾಗಿ ತಾವು ಖರ್ಚು ಮಾಡಿದ ವಿಚಾರಣವನ್ನು ಬಹಿರಂಗಪಡಿಸಿದ್ದಾರೆ.
ಮಾಜಿ ಶಾಸಕರು ನೀಡಿದ ಹೇಳಿಕೆ ನಂತರ ಇದೀಗ ಇವರಿಗೆ ಚುನಾವಣೆಯಲ್ಲಿ ಇಷ್ಟೊಂದು ಹಣ ಖರ್ಚು ಮಾಡಲು ಎಲ್ಲಿಂದ ಬಂತು ಎಂಬ ಪ್ರಶ್ನೆಯನ್ನ ಸಾರ್ವಜನಿಕರು ಕೇಳುತ್ತಿದ್ದಾರೆ. ಹಾಗಾದರೆ, ಚುನಾವಣಾ ಆಯೋಗದಲ್ಲಿ ಿವರ ವಿರುದ್ಧ ಯಾಕೆ ದೂರು ದಾಖಲಾಗಿಲ್ಲ ಎಂದು ಮತದಾರರೇ ಪ್ರಶ್ನಿಸುತ್ತಿದ್ದಾರೆ.
ಬಿಜೆಪಿ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಮುಂದೆ ಬಹಿರಂಗವಾಗಿ ಈ ಹೇಳಿಕೆಯನ್ನು ರಾಣೆಬೇನ್ನೂರಿನ BJP ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್ ಬಹಿರಂಗಪಡಿಸಿದ್ದಾರೆ. BJP ಕಚೇರಿಯಲ್ಲಿ ಸೋಲಿನ ಬೇಸರ ಹೊರಹಾಕಿದ ಮಾಜಿ ಶಾಸಕರು, ನಾನು 40 ಕೋಟಿ ಖರ್ಚು ಮಾಡಿದ್ರು ಸೋತೆ ಎಂದು ಹೇಳಿದ್ದಾರೆ.
ಜಿಲ್ಲಾ ಪದಾಧಿಕಾರಿಗಳ ಆಯ್ಕೆ ವಿರುದ್ಧ ರೊಚ್ಚಿಗೆದ್ದಿದ್ದ ಸ್ವ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಹೇಳಿಕೆ ನೀಡಿದ ಮಾಜಿ ಶಾಸಕರು, ಹಾವೇರಿಯ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನ ಸಮಾಧಾನ ಪಡಿಸೋ ವೇಳೆ 40 ಕೋಟಿ ರಹಸ್ಯ ಬಿಚ್ಟಿಟ್ಟರು.
ಗೊಂದಲ ಮಾಡಿ ಗುಂಪುಗಾರಿಕೆ ಮಾಡೋವ ಅವಶ್ಯಕತೆ ನನಗಿಲ್ಲ, ಗುಂಪುಗಾರಿಕೆಯಿಂದ ಏನಾಗಿದೆ ಅದು ನನಗೆ ಗೊತ್ತು…! ಗುಂಪುಗಾರಿಕೆ ಮಾಡಿ ಏನಾಗಿದೆ ಪರಿಸ್ಥಿತಿ ನಾನು ಸೋತೆ ಅಲ್ವಾ…?, ನಾನು ಹತ್ತಿರ ಬಂದು ಸೋತೆ ನನಗೂ ಬಹಳ ನೋವಿದೆ, ನಿಮಗೆ ಏನ್ ನೋವಿದೆ ಅದರ 10 ಪಟ್ಟು ಅಂದು ನನಗೆ ನೋವಾಗಿತ್ತು ಎಂದು ಅರುಣ್ ಕುಮಾರ್ ಪೂಜಾರ್ ಹೇಳಿದ್ದಾರೆ.
ನನ್ನ ತಪ್ಪಿನಿಂದ ನಾನು ಸೋತೆ, ಕಾರ್ಯಕರ್ತರಿಂದ ಅಲ್ಲ, ನನ್ನ ಹಣೆಬರಹ ಸರಿಯಿಲ್ಲ ನಾನು ಯಾರಿಗೂ ಬೆರಳು ಮಾಡಲ್ಲ ಅಂತಾ ನಾನ್ ಸೋತಾಗ ಹೇಳಿದ್ದೇನೆ, ನನ್ನ ಸೋಲಿಗೆ ನಾನೇ ಕಾರಣ ಎಂದು ಅಸಮಾಧಾನ ಹೊರಹಾಕಿದ ಮಾಜಿ ಶಾಸಕ ಅರುಣಕುಮಾರ ಪೂಜಾರ್.
ಇದೀಗ ಅರುಣಕುಮಾರ ಪೂಜಾರ ಹೇಳಿಕೆ ಜಿಲ್ಲೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು, ಅವರ ವಿರುದ್ದ ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತದಾ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಇಡಿ ಮತ್ತು ಐಟಿ ಅವರು ಇವರಿಗೆ ನೋಟಿಸ್ ನೀಡಿ ವಿಚಾರಣೆ ಮಾಡುತ್ತಾ ಎನ್ನುತ್ತಿದ್ದಾರೆ.




