RAMESHWARAM CAFE BLAST IS NOT FROM CYLINDER: ರಾಮೇಶ್ವರಂ ಕೆಫೆಯಲ್ಲಿ ಆಗಿರೋದು ಸಿಲಿಂಡರ್ ಸ್ಫೋಟವಲ್ಲ: ಎನ್ಐಎ ತನಿಖೆಗೆ ಯತ್ನಾಳ್ ಆಗ್ರಹ

ಬೆಂಗಳೂರು : ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಸ್ಫೋಟ ಇದೀಗ ಬೆಂಗಳೂರಿಗರಿಗೆ ಆತಂಕಕ್ಕೆ ಕಾರಣವಾಗಿದೆ. ಇದು ಸಿಲಿಂಡರ್ ಸ್ಫೋಟವಲ್ಲ ಎಂದು ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಇದು ಸಿಲಿಂಡರ್ ಸ್ಫೋಟವಲ್ಲ, ಎನ್ಐಎಯಿಂದ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಘಟನೆಯಲ್ಲಿ ಹೋಟೆಲ್ ಸಿಬ್ಬಂದಿ ಸೇರಿದಂತೆ ಐವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.

ಗ್ರಾಹಕನೊಬ್ಬ ಬಿಟ್ಟುಹೋದ ಬ್ಯಾಗ್ ನಿಂದ ಸ್ಪೋಠ ಸಂಭವಿಸಿದೆ ಹೊರತು, ಸಿಲಿಂಡರ್ ಸ್ಫೋಟದಿಂದಲ್ಲ ಎಂದು ಹೇಳಿದ್ದಾರೆ. ಕೆಲದಿನಗಳ ಹಿಂದೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದನ್ನು ಕಾಂಗ್ರೆಸ್ ಸಮರ್ಥನೆ ಮಾಡಿಕೊಂಡಿದೆ ಎಂದು ಹೇಳಿರುವ ಯತ್ನಾಳ್, ಗೃಹ ಸಚಿವರ ರಾಜೀನಾಮೆಗೆ ಕರ್ನಾಟಕ ಆಗ್ರಹಿಸುತ್ತಿದೆ ಎಂದಿದ್ದಾರೆ.

ರಿಸೈನ್ ಪರಮೇಶ್ವರ್ ಎಂಬ ಹ್ಯಾಷ್ ಟ್ಯಾಗ್ ಬಳಸಿ ಯತ್ನಾಳ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

More News

You cannot copy content of this page