WHO ARE THEY SAWADA FOUNDATION..?:: ಸಂವಾದ ಸಂಸ್ಥೆ ರಿಪೋರ್ಟ್ ರೆಡಿ ಮಾಡಿರುವುದು ದೇಶದ್ರೋಹದ ಕೆಲಸ: ಬಿಜೆಪಿ ಆರ್ ಎಸ್ ಎಸ್ ತಾಳಕ್ಕೆ ಕುಣಿಯುತ್ತಿದೆ: ಸಚಿವ ಪ್ರಿಯಾಂಕ ಖರ್ಗೆ

ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ ಧ್ವನಿಯ ಗುರುತು ಪತ್ತೆ ಹಚ್ಚಿರುವ ಸಂವಾದ ಫೌಂಡೇಶನ್ ಗೆ ಇದರಲ್ಲಿ ಏನು ಆಸಕ್ತಿ ? who are they ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ಮತ್ತು ಆರ್ ಎಸ್ ಎಸ್ ಅನ್ನು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಾದ ಸಂಸ್ಥೆ ಆರ್ ಎಸ್ ಎಸ್ ನವರು ಭಜನೆ ಮಾಡುವ ಸಂಸ್ಥೆಯಾಗಿದೆ ಎಂದು ಕಿಡಿಕಾರಿದರು. ಇದು ಯಾವ ರೀತಿ ಸಾಮಾಜಿಕ ಜಾಲತಾಣದಲ್ಲಿ ಜಾತಿ-ಜಾತಿಗಳ ನಡುವೆ ಜಗಳ ಹಚ್ಚುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ, ಹೂ ಆರ್ ದೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಪುಟೇಜ್ ಕೊಡೋದಕ್ಕೆ ಲ್ಯಾಬ್ ಟೆಸ್ಟ್ ಮಾಡುವುದಕ್ಕೆ ಹೂ ಆರ್ ದೇ?, ನಾನೂ ಖಾಸಗಿ ಸಂಸ್ಥೆಗಳಿಗೆ ಕೊಟ್ಟು ನಾನೂ ರಿಪೋರ್ಟ್ ತೆಗೆದುಕೊಂಡಿದ್ದೇನೆ, ನಾನೂ ಅದನ್ನು ಸಾರ್ವಜನಿಕವಾಗಿ ಪಬ್ಲಿಷ್ ಮಾಡಬಹುದಲ್ಲ? ನಾನೂ ಹಾಗೆ ಮಾಡಿಲ್ಲ, ನಾನೂ ಯಾವುದೋ ರಿಪೋರ್ಟ್ ತಂದು ಹೇಳಬಹುದಲ್ಲ? ಬಿಜೆಪಿಯವರು ಮಾಡಿದ್ದು ನಿಜವಾದ ದೇಶ ದ್ರೋಹದ ಕೆಲಸ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಮಾಜದಲ್ಲಿ ಆತಂಕ ಇರಬೇಕು ಅಂತ ಇವರು ಯಾಕೆ ಬಯಸ್ತಾ ಇದ್ದಾರೆ? ಸಂವಾದ ಫೌಂಡೇಷನ್ ರಿಪೋರ್ಟ್… ತೆಗೆದುಕೊಳ್ಳೋದಕ್ಕೆ ಯಾರು ಇವರು? ಅವರಿಗೇನು ಆಸಕ್ತಿ? ಸರ್ಕಾರ ಪದೇ ಪದೇ ಎಫ್ಎಸ್ಎಲ್ ರಿಪೋರ್ಟ್ ನೋಡುವುದಕ್ಕೆ ಕಾರಣ ಯಾವುದೇ ಗೊಂದಲ ಇರಬಾರದು ಅಂತ, ಇವರು ಯಾವ ಫೂಟೇಜ್ ಕೊಟ್ಟಿದ್ದಾರೋ?, ಗೃಹ ಇಲಾಖೆ ಇದರ ಬಗ್ಗೆ ವರದಿ ಕೊಡಬೇಕೇ ಹೊರತು ಸಂವಾದ ಫೌಂಡೇಶನ್ ಅಲ್ಲ ಎಂದರು.
ಬಿಜೆಪಿ ಜವಾಬ್ದಾರಿಯುತ ಪಕ್ಷವಾಗಿ ಸಂವಾದ ಹಾಕಿದ ತಾಳಕ್ಕೆ ಕುಣಿತಾರಲ್ಲ ಇವರಿಗೆ ನಾಚಿಕೆ ಬೇಡ್ವಾ? ಬಿಜೆಪಿಯವರು ಖಾಸಗಿ ಸಂಸ್ಥೆಗಳನ್ನು ಇಟ್ಟುಕೊಂಡು ಖಾಸಗಿಯಾಗಿ ಫೋರೆನ್ಸಿಕ್ ವರದಿಗಳನ್ನು ತರಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡುವುದೇ ಮೊದಲನೇ ದೇಶದ್ರೋಹದ ಕೆಲಸ, ಇದು ಸಾಮಾನ್ಯ ಪ್ರಕರಣ ಅಲ್ಲ ಎಂದು ಕಿಡಿಕಾರಿದರು.
ದೇಶದ್ರೋಹದ ಘೋಷಣೆ ಕೂಗಿದ್ದಾರೆ ಅಂತ ಹೇಳ್ತಾ ಇದ್ದಾರೆ ಅದಕ್ಕೆ ಸರ್ಕಾರ ಉತ್ತರ ಕೊಡಬೇಕು, ಬಿಜೆಪಿಯವರು ಖಾಸಗಿ ಸಂಸ್ಥೆಗಳ ಹತ್ತಿರ ಹೋಗಿ ಅದನ್ನು ಪಬ್ಲಿಕ್ ಮಾಡ್ತಾ ಇದ್ದಾರಲ್ಲ .ಅದು ಮೊದಲನೇ ದೇಶದ್ರೋಹದ ಕೆಲಸ, ಕ್ಲೂ ಫಾರ್ ಎವಿಡೆನ್ಸ್ ಫೋರೆನ್ಸಿಕ್ ಲ್ಯಾಬ್ ಅನ್ನೋ ಸಂಸ್ಥೆಯ ಕ್ರೆಡಿಬಿಲಿಟಿ ಏನು? ಆ ಸಂಸ್ಥೆಗೆ ಸರ್ಕಾರದ ಸರ್ಟಿಫಿಕೇಶನ್ ಇದೆಯೋ, ತರಬೇತಿ ಇದೆಯೋ ನನಗೆ ಗೊತ್ತಿಲ್ಲ, ಇದ್ದರೂ ಕೂಡ ಆ ಲ್ಯಾಬ್ ಈ ವಿಚಾರದಲ್ಲಿ ಸ್ಥಳೀಯ ಪೊಲೀಸರಿಗೆ ಮತ್ತು ಸರ್ಕಾರದ ಗಮನಕ್ಕೆ ತಂದು ವರದಿ ಕೊಡಬೇಕಿತ್ತು..ಅಷ್ಟು ಮೆಚುರಿಟಿ ಸಂಸ್ಥೆಗೆ ಇರಬೇಕಾಗಿತ್ತು ಎಂದರು.
ಬಿಜೆಪಿಯವರು ಫೋರೆನ್ಸಿಕ್ ಲ್ಯಾಬ್ ಗೆ ಕೊಟ್ಟಿರುವ ಫೂಟೇಜ್ ಯಾವುದು? ಇಂಟರ್ನೆಟ್ ನಲ್ಲಿ ವಿಡಿಯೋ ಕ್ವಾಲಿಟಿ ಸಪ್ರೆಸ್ ಆಗೆ ಆಗುತ್ತದೆ, ಯಾವ ಫೂಟೇಜ್ ಕೊಟ್ಟಿದ್ದಾರೆ ಮೊದಲನೇ ಪ್ರಶ್ನೆ, ರಾ ಫೂಟೇಜ್ ಕೊಟ್ಟಿದ್ರೆ ಇವರಿಗೆ ರಾ ಫೂಟೇಜ್ ಎಲ್ಲಿಂದ ಸಿಕ್ತು?, ಅವತ್ತು ಮಂಡ್ಯದಲ್ಲಿ ಬಿಜೆಪಿಯವರು ಪಾಕಿಸ್ತಾನ ಪರ ಘೋಷಣೆ ಕೂಗಿದ್ರು, ಅವರ ಮೇಲೆ ನಾವೂ ಕೇಸ್ ಹಾಕಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇವರು ಕೊಟ್ಟ ವರದಿಯಲ್ಲಿ ಹೈಲಿ ಪ್ರೊಬ್ಯಾಬಿಲಿಟಿ ಅಂತ ಇದೆ, ರೊಕ್ಕ ಕೊಟ್ಟರೆ ಯಾರು ಬೇಕಾದರೂ ವರದಿ ಕೊಡ್ತಾರೆ, ಸಂವಾದ ರಿಪೋರ್ಟ್ ನಲ್ಲಿ ಗೃಹ ಸಚಿವರು ಹೇಳಿದ್ದು ಸರಿಯಾಗಿದೆ, ನಮಗೂ ಸೈಬರ್ ಕಂಪನಿಗಳು, ಆ್ಯನಿಮೇಷನ್ ಕಂಪನಿಗಳು ಗೊತ್ತಿದೆ, ನಾನು ಜವಾಬ್ದಾರಿಯುತ ಸ್ಥಾನದಲ್ಲಿದ್ದು ನಾನು ಮಾಡಿಸಿದ ವರದಿ ಬಹಿರಂಗ ಮಾಡಿದ್ದೀನಾ? ಎಂದು ಕಿಡಿಕಾರಿದರು.
ಖಾಸಗಿ ಸಂಸ್ಥೆ, ಪೌಂಡೇಷನ್ ಸರ್ಕಾರದ ಅನುಮತಿ ಪಡೆದುಕೊಳ್ಳಬೇಕಿತ್ತು, ಇದೇ ಪ್ರೊಬ್ಯಾಬಲ್ ವರದಿಗೆ ಬಿಜೆಪಿ ಇಷ್ಟೆಲ್ಲ ಕುಣಿಯಬೇಕಾ? ಸಂವಾದ ಫೌಂಡೇಶನ್ ಗೆ ಯಾಕಿಷ್ಟು ಆಸಕ್ತಿ? ಇವರ ಉದ್ದೇಶ ಬಹಳ ಕ್ಲಿಯರ್ ಇದೆ ಸಮಾಜದಲ್ಲಿ ಆತಂಕ ಇದ್ದಾಗಲೆಲ್ಲ ಬಿಜೆಪಿಗೆ ರಾಜಕೀಯವಾಗಿ ಲಾಭ ಆಗಿದೆ ಎನ್ನೋ ಯುನಿವರ್ಸಿಟಿ ರಿಪೋರ್ಟ್ ಇದೆ, ಸಮಾಜದಲ್ಲಿ ಗೊಂದಲ ಇದ್ದಾಗಲೆಲ್ಲ ರಾಜಕೀಯ ಲಾಭ ಬಿಜೆಪಿಗೆ ಆಗುತ್ತದೆ ಎಂದರು.
ದೀಪ ಹಚ್ಚುವ ಕೆಲಸ ಮಾಡಿಲ್ಲ, ಬರೀ ಬೆಂಕಿ ಹಚ್ಚುವ ಕೆಲಸ
ಸಂವಾದ ಯಾವತ್ತೂ ದೀಪ ಹಚ್ಚುವ ಕೆಲಸ ಮಾಡಿಲ್ಲ, ಬರೀ ಬೆಂಕಿ ಹಚ್ಚುವ ಕೆಲಸವನ್ನೇ ಮಾಡಿದೆ, ಆ ರಿಪೋರ್ಟ್ ಇಟ್ಟುಕೊಂಡು ಕುಣಿಯುತ್ತಿದ್ದಾರೆ ಬಿಜೆಪಿಯವರು.. ಬಿಜೆಪಿಯವರು ಹತಾಶರಾಗಿದ್ದಾರೆ, ಕೇಶವ ಶಿಲ್ಪ ಹಾಗೂ ಕೇಶವ ಕೃಪಾಗೆ ತೋರಿಸಬೇಕು ಇವರು ಜೀವಂತವಾಗಿದ್ದೇವೆ ಅಂತ, ನಾವು ಬದುಕಿದ್ದೇವೆ ಇನ್ನೂ, ಸತ್ತೋಗಿಲ್ಲ ಅಂತ ಬಿಜೆಪಿಯವರು ಮೋದಿ ಅಮಿತ್ ಶಾಗೆ ತೋರಿಸಬೇಕಿದೆ ಎಂದು ವ್ಯಂಗ್ಯವಾಡಿದರು.
ಅದಕ್ಕೇ ಅವರ ಕಿವಿಗೆ ಏನು ಇಂಪಾಗಿ ಕೇಳಿಸುತ್ತದೆಯೋ, ಆರ್ ಎಸ್ ಎಸ್ ಕಿವಿಗೆ ಏನು ಇಂಪಾಗಿ ಕೇಳಿಸುತ್ತದೆಯೋ ಅದನ್ನು ಮಾತ್ರ ಹೇಳೋದು, ಸಂವಾದದ ತಾಳಕ್ಕೆ ಅವರು ಕುಣಿಲಿ ಆದರೆ ಸರ್ಕಾರ ಅವರ ಮಾತನ್ನು ಕೇಳುವುದಕ್ಕೆ ರೆಡಿ ಇಲ್ಲ ಎಂದರು.

More News