ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಏನ್ ಸಾಚಾನಾ, ಅವಕಾಶವಾದಿ ಅಲ್ವಾ..?, ಇವರನ್ನ ಸಿಎಂ ಮಾಡಲಿಲ್ವಾ? ಸಿಎಂ ಆದ್ಮೇಲೆ ಒಂದು, ಆದ್ಮೇಲೆ ಇನ್ನೊಂದಾ..? ಎಂದು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ಇಂದು ರಾಜ್ಯಸಭೆ ಅಭ್ಯರ್ಥಿಗೆ ಮತ ಚಲಾವಣೆ ಮಾಡುವುದಕ್ಕಿಂತ ಮುಂಚಿತವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುದಾನ ನೀಡುವಂತವರಿಗೆ ಆತ್ಮಸಾಕ್ಷಿಯಾಗಿ ಮತ ಹಾಕುತ್ತೇನೆ, 11 ವರ್ಷದಿಂದ ಎಲ್ಲರಿಗೂ ಹಾಕಿದ್ದಿನಿ, ರಾಜ್ಯಸಭೆಗೆ ಆಯ್ಕೆಯಾದವರು ಒಂದು ರೂಪಾಯಿ ಅನುದಾನ ಕೊಟ್ಟಿಲ್ಲಾ ಎಂದು ಅಸಮಾಧಾನ ಹೊರಹಾಕಿದರು.
ಕಳೆದ ಸಾರಿ ನಿರ್ಮಲಾ ಸೀತಾರಾಮನ್ ಗೆ ಮತ ಹಾಕಿದ್ದೆ, ಆಮೇಲೆ ನಿರ್ಮಲಾ ಸೀತಾರಾಮನ್ ನನಗೆ ಅಪಾಯಿಟ್ಮೆಂಟ್ ಕೊಡಲೇ ಇಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ನನಗೆ ಯಾರು ಪ್ರಾಮಿಸ್ ಮಾಡ್ತಾರೆ ಅವರಿಗೆ ಮತಕೊಡ್ತಿನಿ ಎಂದರು.
ವೋಟ್ ಹಾಕಿಸೋ ಮೊದಲು ಪ್ರಾಮಿಸ್ ಮಾಡ್ತಾರೆ, 5 ಕೋಟಿ ಅನುದಾನ ಬರುತ್ತೆ ನಮಗೆ ಕೊಡ್ತಾರಾ, ಆತ್ಮಸಾಕ್ಷಿಯಾಗಿ ಅಲ್ಲಿ ಹೋದಂತ ಸಂದರ್ಭದಲ್ಲಿ ಹಾಕ್ತಿನಿ, ನನ್ನ ಕ್ಷೇತ್ರ ಅಭಿವೃದ್ಧಿ ಆಗಿಲ್ಲಾ ಅಂತಾ ಹೇಳಿಲ್ಲಾ, ಪಕ್ಷ ಏನ್ ಹೇಳುತ್ತೊ ಮಾಡಿದ್ದೆ ಎಂದರು.




