POWER MONGERS DONE LETTER CAMPAIGN AGAINST ME: ಅಧಿಕಾರಕ್ಕಾಗಿ ನಮ್ಮ ಪಕ್ಷಕ್ಕೆ ಬಂದವರು ನನ್ನ ವಿರುದ್ಧ ಪತ್ರ ಚಳವಳಿ ನಡೆಸಿರಬಹುದು: ಸಚಿವೆ ಶೋಭಾ

ಚಿಕ್ಕಮಗಳೂರು : ಅಧಿಕಾರಕ್ಕಾಗಿ ನಮ್ಮ ಪಕ್ಷಕ್ಕೆ ಬಂದವರು ತಮ್ಮ ವಿರುದ್ಧ ಪತ್ರ ಚಳವಳಿ ನಡೆಸಿರಬಹುದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇರವಾಗಿ ಪಕ್ಷಾಂತರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಜವಾದ ಬಿಜೆಪಿ ಕಾರ್ಯಕರ್ತರು ಈ ರೀತಿಯ ಆರೋಪವನ್ನು ಮಾಡುವುದಿಲ್ಲ, ಯಾರೋ ಬೇರೆಯವರು ಈ ರೀತಿ ಮಾಡಿಸಿದ್ದಾರೆ. ಕೆಲವರು ಈ ಹಿಂದೆ ಇದ್ದ ಪಕ್ಷದಲ್ಲಿ ಇಂತಹ ಚಾಳಿಯನ್ನು ನಡೆಸಿದ್ದವರು ಇದನ್ನು ಮಾಡಿದ್ದಾರೆ ಎಂದು ಆರೋಪಿಸಿದರು.

ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ ಅವರು, ಪಕ್ಷ ವಿರೋಧಿ ಚಟವಟಿಕೆ ನಡೆಸಿ ರೂಢಿ ಇರುವವರೆ ಮಾಡಿರುವ ಅನುಮಾನವನ್ನು ಅವರು ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದಲ್ಲಿ ಟಿಕೆಟ್ ಕೇಳಲು ಎಲ್ಲಾರಿಗೂ ಅವಕಾಶವಿದೆ. ಆದರೆ, ಇನ್ನೊಬ್ಬರನ್ನು ತೇಜೋವಧೆ ಮಾಡುವ ಕೆಲಸ ಮಾಡಬಾರದು, ಅಭಿಯಾ, ಪತ್ರ ಚಳುವಳಿ ಯಾವುದೂ ನನಗೆ ಎಫೆಕ್ಟ್ ಆಗಲ್ಲ, ಇದೇ ರೀತಿ ಈ ಹಿಂದಿನ ಚುನಾವಣೆಯಲ್ಲೂ ಮಾಡಿದ್ದರು ಎಂದು ಆರೋಪಿಸಿದರು.
ಅಭಿವದ್ಧಿ ಆಧಾರದ ಮೇಲೆ ನಾನು ಮತದಾರರ ಬಳಿ ತೆರಳಲಿದ್ದೇನೆ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

More News