ಹೈದರಾಬಾದ್ : ಆಂಧ್ರಪ್ರದೇಶದ ವಿಧಾನಸಭೆ ಚುನಾವಣೆ ಇನ್ನೇನು ಕೆಲವೇ ತಿಂಗಳಲ್ಲಿ ನಡೆಯಲಿದೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಜತೆಯಲ್ಲಿಯೇ ನಡೆಯುತ್ತಿದೆ. ಹೀಗಾಗಿ ಆಂಧ್ರ ರಾಜಕೀಯ ಪಕ್ಷಗಳಾದ ವೈಎಸ್ಆರ್ ಸಿಪಿ ಮತ್ತು ಟಿಡಿಪಿ ಪಕ್ಷಗಳ ಪ್ರಚಾರ ಜೋರಾಗಿಯೇ ನಡೆಯುತ್ತಿದೆ.
సిద్ధం..సిద్ధం అంటూ కేకలు పెట్టేది ఇందుకా ? ఇలాంటి నీచపు ప్రచారాలు చేసే బదులు శవాల మీద చిల్లర ఏరుకోవచ్చు కదా @YSRCParty ?#YCPAntham #WhyAPHatesJagan #2024JaganNoMore #AndhraPradesh pic.twitter.com/RBWftNefxo
— Telugu Desam Party (@JaiTDP) February 21, 2024
ಆದರೆ ಇದೀಗ ಎರಡೂ ಪಕ್ಷಗಳು ಪ್ರಚಾರಕ್ಕಾಗಿ ಕಾಂಡೋಮ್ ಬಳಸಿ ಅದರ ಮೇಲೆ ತಮ್ಮ ಪಕ್ಷದ ಚಿಹ್ನೆ ಬಳಸಿ ಹಂಚುತ್ತಿದ್ದಾರೆ ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದುಮಾಡುತ್ತಿದೆ.ಇದಕ್ಕೆ ಸಾಕಷ್ಟು ಜನರು ಪ್ರತಿಕ್ರಿಯಿಸಿದ್ದು, ಇದೆಂಥಾ ಹುಚ್ಚಾಟ..? ವಯಾಗ್ರಾ ನೀಡಲಿದ್ದಾರೆಯೇ..? ಇಷ್ಟಕ್ಕೆ ನಿಲ್ಲಿಸಲಿದ್ದಾರಾ..? ಅಥವಾ ಇನ್ನೂ ಮುಂದುವರೆಯಲಿದೆಯಾ..? ಇನ್ನು ಕೀಳು ಮಟ್ಟಕ್ಕೆ ಇಳಿಯಲಿದೆಯಾ..? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಉಭಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ಸಿದ್ದಂ ಅಭಿಯಾ ನಡೆಯುತ್ತಿದೆ. ಅದೇ ಹೆಸರು ಇರುವ ಪಕ್ಷದ ಚಿಹ್ನೆಯಾದ ಫ್ಯಾನ್ ಚಿತ್ರದೊಂದಿಗೆ ವೈಎಸ್ ಆರ್ ಸಿಪಿ ಸಹ ಕಾಂಡೋಮ್ ಪ್ಯಾಕೇಟ್ ಹಂಚಿದೆ ಎನ್ನಲಾಗಿದೆ. ಇದರ ವಿರುದ್ಧ ಕಿಡಿ ಕಾರಿರುವ ಟಿಡಿಪಿ ಸಿದ್ದಂ ಎಂದಿರುವುದು ಇದಕ್ಕೇನಾ ಎಂದು ಪ್ರಶ್ನಿಸಿದೆ.
ಉಭಯ ಪಕ್ಷಗಳು ಇಂತಹ ಕೀಳು ಮಟ್ಟದ ರಾಜಕೀಯ ಪ್ರಚಾರ ನಡೆಸುತ್ತಾರೆ ಎಂದು ಊಹಿಸಿರಲಿಲ್ಲ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.




