ಬೆಂಗಳೂರು : ಇನ್ನೇನು ಹೊಡಿಬಡಿ ಆಟಕ್ಕೆ ದಿನಗಣನೆ ಆರಂಭವಾಗಿದೆ. 2024 ನೇ ಸಾಲಿನ ಐಪಿಎಲ್ ಟೂರ್ನಿ ಪಂದ್ಯಗಳು ಇದೇ ತಿಂಗಳ 22 ರಿಂದ ಆರಂಭವಾಗಲಿವೆ.
ಚೆನ್ನೈ ಸೂಪರ್ ಕಿಂಗ್ಸ್ ನ ಕಪ್ತಾನನಾಗಿರುವ ಎಂ ಎಸ್ ಧೋನಿ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮಾಡಿರುವ ಒಂದು ಪೋಸ್ಟ್ ಅವರ ಅಭಿಮಾನಿಗಳ ನಿದ್ದೆಗೆಡಿಸಿದೆ, ಅಲ್ಲದೆ, ಅವರ ಪೋಸ್ಟ್ ಸಾಕಷ್ಟು ಕುತೂಹಲ ಕೆರಳಿಸಿದೆ.
ಕಾಯಲಾಗುತ್ತಿಲ್ಲ, ಈ ಹೊಸ ಸೀಸನ್ ಗೆ ಮತ್ತು ಬರಲಿರುವ ನನ್ನ ಹೊಸ ಜವಾಬ್ದಾರಿಗೆ ಕಾಯುತ್ತಾ ಇರೀ ಎಂದು ಮಹೇಂದ್ರ ಸಿಂಗ್ ಧೋನಿ ಬರೆದುಕೊಂಡಿದ್ದಾರೆ.

ಈ ಪೋಸ್ಟ್ ಅನೇಕ ಕ್ರಿಕೆಟ್ ಪ್ರೇಮಿಗಳ ನಿದ್ದೆ ಕೆಡಿಸಿದ್ದು, ಈ ಬಾರಿಯ ಐಪಿಎಲ್ ನಲ್ಲಿ ಧೋನಿಯವರ ಪಾತ್ರ ಏನಿರಬಹುದು ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಹಾಗೆಯೇ ಅವರು ಮೈದಾನದಲ್ಲಿ ಕಾಣಿಸಿಕೊಳ್ಳುವುದಿಲ್ಲಾವಾ ಎಂಬ ಪ್ರಶ್ನೆ ಅನೇಕರಲ್ಲಿ ಹುಟ್ಟುಹಾಕಿದೆ.
ಕಳೆದ ವರ್ಷ ಐಪಿಎಲ್ ಪಂದ್ಯವೇ ಕೊನೆಯ ಪಂದ್ಯ ನಂತರ ಅವರು ನಿವೃತ್ತಿಯಾಗುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ನಂತರದ ದಿನದಲ್ಲಿ ಆ ಸುದ್ದಿ ತಣ್ಣಗಾಗಿತ್ತು. ತದ ನಂತರದಲ್ಲಿ ಅವರು ಮೊಣಕಾಲು ಶಸ್ತ್ರಚಿಕಿತ್ಸೆಗೂ ಒಳಗಾದರು.

ಆದ್ದರಿಂದ ಅವರು ಹಾಕಿರುವ ಪೋಸ್ಟ್ ಗೆ ಸಾಕಷ್ಟು ರೀತಿಯಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಅವರು ಕೋಚ್ ಅಥವಾ ಮೆಂಟರ್ ಆಗಬಹುದಾ ಎಂದು ಪ್ರಶ್ನಿಸಿದ್ದಾರೆ. ಧೋನಿಯವರೇ ಚೆನ್ನೈ ಸೂಪರ್ ಕಿಂಗ್ಸ್ ತಂಡಜ ಹೊಸ ನಾಯಕನ ಘೋಷಣೆ ಮಾಡಲಿದ್ದಾರೆಯೇ ಎಂಬ ಪ್ರಶ್ನೆ ಕೇಳುತ್ತಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ 2008 ರಿಂದಲೂ ಗುರುತಿಸಿಕೊಂಡಿರುವ ಅವರು, 250 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಏನೇ ಆದರೂ ಅವರು ಅನೌನ್ಸ್ ಮಡುವ ತನಕ ಪ್ರತಿಯೊಬ್ಬರು ಕಾಯಲೇ ಬೇಕು ಎಂದು ಕೆಲವು ಪೋಸ್ಟ್ ಮಾಡಿ ತಮ್ಮನ್ನು ತಾವೇ ಸಮಾಧಾನಪಡಿಸಿಕೊಂಡಿದ್ದಾರೆ.