DEEPIKA PADUKONE AND RANVEER SINGH ANNOUNCED ABOUT BABY: ಸೆಪ್ಟಂಬರ್ ನಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ : ದೀಪಿಕಾ-ರಣವೀರ್ ದಂಪತಿ

ಮುಂಬೈ: ಬಾಲಿವುಡ್ ತಾರಾ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ದೀಪಿಕಾ ಮತ್ತು ರಣವೀರ್ ದಂಪತಿ ಹಾಕಿರುವ ಪೋಸ್ಟ್ ಇದಕ್ಕೆ ಸಮರ್ಥನೆ ನೀಡಿದ್ದು, ದೀಪಿಕಾ ಗರ್ಭೀಣಿಯಾಗಿದ್ದು, ಸೆಪ್ಟಂಬರ್ 2024 ಎಂದು ಬರೆದುಕೊಂಡಿದ್ದಾರೆ. ಹಾಗೆಯೇ ಮಗುವಿನ ಉಡುಪಿನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಇದರಿಂದ ದೀಪಿಕಾ ಅವರು ಸೆಪ್ಟಂಬರ್ ನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ.
ಈ ಹಿಂದೆಯೇ ಸಾಕಷ್ಟು ಉಹಾಪೋಹಗಳು ಹರಿದಾಡುತ್ತಿದ್ದವು. ಆದರೆ ಇದನ್ನು ಅವರು ಸ್ಪಷ್ಟನೆ ನೀಡಿರಲಿಲ್ಲ. ಮೊನ್ನೆ ನಡೆದ 77 ನೇ ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ರೆಡ್ ಕಾರ್ಪೆಟ್ ಮೇಲೆ ಅವರು ನಡೆಯುವ ಸಂದರ್ಭದಲ್ಲಿ ತಮ್ಮ ಹೊಟ್ಟೆಯ ಭಾಗವನ್ನು ಮರೆಮಾಚಿದ್ದರು. ಆ ಬಳಿಕ ಅವರು ಗರ್ಭಿಣಿಯಾಗಿರಬಹುದು ಎಂದು ಸಾಕಷ್ಟು ವದಂತಿಗಳು ಹಬ್ಬಿದ್ದವು.
ಇದಕ್ಕೆ ಇಂದು ಫುಲ್ ಸ್ಟಾಪ್ ಬಿದ್ದಿದ್ದು, ಅವರು ಗರ್ಭೀಣಿಯಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. 2018ರಲ್ಲಿ ದೀಪಿಕಾ ಮತ್ತು ರಣವೀರ್ ಮದುವೆಯಾಗಿದ್ದರು. ಈ ಹಿಂದೆ ಸುಮಾರು 5 ವರ್ಷಗಳ ಕಾಲ ಅವರು ಡೇಟಿಂಗ್ ನಲ್ಲಿದ್ದರು.

More News