THREATS AND SETTLEMENTS IS NOT OUR CULTURE: ಬಿಜೆಪಿ ಶಾಸಕರನ್ನು ಜತೆಯಲ್ಲಿ ಕರೆದೊಯ್ದ ಡಿಸಿಎಂ ವಿರುದ್ಧ ಅಸಮಾಧಾನ: ಧಮಕಿ ಹಾಕುವ, ಸೆಟ್ಲಮೆಂಟ್ ಮಾಡುವ ಸಂಸ್ಕೃತಿ ನಮ್ಮದಲ್ಲ: ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು : ಧಮಕಿ ಹಾಕುವ ಸಂಸ್ಕೃತಿಯಿಂದ ಬಂದವರ್ಯಾರು.? ಸೆಟ್ಲಮೆಂಟ್ ಮಾಡ್ತೀನಿ ಅಂತ ಹೇಳಿದವರು ಯಾರು.? ಧಮಕಿ ಹಾಕುವ, ಸೆಟ್ಲಮೆಂಟ್ ಮಾಡುವ ಸಂಸ್ಕೃತಿ ನಮ್ಮದಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದ ಪಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಧಮಕಿ‌ ಹಾಕಿದ್ದಾರೆ ಅಂತ ಕಾಂಗ್ರೆಸ್ ಶಾಸಕರಿಂದ ದೂರು‌ ವಿಚಾರವಾಗಿ ಈ ರೀತಿ ಪ್ರತಿಕ್ರಿಯಿಸಿದರಲ್ಲದೆ, ಧಮಕಿ ಹಾಕಿ, ಸಿಕ್ಕ ಸಿಕ್ಕ ಜಾಗದಲ್ಲಿ ಬೇಲಿ ಹಾಕೋದು ನಮ್ಮ ಜಾಯಮಾನದಲ್ಲಿ‌ ಇಲ್ಲ ಎಂದರು.
ನಾನು ಯಾರಿಗೂ ಧಮಕಿ ಹಾಕಿಲ್ಲ ಎಂದು ಹೇಳುವುದರ ಮೂಲಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಂಸದ ಡಿ ಕೆ ಸುರೇಶ್ ಅವರ ಹೆಸರನ್ನು ಹೇಳದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ರಾಜ್ಯಸಭಾ ಚುನಾವಣೆ ಇದೆ, ಆತ್ಮ ಸಾಕ್ಷಿಯ ಮತ ಕೇಳೋದಾಗಿ ಹೇಳಿದ್ದೇವೆ, ಇವರ್ಯಾರೊ ಬಿಜೆಪಿ ಶಾಸಕರನ್ನ ಕೂರಿಸಿಕೊಂಡಿದ್ರಲ್ಲ ಅದು ತಪ್ಪಲ್ವಾ.?, ಜೆಡಿಎಸ್‌ ಎರಡು ಮತ ಬರಲಿದೆ ಅಂತ ಹೇಳಿದ್ದಾರೆ ಅದು ತಪ್ಪಲ್ವಾ.?, ಯಾರಿಗೂ ಧಮಕಿ‌ ಹಾಕುವ ಸಂಸ್ಕೃತಿ ನಮ್ಮದಲ್ಲ ಎಂದು ಸಮಜಾಯಿಸಿ ನೀಡಿದರು.
ಹಾಗೆಯೇ, ಎರಡು ದಿನಗಳ ಹಿಂದೆ ವಿಮಾನದಲ್ಲಿ ತೆರಳುವಾಗ ಎಸ್ ಟಿ ಸೋಮಶೇಖರ್ ಅವರನ್ನು ಕರೆದುಕೊಂಡು ಹೋಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿಯ ಶಾಸಕರನ್ನು ಕರೆದುಹೋಗಿದ್ದಕ್ಕೆ ಜೆಡಿಎಸ್ ನ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿರುವುದು ವಿಪರ್ಯಾಸವಾಗಿದೆ.
ಕೇವಲ ಮೈತ್ರಿ ಮಾಡಿಕೊಂಡಿರುವುದಕ್ಕೆ ಬಿಜೆಪಿ ಪರ ಇಷ್ಟೊಂದು ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಟೀಕಿಸಿದ್ದಾರೆ.

More News