ROHIT SHARMA DOES NOT WANT SARFARAZ TO BE AHERO..?: ಹೇ ಭಾಯಿ..! ನೀನು ಇಲ್ಲಿ ಹೀರೋ ಆಗಂಬೇಕಂತಿಲ್ಲ: ಸರ್ಫರಾಜ್ ಖಾನ್ ಚಳಿ ಬಿಡಿಸಿದ ರೋಹಿತ್ ಶರ್ಮಾ

ರಾಂಚಿ : ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಲ್ಕನೇ ಟೆಸ್ಟ್ ಪಂದ್ಯ ರಾಂಚಿಯಲ್ಲಿ ನಡೆಯುತ್ತಿದೆ. ಟೀಮ್ ಇಂಡಿಯಾದ ಗೆಲುವು ಬಹುತೇಕ ಖಚಿತವಾಗಿದೆ. ಆದರೆ ಮೂರನೇ ದಿನದ ಸಂದರ್ಭದಲ್ಲಿ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಮಾಡುತ್ತಿರುವ ವೇಳೆ ನಡೆದ ಘಟನೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://twitter.com/JioCinema/status/1761704595825230101?s=20


ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಸರ್ಫರಾಜ್ ಖಾನ್ ನಡುವೆ ನಡೆದ ಸಣ್ಣ ಮಾತಿನ ಚಕಮಕಿ ಈ ವೈರಲ್ ಗೆ ಕಾರಣವಾಗಿದೆ. ಇಂಗ್ಲೆಂಡ್ ಬ್ಯಾಟಿಂಗ್ ಸಂದರ್ಭದಲ್ಲಿ ನಾಯಕ ರೋಹಿತ್ ಶರ್ಮಾ ಅವರು ಸರ್ಫರಾಜ್ ಖಾನ್ ಅವರನ್ನು ಬ್ಯಾಟ್ಸ್ ಮನ್ ಪಕ್ಕದಲ್ಲಿಯೇ ಅಂದರೆ ಸಿಲ್ಲಿ ಪಾಯಿಂಟ್ ನಲ್ಲಿ ಫೀಲ್ಡಿಂಗ್ ಗೆ ನಿಲ್ಲಿಸಿದರು.
ಆದರೆ, ಸರ್ಫರಾಜ್ ಫೀಲ್ಡರ್ ಹೆಲ್ಮೆಟ್ ಅಥವಾ ಯಾವುದೇ ಇತರ ರಕ್ಷಣಾತ್ಮಕ ಕವಚ ಧರಿಸಿರಲಿಲ್ಲ. ನೇರವಾಗಿ ಹೋಗಿ ಸಿಲ್ಲಿ ಪಾಯಿಂಟ್ ನಲ್ಲಿ ಫೀಲ್ಡಿಂಗ್ ಗೆ ನಿಂತರು. ಇದರಿಂದ ಕೋಪಗೊಂಡ ರೋಹಿತ್, ಸರ್ಫರಾಜ್ ಕರೆದು, ಹೇ ಭಾಯಿ, ನೀನು ಇಲ್ಲಿ ಹೀರೋ ಆಗಬೇಕಂತಿಲ್ಲ ಎಂದು ಹೇಳಿ ರಕ್ಷಣಾತ್ಮಕ ಕವಕ ಧರಿಸುವಂತೆ ಸೂಚಿಸಲಿದರು.
ರೋಹಿತ್ ಅವರ ಈ ನಡೆಗೆ ಸಾಮಾಜಿಕ ಜಾಲತಾಮದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಸ್ಪಂಪ್ ಮೈಕ್ ನಲ್ಲಿ ರೋಹಿತ್ ಆಡಿದ ಮಾತು ಸೆರೆಯಾಗಿದೆ. ಬಳಿಕ ಕೆ ಎಸ್ ಭರತ್ ಹೆಲ್ಮೆಟ್ ಅನ್ನು ತಂದು ಸರ್ಫರಾಜ್ ಖಾನ್ ಅವರಿಗೆ ನೀಡಿದರು.

More News

You cannot copy content of this page