THREE DEATH: ಟ್ಯಾಕ್ಟರ್ ಸಾಲದ ಕಂತು ಕಟ್ಟುವ ವಿಚಾರದಲ್ಲಿ ನಡೆದ ಜಗಳಿಂದ ಬೇಸತ್ತು ಮೂವರು ಆತ್ಮಹತ್ಯೆ

ಗದಗ: ಕೌಟುಂಬಿಕ ಕಲಹಕ್ಕೆ ಒಂದೇ ಕುಟುಂಬದ ಮೂವರು ಬಲಿಯಾಗಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದಲ್ಲಿ ಜರುಗಿದೆ.
ಸಾಲದ ವಿಷಯವಾಗಿ ಉಂಟಾದ ಮನಸ್ತಾಪ ರೈಲು ಹಳಿಗೆ ಹಾರಿ ರೇಣುಕಾ ತೇಲಿ (49), ತಾಯಿಯನ್ನ ಕಾಪಾಡಲು ಹೋಗಿ ಹಳಿಗೆ ಬಿದ್ದ ಮಂಜುನಾಥ್ (22) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಅಕ್ಕನ ಸಾವಿನ ವಿಷಯ ತಿಳಿದು ಮನೆಯಲ್ಲೇ ನೇಣು ಬಿಗಿದುಕೊಂಡ ಸಾವಕ್ಕ ತೇಲಿ (47) ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಾವೇರಿ ಜಿಲ್ಲೆಯ ಎಲವಿಗಿ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಮೂವರನ್ನು ಕಳೆದುಕೊಂಡು ಕುಟುಂಬ ಕಂಗಲಾಗಿದ್ದು, ಟ್ರ್ಯಾಕ್ಟರ್ ಸಾಲ ಕಟ್ಟುವ ವಿಷಯವಾಗಿ ಜಗಳವಾಡಿಕೊಂಡಿದ್ದ ಕುಟುಂಬ ಸದಸ್ಯರು. ಸಾವಕ್ಕ, ರೇಣುಕಾ ಮಧ್ಯ ಟ್ರ್ಯಾಕ್ಟರ್ ಸಾಲದ ವಿಚಾರವಾಗಿ ಗಲಾಟೆ ನಡೆದಿತ್ತು ಎಂದು ತಿಳಿದುಬಂದಿದೆ.
ಬ್ಯಾಂಕ್ ನಿಂದ 4 ಲಕ್ಷ ಸಾಲ ಪಡೆದು ಟ್ರ್ಯಾಕ್ಟರ್ ಖರೀದಿಸಿದ್ದರು. ಇದರ ಕಂತು ಕಟ್ಟುವ ವಿಚಾರದಲ್ಲಿ ನಡೆದ ಜಗಳ ಈ ಸಾವಿಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಕ್ಷ್ಮೇಶ್ವರ ಪೊಲೀಸರು ದೂರು ದಾಖಲಿಸಿ ತನಿಖೆ ಕೊಂಡಿದ್ದಾರೆ.

More News

You cannot copy content of this page