SUPREME COURT JUDGEMENT: ಶಾಸಕರು, ಸಂಸದರು ಲಂಚ ಪಡೆದರೆ ಯಾವುದೇ ರಕ್ಷಣೆಯಿಲ್ಲ : 1998ರ ತೀರ್ಪನ್ನು ರದ್ದು ಮಾಡಿದ ಸುಪ್ರೀಂಕೋರ್ಟ್

ನವದೆಹಲಿ : ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದ್ದು, ಇದು ಶಾಸಕರು ಮತ್ತು ಸಂಸದರಿಗೆ ಸಂಬಂಧಿಸಿದ್ದಾಗಿದೆ. ಶಾಸಕರು ಮತ್ತು ಸಂಸದರು ಸೇರಿದಂತೆ ತಮ್ಮ ಮತಗಳಿಗೆ ಮತ್ತು ಸಂಸತ್ತಿನಲ್ಲಿ ಭಾಷಣಕ್ಕಾಗಿ ಹಣದ ಲಾಭವನ್ನು ಪಡೆದರೆ ಭ್ರಷ್ಟಾಚಾರ ತಡೆ ಕಾಯಿದೆಯಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸುಪ್ರೀಂಕೋರ್ಟ್ ನ ಏಳು ನ್ಯಾಯಾಧೀಶರ ಪೀಠ ಆದೇಶ ನೀಡಿದೆ.
ಹಾಗೆಯೇ 1998ರ ತೀಪ್ರನ್ನು ರದ್ದು ಪಡಿಸಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪನ್ನು ಮುಖ್ಯನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ನೇತೃತ್ವದ ಏಳು ನ್ಯಾಯಮೂರ್ತಿಗಳ ಸಂವಿಧಾನಿಕ ಪೀಠ ಇಂದು ತೀರ್ಪು ನೀಡಿದೆ. ನೀಡಿದೆ. ಮುಖ್ಯನ್ಯಾಯಮೂರ್ತಿ ಅವರ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ, ಎಂಎಂ ಸುಂದರೇಶ್, ಪಿ ಎಸ್ ನರಸಿಂಹ, ಜೆಬಿ ಪರ್ಡಿವಾಲ, ಸಂಜಯ್ ಕುಮಾರ್ ಮತ್ತು ಮನೋಜ್ ಮಿಶ್ರಾ ಇದ್ದರು.
ಶಾಸಕರಿಗೆ ಮತ್ತು ಸಂಸದರಿಗೆ ಭ್ರಷ್ಟಾಚಾರ ಎಸಗಿದಾಗ ಅವರ ವಿರುದ್ಧ ತನಿಖೆ ನಡೆಯದಂತೆ ಕಾನೂನು ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಜನಪ್ರತಿನಿಧಿಗಳಿಗೆ ಸುಪ್ರೀಂಕೋರ್ಟ್ ಶಾಕ್ ನೀಡಿದೆ.
ಕಾಯ್ದಿರಿಸಿದ ತೀರ್ಪನ್ನು ಇಂದು ಪ್ರಕಟಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಚಂದ್ರಚೂಡ್ ಅವರು, ಶಾಸನ ಸಭೆಯ ಸದಸ್ಯರು ಭ್ರಷ್ಟಾಚಾರ ನಡೆಸುವುದು ಅಥವಾ ಲಂಚ ಸ್ವೀಕರಿಸುವುದು ಸಾರ್ವಜನಿಕ ಜೀವನದ ನೈತಿಕತೆ ನಶಿಸುತ್ತದೆ ಎಂದು ಹೇಳಿದರು.
ಅಲ್ಲದೆ, ಸಂಸತ್ತು ಅಥವಾ ಶಾಸಕಾಂಗದ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಯಾವುದೇ ಸವಲತ್ತು ನೀಡುವುದು ನೆಲದ ಕಾನೂನಿನಿಂದ ವಿನಾಯಿತಿಗಳನ್ನು ಆನಂದಿಸುವ ವರ್ಗವನ್ನು ರಚಿಸಿದಂತಾಗುತ್ತದೆ. ಸಂವಿಧಾನದ ಆಶಯಗಳಿದೆ ವಿನಾಶಕಾರಿಯಾಗಿವೆ ಎಂದು ತಿಳಿಸಿದರು.
1998ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನ ಪ್ರಕಾರ ಸಂಸದರು ಮತ್ತು ಶಾಸಕರು ಹಣ ಪಡೆದು ಭಾಷಣ ಮಾಡಿದ್ದರೆ ಅಥವಾ ಮತ ಹಾಕಿದ್ದರೆ ಅವರಿಗೆ ಲಂಚ ಪ್ರಕರಣದ ತನಿಖೆ ಅಡಿ ಕಾನೂನಿನ ರಕ್ಷಣೆ ಸಿಗುತ್ತಿತ್ತು. ಆದರೆ ಇಂದು ನ್ಯಾಯಪೀಠವು ಈ ಸವಲತ್ತನ್ನು ರದ್ದುಪಡಿಸಿ ಆದೇಶ ಮಾಡಿದೆ.

ತೀರ್ಪು ಸ್ವಾಗತಿಸಿದ ಪ್ರಧಾನಿ
ಸುಪ್ರೀಂಕೋರ್ಟಿನ ಮಹತ್ವದ ತೀರ್ಪನ್ನು ಪ್ರಧಾನಿ ನರೇಂದ್ರ ಮೋದಿಯವರು ಸ್ವಾಗತಿಸಿದ್ದು, ಈ ತೀರ್ಪು ಶುದ್ದ ರಾಜಕಾರಣವನ್ನು ಖಚಿತಪಡಿಸುತ್ತದೆ ಮತ್ತು ವ್ಯವಸ್ಥೆ ಮೇಲೆ ಸಾರ್ವಜನಿಕರಿಗೆ ಇರುವ ನಂಬಿಕೆ ಇನ್ನಷ್ಟು ಹೆಚ್ಚಾಗುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.

More News

You cannot copy content of this page