ACTRESS URVASHI AND HONEYSINGH: ಚಿನ್ನಲೇಪಿತ ಕೇಕ್ ಕತ್ತರಿಸಿ ರ್ಯಾಪರ್ ಯೋಯೋ ಹನಿಸಿಂಗ್ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಊರ್ವಶಿ ರೌಟೇಲಾ

ಮುಂಬೈ: ನಟಿ ಊರ್ವಶಿ ರೌಟೇಲಾ ತಮ್ಮ 30ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡರು. ರ್ಯಾಪರ್ ಯೋಯೋ ಹನಿ ಸಿಂಗ್ ಅವರು ಊರ್ವಶಿಯವರಿಗೆ ನೀಡಿರುವ 24 ಕ್ಯಾರೆಟ್ ಚಿನ್ನ ಲೇಪಿತ ಕೇಕ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಹನಿ ಸಿಂಗ್ ಜತೆ ಸೇರಿ ಕೇಕ್ ಅನ್ನು ಕತ್ತರಿಸಿ ಊರ್ವಶಿ ಸಂಭ್ರಮಿಸಿದರು.

ತಮ್ಮ ಹುಟ್ಟುಹಬ್ಬದ ಕೇಕ್ ಅನ್ನು ಕತ್ತರಿಸಿದ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಊರ್ವಶಿ, ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.


ಊರ್ವಶಿ ಮತ್ತು ಹನಿಸಿಂಂಗ್ 2014ರಲ್ಲಿ ಹೊರತಂದಿದ್ದ ವಿಡಿಯೋ ಆಲ್ಬಮ್ ಲವ್ ಡೋಸ್ ಸಾಕಷ್ಟು ಸದ್ದು ಮಾಡಿತ್ತು. ಅದೇ ರೀತಿಯಲ್ಲಿ ಇದೀಗ ಎರಡನೇ ಬಾರಿಗೆ ಇಬ್ಬರು ಜತೆಯಾಗಿ ಸೆಕಂಡ್ ಡೋಸ್ ವಿಡಿಯೋ ಆಲ್ಬಮ್ ಅನ್ನು ತಯಾರಿಸುತ್ತಿದ್ದಾರೆ. ಈ ಆಲ್ಬಮ್ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಇದರ ಜತೆಯಲ್ಲಿಯೇ ಊರ್ವಶಿ ಅಕ್ಷಯ್ ಕುಮಾರ್ ಅವರೊಂದಿಗೆ ವೆಲ್ಕಮ್ 3 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೆಯೇ ಬಾಬಿ ಡಿಯೋಲ್ ಅವರ ಎನ್ ಬಿಕೆ 109 ಮತ್ತು ಸನ್ನಿಡಿಯೋಲ್ ಅವರ ಬಾಪ್ ಚಿತ್ರದಲ್ಲೂ ನಟಿಸುತ್ತಿದ್ದಾರೆ.

More News