THE LIFE OF THE FOREST HAS DISAPPEARED: ಅರಣ್ಯ ವಿಚಾರದಲ್ಲಿ ನಡೆದಾಡುವ ಕೋಶದಂತಿದ್ದ ಮಾಜಿ ಅರಣ್ಯಾಧಿಕಾರಿ ಕೆ ಎಂ ಚಿಣ್ಣಪ್ಪ ನಿಧನ: ಮರೆಯಾಯಿತು ಕಾಡಿನ ಜೀವ

ನಾಗರಹೊಳೆ : ನಾಗರಹೊಳೆಯ ಅಭಯಾರಣ್ಯದ ರಕ್ಷಕ ಎಂದೇ ಖ್ಯಾತಿ ಪಡೆದಿದ್ದ ಅರಣ್ಯಾಧಿಕಾರಿ ಕೆ.ಎಂ. ಚಿಣ್ಣಪ್ಪ ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ಕೊನೆಯುಸಿರು ಎಳೆದಿದ್ದಾರೆ.
ನಾಗರಹೊಳೆ ರಕ್ಷಣೆಗೇ ಜೀವ ಮುಡಿಪಾಗಿಟ್ಟಿದ್ದ ಚಿಣ್ಣಪ್ಪ ಅವರು ವಿಧಿವಶರಾಗಿದ್ದು ಅನೇಕ ಕಾಡು ಮತ್ತು ಪ್ರಾಣಿ ಪ್ರಿಯರಿಗೆ ತುಂಬಲಾರದ ನಷ್ಟವಾಗಿದೆ. ಕಾಡಿನ ಸಂರಕ್ಷಣೆಗಾಗಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದ ಅವರು, ಕೆಲವು ವಷ೯ಗಳ ಹಿಂದೆ ದುಷ್ಕಮಿ೯ಗಳು ನಾಗರಹೊಳೆ ಅರಣ್ಯಕ್ಕೆ ಬೆಂಕಿಯಿಟ್ಟಾಗ ಚಿಣ್ಣಪ್ಪ ಕಾಡು ರಕ್ಷಣೆಗೆ ಜೀವಪಣವಾಗಿಟ್ಟು ಹೋರಾಡಿದ್ದರು.
ನಾಗರಹೊಳೆ ಅರಣ್ಯಾಧಿಕಾರಿಯಾಗಿಯೂ ಚಿಣ್ಣಪ್ಪ ಕತ೯ವ್ಯ ಸ್ಮರಣೀಯವಾಗಿದೆ. 84 ವಷ೯ದ ಕೆ.ಎಂ.ಚಿಣ್ಣಪ್ಪ ಕೆಲಕಾಲ ಅನೋರೋಗ್ಯದಿಂದ ಬಳಲುತ್ತಿದ್ದು, ಇಂದು ಮಧ್ಯಾಹ್ನ 11.20 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.
ನಾಗರಹೊಳೆ ಸೇರಿದಂತೆ ಭಾರತದ ಕಾಡುಗಳ ಬಗ್ಗೆ ಅಪೂವ೯ ಮಾಹಿತಿಯನ್ನು ಹೊಂದಿದ್ದ ಚಿಣ್ಣಪ್ಪ ಅವರು, ಅರಣ್ಯ ವಿಚಾರದಲ್ಲಿ ನಡೆದಾಡುವ ಕೋಶದಂತೆ ಜೀವಿಸಿದ್ದರು. ನಾಳೆ ಪೊನ್ನಂಪೇಟೆ ತಾಲ್ಲೂಕಿನ ಕಾಕೂರು ಗ್ರಾಮದ ಸ್ವಗೃಹದಲ್ಲಿ ಚಿಣ್ಣಪ್ಪ ಅವರ ಅಂತ್ಯಕ್ರಿಯೆ ನೆರವೇರಲಿದೆ.

More News

You cannot copy content of this page