ನವದೆಹಲಿ : ಟೆಸ್ಟ್ ಕ್ರಿಕೆಟ್ ನಲ್ಲಿ ಆಟಗಾರರ ಆಸಕ್ತಿಯನ್ನು ಹೆಚ್ಚಿಸಲು ಭಾರತೀಯ ಕ್ರಿಕೆಟ್ ಮಂಡಳಿ (BCCI) ಹೊಸದೊಂದು ಯೋಜನೆ ರೂಪಿಸುತ್ತಿದೆ. ಆಟಗಾರರಿಗೆ ಅಧಿಕ ಸಂಖ್ಯೆ ಆರ್ಥಿಕ ಪ್ರೋತ್ಸಾಹ ನೀಡಲು ಬಿಸಿಸಿಐ ಮುಂದಾಗಿದೆ ಎಂದು ತಿಳಿದುಬಂದಿದೆ.
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹಾಗೂ ಮುಖ್ಯ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರೊಂದಿಗೆ ಬಿಸಿಸಿಐ ಆಡಳಿತ ಮಂಡಳಿ ಆಗಾಗಲೇ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದೆ ಎನ್ನಲಾಗಿದೆ.
ಆಟಗಾರನೊಬ್ಬ ವರ್ಷ ಪೂರ್ತಿ ಎಲ್ಲಾ ರಣಜಿ ಪಂದ್ಯಗಳನ್ನು ಆಡಿದರೆ 75 ಲಕ್ಷ, ಅದೇ ಆಟಗಾರ ಒಂದು ವರ್ಷದಲ್ಲಿ ಎಲ್ಲಾ ಅಂತರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನು ಆಡಿದರೆ ಅಂತಹ ಆಟಗಾರನಿಗೆ 15 ಕೋಟಿ ರೂಪಾಯಿ ನೀಡಲು ಬಿಸಿಸಿಐ ಮುಂದಾಗಿದೆ.

ಇದರಿಂದ ಆಟಗಾರರನ್ನು ಕ್ರಿಕೆಟ್ ಆಟವಾಡಲು ಹುರಿದುಂಬಿಸಲಾಗುವುದು, ಹಾಗೆಯೇ ತಮ್ಮ ನೆಚ್ಚಿನ ಆಟಗಾರನನ್ನು ನೋಡಲು ಪ್ರೇಕ್ಷಕರನ್ನು ಆಕರ್ಷಿಸುವ ಉದ್ದೇಶ ಹೊಂದಲಾಗಿದೆ ಎನ್ನಲಾಗಿದೆ.
2024-25 ನೇ ಸಾಲಿನ ಒಪ್ಪಂದದಲ್ಲಿ ಒಟ್ಟು 30 ಆಟಗಾರರು ಬಿಸಿಸಿಐ ನಾನಾ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ರಣಜಿ ಆಟವಾಡದೇ ಇರುವ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಪಟ್ಟಿಯಿಂದ ಹೊರಗಿಡಲಾಗಿದೆ.

ಎ+ ಶ್ರೇಣಿಯಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ
ಎ ಶ್ರೇಣಿಯಲ್ಲಿ ಮೊಹಮದ್ ಶಮಿ, ಆರ್ ಅಶ್ವಿನ್, ಮೊಹಮ್ಮದ್ ಸಿರಾಜ್, ಕೆ ಎಲ್ ರಾಹುಲ್, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ ಸ್ಥಾನ ಪಡೆದಿದ್ದಾರೆ.
ಬಿ ಶ್ರೇಣಿಯಲ್ಲಿ ರಿಷಬ್ ಪಂತ್, ಸೂರ್ಯ ಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಸ್ಥಾನ ಪಡೆದಿದ್ದಾರೆ.
ಸಿ ಶ್ರೇಣಿಯಲ್ಲಿ ರಿಂಕು ಸಿಂಗ್, ತಿಲಕ್ ವರ್ಮಾ, ರಜತ್ ಪಾಟಿದಾರ್, ಅವೇಶ್ ಖಾನ್, ಪ್ರಸಿದ್ದ ಕೃಷ್ಣ, ಕೆ ಎಸ್ ಭರತ್, ಅರ್ಷದೀಪ್ ಸಿಂಗ್, ಸಂಜು ಸ್ಯಾಮ್ಸನ್, ಮುಖೇಶ್ ಕುಮಾರ್, ವಾಷಿಂಗ್ಟನ್ ಸುಂದರ್, ಜಿತೇಶ್ ಶರ್ಮಾ, ರವಿ ಬಿಷ್ಣೋಯ್, ಶಿವಂ ಜುಬೆ, ಶಾರ್ದೂಲ್ ಠಾಕೂರ್, ರುತುರಾಜ್ ಗಾಯಕ್ವಾಡ್, ಸ್ಥಾನ ಪಡೆದಿದ್ದಾರೆ.




