ಬಿಜೆಪಿ ಸರ್ಕಾರ ಅಂದ್ರೆ ಭಾರತೀಯ ಜೂಟಾ ಪಾರ್ಟಿ :ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪ

ಬೀದರ್ : ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕೇವಲ ಸುಳ್ಳು ಹೇಳಿಕೊಂಡು ಬಿಜೆಪಿ ಪಕ್ಷದವರು ಬರುತ್ತಿದ್ದಾರೆ, ಬಿಜೆಪಿ ಸರ್ಕಾರ ಅಂದ್ರೆ ಭಾರತೀಯ ಜೂಟಾ ಪಾರ್ಟಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕಿಡಿಕಾರಿದ್ದಾರೆ.
ಬೀದರ್ ನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಿರಂಗವಾಗಿಯೇ ಮಹಾತ್ಮಾ ಗಾಂಧಿಜೀ ಕೊಲೆ ಮಾಡಿದ ಗೋಡ್ಸೆಯ ದೇವಾಲಯ ಕಟ್ಟಲು ಹೊರಟಿರುವ ಬಿಜೆಪಿ ನಾಯಕರು,
ಗಾಂಧಿಜೀಯವರ ಸ್ವರಾಜ್ ಕಲ್ಪನೆಯನ್ನು ಪೂರ್ತಿ ಮಾಡದೆ ಗಾಂಧಿಜೀಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದರಲ್ಲದೆ, ಕರ್ನಾಟಕದ ಗೌರವವನ್ನು ಬಿಜೆಪಿಯವರು ಮಣ್ಣು ಪಾಲು ಮಾಡಿದ್ದಾರೆ ಎಂದರು‌.
ಮೂರು ಕೃಷಿ ಕಾಯ್ದೆಗಳನ್ನು ಪ್ರಧಾನಿ ವಾಪಸ್ ಪಡೆದ ವಿಚಾರವಾಗಿ ಪ್ರತಿಕ್ರಯಿಸಿದ ಈಶ್ವರ್ ಖಂಡ್ರೆ, ಇದು ಪ್ರಜಾಪ್ರಭುತ್ವಕ್ಕೆ ಹಾಗೂ ರೈತರಿಗೆ ಸಿಕ್ಕ ಜಯ, ಬೆಂಬಲ ನೀಡಿದ್ದ ವಿರೋಧ ಪಕ್ಷಗಳಿಗೂ ದೊರೆತ ಜಯ, ಮುಂಬರುವ ದಿನಗಳಲ್ಲಿ ಪಂಚ ರಾಜ್ಯಗಳ ಚುನಾವಣೆ ಇದೆ, ಹೀಗಾಗಿ ಚುನಾವಣೆಗಳಿಗೆ ಹೆದರಿ ಪ್ರಧಾನಿಯವರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದ್ದಾರೆ ಎಂದು ಆರೋಪಿಸಿದರು.

ರಸಗೊಬ್ಬರದ ಕೊರತೆ
ಕಳೆದ ಒಂದೂವರೆ ತಿಂಗಳಿನಿಂದ ರಸಗೊಬ್ಬರದ ಕೊರತೆ ರಾಜ್ಯದಲ್ಲಿ ತಾಂಡವವಾಡುತ್ತಿದೆ. ಇದರ ನಡುವೆ, ಅತಿವೃಷ್ಠಿ ರೈತರ ಬೆಳೆದ ಫಸಲು ನಾಶವಾಗಿದೆ, ಇದಕ್ಕೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ ಅವರು, ರಸಗೊಬ್ಬರ ಎಲ್ಲೂ ಸಿಗುತ್ತಿಲ್ಲಾ ಎಂದು ಈಶ್ವರ್ ಖಂಡ್ರೆ ತೀವ್ರ ವಾಗ್ದಾಳಿ ನಡೆಸಿದರು.

More News