BJP PROTEST: ಕೇಂದ್ರದ ವಿರುದ್ಧ ಸದನ ನಿರ್ಣಯ : ಬಿಜೆಪಿ ಧರಣಿ, ಗದ್ದಲ ಮುಂದುವರಿಕೆ

ಬೆಂಗಳೂರು : ತೆರಿಗೆ ಹಂಚಿಕೆ ಅನ್ಯಾಯ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯಕ್ಕೆ ಖಂಡನೆ ವ್ಯಕ್ತಪಡಿಸಿ ಬಿಜೆಪಿ ವಿಧಾನಸಭೆಯಲ್ಲಿ ಧರಣಿ ಮುಂದುವರಿಸಿದೆ.ಸದನ ಆರಂಭ ಆಗ್ತಿದ್ದಂತೆ ಧರಣಿ ನಡೆಸಿದ ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.ಗದ್ದಲ ಹಿನ್ನಲೆಯಲ್ಲಿ ಸದನವನ್ನು ಸ್ಪೀಕರ್ ಖಾದರ್ ಕೆಲಕಾಲ ಮುಂದೂಡಿದರು.ಸದನ ಮತ್ತೆ ಆರಂಭ ಆಗ್ತಿದ್ದಂತೆ ಬಿಜೆಪಿ ಸದಸ್ಯರು ಮತ್ತೆ ಧರಣಿಯನ್ನು ಮುಂದುವರಿಸಿದರು.
ಕೇಂದ್ರ ಹಾಗೂ ರಾಜ್ಯ ಜೋಡೆತ್ತುಗಳ ರೀತಿಯಲ್ಲಿ ಇರಬೇಕು.ನಾವು ಉತ್ತಮ ಸಂಪ್ರದಾಯವನ್ನು ಹಾಕಿಕೊಟ್ಟಿದ್ದೇವೆ. ಬಜೆಟ್ ನಲ್ಲಿ ಯಾವತ್ತೂ ಟೀಕೆ ಮಾಡಿಲ್ಲ. ಆದರೆ ಕೇಂದ್ರ ಸರ್ಕಾರದ ಜೊತೆಗೆ ಕಾಂಗ್ರೆಸ್ ಸಂಘರ್ಷಕ್ಕೆ ಇಳಿದಿದೆ.ನಮಗೂ ನಿರ್ಣಯ ಮಂಡನೆ ಮಾಡಲು ಅವಕಾಶ ಕೊಡಿ.ಅಥವಾ ನಿರ್ಣಯ ವಾಪಸ್ ಪಡೆಯಿರಿ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದರು.

ಆದರೆ ನಮ್ಮ ನಿರ್ಣಯವನ್ನು ಸಮರ್ಥನೆ ಮಾಡಿಕೊಂಡ ಸಚಿವ ಕೃಷ್ಣ ಬೈರೇಗೌಡ,ನಾವು ರಾಜ್ಯದ ಜನರ ಹಿತ ಕಾಪಾಡುವ ಪ್ರಯತ್ನ ಮಾಡುತ್ತಿದ್ದೇವೆ.ನಾವು ಸಂಘರ್ಷ ಮಾಡುತ್ತಿಲ್ಲ. ಕರ್ನಾಟಕದ ಜನರ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡುತ್ತಿದ್ದೇವೆ ಎಂದರು.
ರಾಜ್ಯ ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ,ಕೇಂದ್ರ ಹಾಗೂ ರಾಜ್ಯಗಳ ನಡುವೆ ಹೋರಾಟ ಸಂಘರ್ಷ ಹಿಂದಿನಿಂದಲೂ ಇದೆ. ನರೇಂದ್ರ ಮೋದಿ ರಾಜ್ಯದ ತೆರಿಗೆ ಪಾಲನ್ನು‌
42% ಏರಿಕೆ ಮಾಡಿದ್ದಾರೆ.15 ಹಣಕಾಸಿನ ಆಯೋಗದಲ್ಲಿ ರಾಜ್ಯದ ಪರವಾಗಿ ಇವರು ಧ್ವನಿ ಎತ್ತಿಲ್ಲ.ಕೇವಲ ರಾಜಕಾರಣ ಮಾಡುತ್ತಿದ್ದಾರೆ ಕಾಂಗ್ರೆಸ್ ನವರು ಎಂದು ಕಿಡಿಕಾರಿದರು.

ಕಾಂಗ್ರೆಸ್ ವಿರುದ್ಧ ಧಿಕ್ಕಾರ
ಸದನದ ಬಾವಿಗೆ ಇಳಿದ ಬಿಜೆಪಿ ಶಾಸಕರು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು.ಅಲ್ಲದೆ ಮೋದಿ ಮೋದಿ ಎಂದು ಘೋಷಣೆ ಕೂಗಿದರು.ಈ ನಡುವೆಯೇ 2024 ನೇ ಸಾಲಿನ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ ಅಂಗೀಕಾರಗೊಂಡಿತು.
ಪರ್ಯಾಯ ನಿರ್ಣಯ ಮಂಡಿಸಿದ ಅಶೋಕ್
ಇನ್ನು ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ಮಂಡಿಸಿದ ನಿರ್ಣಯದ ವಿರುದ್ಧ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಾವೂ ಕೂಡಾ ಒಂದು ನಿರ್ಣಯ ಮಂಡಿಸಿದರು.ವಿಧೇಯಕ ಅಂಗೀಕಾರ ಮಾಡುತ್ತಿರುವ ಸಂದರ್ಭದಲ್ಲಿ ಅಶೋಕ್ ನಿರ್ಣಯ ಓದಿದರು. ಆದರೆ ಇದಕ್ಕೆ ಸ್ಪೀಕರ್ ಅನುಮತಿ ಇರಲಿಲ್ಲ.

More News