ಬೆಂಗಳೂರು : ಎಲ್ಲಾರೂ ತಮ್ಮ ಅಭ್ಯರ್ಥಿ ಗೆಲ್ಲಬೇಕು ಅಂತಾನೆ ಸ್ಪರ್ಧೆಯಲ್ಲಿರುತ್ತಾರೆ, ಅವರಿಗೆ ಎಲ್ಲಿದೆ ವೋಟ್..? 45 ವೋಟ್ ಬೇಕಲ್ವಾ ಎಲ್ಲಿದೆ..? ವೋಟ್ ಇದ್ಯಾ..? ಮತ್ತೆ ಹೇಗೆ ಗೆಲ್ತಾರೆ..? ಏನ್ ಆತ್ಮಸಾಕ್ಷಿ ಅಂತ ಮತ ಇದೆಯಾ..? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷದವರನ್ನು ಪ್ರಶ್ನಿಸಿದರು.
ವಿಧಾನಸೌಧದಲ್ಲಿ ಇಂದು ರಾಜ್ಯ ಸಭೆಯ ತಮ್ಮ ಅಭ್ಯರ್ಥಿಗಳಿಗೆ ವೋಟು ಹಾಕಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವರ ಶಾಸಕರ ವೋಟ್ ಗಳೇ ನಮಗೆ ಬರುತ್ತದೆ ಎಂದು ಹೊಸ ಬಾಂಬ್ ಸಿಡಿಸಿದರು.
ಅವರಿಗೆ ಬೇಕಾದಂತೆ ಕಾನೂನು ಮಾಡಿಕೊಂಡಿದ್ದಾರೆ ಎಂಬ ಜೆಡಿಎಸ್ ನಾಯಕರ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರಿಗೆ ವೋಟ್ ಇಲ್ಲದಿದ್ದರೂ ಕ್ಯಾಂಡಿಡೇಟ್ ಹಾಕಿ, ನಮ್ಮ ವೋಟರ್ಸ್ ಗಳಿಗೆ ಆಸೆ ಆಮಿಷ ತೋರಿಸುತ್ತಿದ್ದಾರೆ, ಬೆದರಿಕೆ ಹಾಕ್ತಿದ್ದಾರೆ ಅಲ್ವಾ..? ಅದಕ್ಕೆ ಕೇಸ್ ಹಾಕಿದ್ದೇವೆ ಎಂದರು.
ಕೆಲವೊಂದು ಕಾನೂನು ವಿಚಾರ ನಾನು ಇಲ್ಲಿ ಮಾತಾಡಲ್ಲ ಎಂದು ಹೇಳಿಕ ಅವರು, ನಾವು ಹಾಕಿದ ಮೂರೂ ಅಭ್ಯರ್ಥಿಗಳು ಗೆಲ್ತಾರೆ ಎಂದು ಸ್ಪಷ್ಟಪಡಿಸಿದರು. ನಮ್ಮ ಪ್ರಕಾರ ಜೆಡಿಎಸ್ ಐದನೇ ಅಭ್ಯರ್ಥಿ ಹಾಕಬಾರದಿತ್ತು ಆದ್ರೂ ಹಾಕಿದ್ದಾರೆ, ಜೆಡಿಎಸ್ ಪಕ್ಷದವರಿಗೆ ಆತ್ಮನೇ ಇಲ್ಲ….ಆತ್ಮ ಸಾಕ್ಣಿ ಎಲ್ಲಿದೆ?, JD ಸೆಕ್ಯೂಲರ್ ಅಂತ ಇಟ್ಕೊಂಡಿದ್ದಾರೆ..ಯಾರ ಜೊತೆ ಸೇರ್ಕೊಂಡಿದಾರೆ..? ಅವರು ಜೆಡಿಎಸ್ ಐದನೇ ಅಭ್ಯರ್ಥಿ ಹಾಕಿದ್ರಿಂದ ನಾವು ಒಟ್ಟಾಗಿ ಬಂದು ಮತ ಹಾಕಿದ್ದೇವೆ, ನಮ್ಮ ಮೂವರು ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದರು.
ನಾವು ಯಾರಿಗೂ ಆಸೆ ಆಮಿಷ ನೀಡಿಲ್ಲ..135+1 ಮತಗಳಿವೆ, ಪಕ್ಷೇತರರ ಲತಾ ಮಲ್ಲಿಕಾರ್ಜುನ್, ದರ್ಶನ್ ಪುಟ್ಟಣ್ಣಯ್ಯ, ಪುಟ್ಡ ಸ್ವಾಮಿಗೌಡ, ಜನಾರ್ದನ ರೆಡ್ಡಿ ಇದಾರೆ. ಅವರೆಲ್ಲರೂ ನಮ್ಮ ಅಭ್ಯರ್ಥಿ ಪರ ಮತದಾನ ಮಾಡಲಿದ್ದಾರೆ. ಬೇರೆ ಪಕ್ಣಗಳಿಂದಲೂ ನಮಗೆ ಅಭಿವೃದ್ಧಿ ಮೆಚ್ಚಿ ಮತಗಳು ಬರಬಹುದು ಎಂದು ಸಿಎಂ ಅಭಿಪ್ರಾಯಪಟ್ಟರು.