ವಿಧಾನಸಭೆ: 2023-24 ನೇ ಸಾಲಿನ ಪೂರಕ ಅಂದಾಜುಗಳನ್ನು ಇಂದು ವಿಧಾನಸಭೆಯಲ್ಲಿ ಮಂಡನೆ ಮಾಡಲಾಯಿತು. ಒಟ್ಟು 4078 ಕೋಟಿ ರೂ ಮೊತ್ತದ ಹೆಚ್ಚುವರಿ ವೆಚ್ಚಗಳಿರುವ ಪೂರಕ ಅಂದಾಜುಗಳನ್ನು ಮಂಡಿಸಲಾಯಿತು.
ಯಾವ್ಯಾವುದಕ್ಕೆ ಹೆಚ್ಚುವರಿ ವೆಚ್ಚ…!!??
ಗ್ಯಾರಂಟಿಗಳಿಗೆ 30 ಕೋಟಿ ರೂ ಹಣ
ಶಾಸಕರಿಗೆ ವಾಹನ ಖರೀದಿಗೆ 5 ಕೋಟಿ ರೂ
ಶಕ್ತಿ ಯೋಜನೆಗೆ 400 ಕೋಟಿ ರೂ
ಅಲ್ಪಾವಧಿ ಬೆಳೆ ಸಾಲಮನ್ನಾ ಮಾಡಲು 131 ಕೋಟಿ
ದಸರಾ ಸಿಎಂ ಕಪ್ ಕ್ರೀಡಾಕೂಟಕ್ಕೆ 5 ಕೋಟಿ
ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ 5 ಕೋಟಿ
ಸರ್ಕಾರಿ ಕಾರ್ಯಕ್ರಮಗಳ ಪ್ರಚಾರ, ಮಾಹಿತಿ ಶಿಕ್ಷಣ ಹಾಗೂ ಸಂವಹನ ವೆಚ್ಚಗಳು – 220 ಕೋಟಿ
ಹಂಪಿ ಉತ್ಸವಕ್ಕೆ 8 ಕೋಟಿ
ಬಸವಕಲ್ಯಾಣದ ನೂತನ ಅನುಭವ ಮಂಟಪಕ್ಕೆ – 50 ಕೋಟಿ
ನೈಸರ್ಗಿಕ ವಿಕೋಪಗಳಿಗೆ 460 ಕೋಟಿ
ದೆಹಲಿಯಲ್ಲಿ ಆಯೋಜಿಸಿರುವ ಭಾರತ್ ಟೆಕ್ಸ್-2024 ಕಾರ್ಯಕ್ರಮಕ್ಕೆ 3 ಕೋಟಿ
ನಮ್ಮ ಮೆಟ್ರೋಗೆಬ85 ಕೋಟಿ
ಸ್ಪೀಕರ್ ಹಾಗೂ ಕಾಂಗ್ರೆಸ್/ಬಿಜೆಪಿ ಮುಖ್ಯ ಸಚೇತಕರಿಗೆ ಹೊಸ ವಾಹನಗಳಿಗೆ 70 ಲಕ್ಷ ರೂ. ಪೂರಕ ಅಂದಾಜನ್ನು ಸಲ್ಲಿಸಲಾಯಿತು.




