ONE CHAI PLEASE BILL GATES: ಒಡಿಶಾದ ಬೀದಿ ಬದಿ ಚಹವಾಲಾಗೆ ಬಿಲ್ ಗೇಟ್ಸ್ ಚಹಾ ನೀಡಲು ಕೋರಿಕೆ

ನವದೆಹಲಿ : ಭಾರತ ದೇಶದ ಪ್ರವಾಸದಲ್ಲಿರುವ ಮೈಕ್ರೋಸಾಪ್ಟ್ ದಿಗ್ಗಜ, ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ದೇಶದ ನಾನಾ ಭಾಗಗಳಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಬುಧವಾರದಂದು ಒಡಿಶಾದಲ್ಲಿನ ಕೊಳಗೇರಿ ಪ್ರದೇಶದ ಜನರನ್ನು ಭೇಟಿಯಾಗಿ ಸಂವಾದ ನಡೆಸಿದರು.

ನಂತರ ಅವರು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೊಂದಿಗೆ ರೈತರ ಸಬಲೀಕರಣಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು. ಇವೆಲ್ಲಾ ಕಾರ್ಯಕ್ರಮವಾದ ಬಳಿಕ ಅವರು ಚಹಾ ಕುಡಿಯಲು ಹೋಗಿದ್ದು ರಸ್ತೆ ಬದಿಯ ಟೀ ಸ್ಟಾಲ್ ನಲ್ಲಿ.
ರಸ್ತೆ ಬದಿಯ ಚಹಾ ಅಂಗಡಿಯಲ್ಲಿ ಒನ್ ಚಹಾ ಪ್ಲೀಸ್ ಎಂದು ಹೇಳುವ ವಿಡಿಯೋವನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಬಿಲ್ ಗೇಟ್ಸ್ ಅವರ ಸಾಮಾನ್ಯರಂತೆ ಸಾಮಾನ್ಯರಾಗಿ ರಸ್ತೆಯಲ್ಲಿ ಬದಿಯಲ್ಲಿ ಚಹಾ ಸೇವಿಸಿರುವ ಈ ವಿಡಿಯೋ ಕ್ಷಣಾರ್ಧದಲ್ಲಿ ಲಕ್ಷಾಂತರ ವೀವ್ಸ್ ಪಡೆದು, ತೀವ್ರ ವೈರಲ್ ಆಗಿದೆ.
ಬಿಲ್ ಗೇಟ್ಸ್ ಅವರು ಒನ್ ಚಹಾ ಪ್ಲೀಸ್ ಎಂದು ಹೇಳಿದ ಬಳಿಕ ಚಹಾ ಅಂಗಡಿಯವರು ತನ್ನದೇ ಆದ ಸ್ಟೈಲ್ ನಲ್ಲಿ ಚಹಾ ತಯಾರಿಸಿ, ಬಿಲ್ ಗೇಟ್ಸ್ ಅವರಿಗೆ ನೀಡಿದ್ದರು. ಅವರು ಅದನ್ನು ಸೇವಿಸುವ ವಿಡಿಯೋ ವೈರಲ್ ಆಗಿದೆ. ಬಿಲ್ ಗೇಟ್ಸ್ ಅವರು ಸ್ಥಳೀಯ ಸಂಸ್ಕೃತಿಯನ್ನು ಆನಂದಿಸಿ ಬೆಂಬಲ ವ್ಯಕ್ತಪಡಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಮೆಚ್ಚುಗೆ ವ್ಯಕ್ತವಾಗಿದೆ.

More News