ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ತೆರಿಗೆ ವಿಷಯಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ರಾಜ್ಯಪತ್ರ ಇಂಗ್ಲೀಷ್ ಮಯವಾಗಿದೆ. ರಾಜ್ಯಪತ್ರವನ್ನೇ ಕನ್ನಡದಲ್ಲಿ ಪ್ರಕಟಸದ ರಾಜ್ಯ ಸರ್ಕಾರವು ಕನ್ನಡ ಕಡ್ಡಾಯ ವಿಧೇಯಕ ಅನುಮೋದನೆಗೆ ಹೊರಟಿದೆ ಎಂದರೆ ಇದೆಂತಹಾ ಅಪಹಾಸ್ಯ ನೋಡಿ….


ಬೆಂಗಳೂರಿನಲ್ಲಿ ಕನ್ನಡದಲ್ಲಿ ಬೋರ್ಡ್ ಹಾಕಿಲ್ಲ ಎಂಬ ಕಾರಣಕ್ಕೆ ನಡೆದ ಹೋರಾಟಕ್ಕೆ ಎಚ್ಚೆತ್ತು, ಕನ್ನಡ ಕಡ್ಡಾಯ ಕಾಯ್ದೆ ಜಾರಿಗೆ ತರಲು ಹೊರಟಿದೆ. ಕರಡು ಮಸೂದೆಯನ್ನು ಉಭಯ ಸದನದಲ್ಲಿ ಮಂಡನೆಯನ್ನು ಮಾಡಲಾಗಿದೆ. ವಿಧಾನ ಸಭೆಯಲ್ಲಿ ಅನುಮೋದನೆಯಾಗಿದೆ. ವಿಧಾನ ಪರಿಷತ್ ನಲ್ಲಿ ವಿಧೇಯಕ ಇಂದು ಚರ್ಚೆಯಾಗಲಿದೆ.


ಬಿಬಿಎಂಪಿ ಚೀಪ್ ಕಮಿಷನರ್ ತುಷಾರ್ ಗಿರಿನಾಥ್ ಹೆಸರಿನಲ್ಲಿ ಹೊರಡಿಸಿರುವ ಕರಡು ರಾಜ್ಯ ಪತ್ರವೇ ಇಂಗ್ಲೀಷ್ ನಲ್ಲಿದೆ. ಜನರಿಗೆ, ವ್ಯಾಪಾರಿಗಳಿಗೆ, ಬೋರ್ಡ್ ಗಳಿಗೆ ಮಾತ್ರ ಕನ್ನಡ ಕಡ್ಡಾಯ ಸೀಮಿತವಾಗಿಯಾ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

ಸರ್ಕಾರದ ಆಡಳಿತವೇ ಇಂಗ್ಲೀಷ್ ವ್ಯಾಮೋಹದಲ್ಲಿದೆ ಎನ್ನುವಂತಿದೆ. ಕಾನೂನು ಜಾರಿ ಮಾಡಬೇಕಾದವರೇ ಇಂಗ್ಲೀಷ್ ಭಾಷೆಯನ್ನೆ ಆಡಳಿತ ಭಾಷೆಯಾಗಿ ಬಳಸಿದ್ದಾರೆ. ಕನ್ನಡ…. ಕನ್ನಡ.. ಕಡ್ಡಾಯ ಜಾರಿ ಮಾಡುವವರು ಯಾರು….? ಸರ್ಕಾರವೇ ಅಥವಾ ಕೇವಲ ಜನಸಾಮಾನ್ಯರೇ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಇಂಗ್ಲೀಷ್ ರಾಜ್ಯ ಸರ್ಕಾರ ಉತ್ತರಿಸಬೇಕಾಗಿದೆ.




