ST Somashekar Cross Voting: ಕೈ ಅಭ್ಯರ್ಥಿಗೆ ಮತ ನೀಡಿದ ಎಸ್ ಟಿ.ಸೋಮಶೇಖರ್ : ಅನರ್ಹತೆ ತೂಗುಗತ್ತಿ ಭೀತಿ

ಬೆಂಗಳೂರು : ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ವಿರುದ್ಧ ಪಕ್ಷಾಂತರ ನಿಷೇಧ ಕಾಯಿದೆ ಯಡಿ ಕ್ರಮ ಆಗುತ್ತಾ? ಎಂಬ ಪ್ರಶ್ನೆ ಉದ್ಭವಿಸಿದೆ.ಎಸ್ ಟಿ ಎಸ್ ನಡೆ ಬಿಜೆಪಿಗೆ ತೀವ್ರ ಮುಜುಗರ ಉಂಟು ಮಾಡಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಕಾನೂನಾತ್ಮಕ ಕ್ರಮಗಳ ಬಗ್ಗೆಯೂ ಚರ್ಚೆಗಳು ನಡೆಯುತ್ತಿದೆ.

ಇದೇ ವಿಚಾರವಾಗಿ ಕಾಂಗ್ರೆಸ್
ಶಾಸಕ ಎ.ಎಸ್ ಪೊನ್ನಣ್ಣ ಮಾತನಾಡಿ, ಇದು ಒಪನ್ ಬ್ಯಾಲಟ್ ಆಗಿದೆ. ಇಲ್ಲಿ ವಿಪ್ ಜಾರಿ ಮಾಡೋಕೆ ಆಗೋದಿಲ್ಲ. ಇಂಥವರಿಗೆ ಮತ ಹಾಕಿ ಎಂದು ಮನವಿ ಮಾಡಬಹುದು ಅಷ್ಟೇ ಎಂದರು.

ಇಲ್ಲಿ ಇಂತವರಿಗೆ ಮತ ಹಾಕಿ ಎಂದು ಕಡ್ಡಾಯ ಮಾಡಲು ಬರುವುದಿಲ್ಲ.ಹಾಗಾಗಿ ಅಡ್ಡ ಮತದಾನದಿಂದ ಶಾಸಕರಿಗೆ ಯಾವುದೇ ಸಮಸ್ಯೆ ಆಗಲ್ಲ. ಈ ಕುರಿತಾಗಿ ಸುಪ್ರೀಂ ಕೋರ್ಟ್ ನಲ್ಲಿ ಹಲವು ಉದಾಹರಣೆಗಳಿವೆ.ಖುಷ್ವಂತ್ ಸಿಂಗ್ ಪ್ರಕರಣದಲ್ಲಿ ಉಲ್ಲೇಖವಾಗಿದೆ ಎಂದರು.

ಇಲ್ಲಿ ಚಿಹ್ನೆಗಳು ಸಹ ಇರೋದಿಲ್ಲ.ಇದು ಪಕ್ಷಾಧಾರಿತ ಚುನಾವಣೆ ಅಲ್ಲ.ಅನರ್ಹತೆ ಆಗಲಿ ಪಕ್ಷಾಂತರ ನಿಷೇಧ ಕಾಯಿದೆ ಆಗಲಿ ಅನ್ವಯಿಸೋದಿಲ್ಲ ಎಂದು ತಿಳಿಸಿದರು.

ಇನ್ನು ಬಿಜೆಪಿ ಎಸ್ ಟಿ ಸೋಮಶೇಖರ್ ವಿರುದ್ಧ ಸ್ಪೀಕರ್ ಗೆ ದೂರು ನೀಡುವ ಸಾಧ್ಯತೆ ಇದೆ.ಅಥವಾ ಪಕ್ಷದಿಂದ ಉಚ್ಛಾಟನೆ ಮಾಡುವ ಸಾಧ್ಯತೆ ಇದೆ.ಅದರ ಹೊರತಾಗಿ ಕಾನೂನಾತ್ಮಕ ಕ್ರಮ ಕೈಗೊಳ್ಳುವ ಅವಕಾಶ ಕಡಿಮೆ ಇದೆ.

More News