BJP TUMKURU TICKET FIGHT : ನಮ್ಮ ಜಿಲ್ಲೆಗೆ ಬೇರೆಯವರು ಬರಬಾರದು: ಟಿಕೇಟ್ ಘೋಷಣೆ ಬಳಿಕ ಯಾರು ಎಲ್ಲಿರುತ್ತಾರೋ ನೋಡೋಣ: ವಿ ಸೋಮಣ್ಣಗೆ ಖಡಕ್ ಎಚ್ಚರಿಕೆ ನೀಡಿದ ಮಾಧುಸ್ವಾಮಿ

ತುಮಕೂರು: ಬಿಜೆಪಿ -ಜೆಡಿಎಸ್ ಮೈತ್ರಿ ಆದ ಕಾರಣ ಮೇಲಿನವರ ತೀರ್ಮಾನವನ್ನು ‌ನಾವು ವಿರೋಧ ಮಾಡಲ್ಲ, ಆದರೆ, ನಮ್ಮ ಜಿಲ್ಲೆಗೆ ಹೊರಗಡೆಯವರು ಬರಬಾರದು ಅನ್ನೋದು ನನ್ನ ಸ್ವಂತ ಅಭಿಪ್ರಾಯ, ಇದು ಸೋಮಣ್ಣರಿಗೂ ಅನ್ವಯಿಸುತ್ತೆ, ಮತ್ತೊಬ್ಬರಿಗೂ ಅನ್ವಯವಾಗುತ್ತೆ ಎಂದು ಬಿಜೆಪಿ ಮಾಜಿ ಸಚಿವ ಜೆ ಮಾಧುಸ್ವಾಮಿ ಸ್ಪಷ್ಟವಾಗಿ ಹೇಳಿದ್ದಾರೆ.

ತುಮಕೂರಿನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದ, ವಿ ಸೋಮಣ್ಣ ಅವರು ತುಮಕೂರು ಜಿಲ್ಲೆಯಿಂದ ಲೋಕಸಭೆಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿರುವ ಬಗ್ಗೆ ಮಾಧುಸ್ವಾಮಿ ಅವರು ತೀವ್ರ ವಿರೋಧ ವ್ಯಕ್ತಪಡಿಸಿದರು.
ನಾನು ವಿಘ್ನೇಶ್ವರ ಇದ್ದಾಗೆ, ಸೋಮಣ್ಣ ಸುಬ್ರಹ್ಮಣ್ಯ ಇದ್ದಾಗೆ, ಪ್ರಪಂಚ ಪರ್ಯಟನೆ ಮಾಡಿಕೊಂಡು ಬಾ ಅಂತಾದ್ರೆ ಗಣೇಶ ಅವರ ಅಪ್ಪ, ಅಮ್ಮನ್ನಾ ಸುತ್ತಿ ನಿಂತುಕೊಳ್ತಾನೆ. ಸುಬ್ರಹ್ಮಣ್ಯ ಹೋದವನು ಬರಲೇ ಇಲ್ಲಾ, ನಾನು ಸ್ಪಷ್ಟವಾಗಿ ಹೇಳಿದ್ದೇನೆ ಎಂದರು.
ನಾನು ಯಾವ ಗುಂಪುನಲ್ಲಿದ್ದರೂ ಅಲ್ಲಿರುವ ಲೀಡರ್ ಗಳನ್ನು ನಂಬಿಕೊಂಡು ರಾಜಕೀಯ ಮಾಡಿರುವ ಮನುಷ್ಯ, ಹೆಗಡೆಯವರು ಇದ್ದಾಗ, ಪಟೇಲರು ಇದ್ದಾಗ ಅವರನ್ನು ನಂಬಿದ್ದೆ, ಈಗ ಯಡಿಯೂರಪ್ಪ ಜೊತೆ ಇದ್ದೇನೆ, ಅವರನ್ನ ನಂಬಿದ್ದೇವೆ, ಕೊಟ್ಟರೆ ಅವರ ದೊಡ್ಡತನ, ಕೊಡದೆ ಇದ್ದರೇ ನಮ್ಮ ಹಣೆ ಬರಹ ಅಂದುಕೊಂಡಿದ್ದೇವೆ, ಇನ್ನೊಬ್ಬರಪ ಹತ್ತಿರ ಹೋಗಿ ನಾನು ಕೈ ಚಾಚಲ್ಲ ಎಂದು ತಿಳಿಸಿದರು.

ಮಾಧುಸ್ವಾಮಿ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಟಿಕೆಟ್ ಘೋಷಣೆ ಆಗೋವರೆಗೂ ಉತ್ತರ ಹೇಳಲ್ಲ, ನನ್ನ ಸೋಲನ್ನ‌ ನಾನು ಒಪ್ಪಿಕೊಂಡಿರುವವನು, ಇನ್ನೊಬ್ಬರನ್ನ ನಾನು ಬೈಯಲ್ಲ, ಅವರು ಸೋಲಿಸಿದ್ರು, ಇವರು ಸೋಲಿಸಿದ್ರು, ಪಿತೂರಿ ಮಾಡಿದ್ರು ಅಂತಾ ನಾಯಕತ್ವವನ್ನು ಪ್ರಶ್ನೆ ಮಾಡಲ್ಲ ಎಂದರು.
ನಾನು ಸಾಮರ್ಥ್ಯ ಇಲ್ಲ ಸೋತಿದ್ದೇನೆ‌ ಇನ್ನೊಬ್ಬರನ್ನು ಯಾಕೆ ಬೈಯೋಣ ಎಂದು ತಿಳಿಸಿದ ಅವರು, ಯಡಿಯೂರಪ್ಪರನ್ನ ಬೈಯೋದು, ಅವರ ಮಗನ್ನ ಬೈಯೋದು ಮತ್ತೆ ರಾಜೀ ಆಗೋದು ಇದೆಲ್ಲಾ ನನಗೆ ಗೊತ್ತೇ ಇಲ್ಲ, ಒಂದು ಬಾರಿ‌ ಬೇಜಾರ್ ಆದ್ರೆ ಮತ್ತೊಮ್ಮೆ ನಾನು ಅವರ ಬಳಿ ಹೋಗಲ್ಲ ಎಂದು ಪರೋಕ್ಷವಾಗಿ ಸೋಮಣ್ಣ ಅವರಿಗೆ ಮಾಧುಸ್ವಾಮಿ ಟಾಂಗ್ ನೀಡಿದರು.
ಸೋಮಣ್ಣ ರಾಜಕೀಯ ಶುರು ಮಾಡಿದ ದಿನದಿಂದಲೂ ಮಠಗಳ ಪ್ರದಕ್ಷಿಣೆ ಹೊಡೆದಿರೋದೆ, ಹೊಡೆಯಲಿ ಬಿಡಿ, ಮನುಷ್ಯನಿಗೆ ಅವಕಾಶ, ವಯಸ್ಸು ಎರಡು ಗಣನೆಗೆ ಬರುತ್ತೆ, ಮತ್ತೆ ರಾಜಕೀಯ ಮಾಡುವಾಗ ನಮಗೂ ಸ್ವಾಭಿಮಾನ ಗೌರವ ಘನತೆ ಇರುತ್ತೆ, ತುಮಕೂರು ಜಿಲ್ಲೆಗೆ ಬೇರೆಯವರನ್ನ ತರೋದನ್ನ ನಿಲ್ಲಿಸಿ ಎಂದು ತಾಕೀತು ಮಾಡಿದರು.
ಮೊದಲಿಂದಲೂ ಈ‌ ಕ್ರಿಯೆ ಮಾಡಿಕೊಂಡು ಬಂದು ನಮ್ಮ‌ ಜಿಲ್ಲೆಗೆ ಅವಮಾನ ಮಾಡ್ತಿದ್ದಾರೆ. ಇಲ್ಲಿ ಎಂಪಿ ಗೆ ನಿಂತು ಹೋದವರು ಯಾರಾದ್ರೂ ನಮ್ಮ ಹೋರಾಟಕ್ಕೆ ಬರುತ್ತಿದ್ದಾರಾ. ಏನಾದರೂ ಆಗುತ್ತಾ ಯಾರನ್ನ ನಂಬಿ ಲೀಡರ್ ಶಿಪ್ ನಲ್ಲಿ ಹಿಂದೆ ಹೋಗಬೇಕು. ನಾಳೆ ಏನಾಗ್ತಾರೆ ನಮಗೆ ಗೊತ್ತಾ. ಸೋಲ್ತಿವೋ, ಗೆಲ್ತಿವೋ ಸ್ಥಳಿಯವಾಗಿ ನಾವು ನಾಯಕತ್ವ ಬೆಳೆಸಿಕೊಂಡರೇ ಕಷ್ಟಕ್ಕೆ-ಸುಖಕ್ಕೆ ಆಗ್ತಾರೆ ಎಂದರು.

ಯಾರು ಬರುತ್ತಾರೋ ಏನೋ ಅವರು ಎಷ್ಟೇ ದೊಡ್ಡವರು ಇದ್ದರೂ ನನಗೆ ಮಾನಸಿಕವಾಗಿ ಅದು ಸಹಿಸುವ ಶಕ್ತಿ ಅಲ್ಲ, ಸೋಮಣ್ಣ ಅಂತಾ ಹೇಳ್ತಿಲ್ಲ. ಈ ಹಿಂದೆ ದೇವೆಗೌಡರು ಬಂದಾಗಲೂ ಪೋನ್ ಮಾಡಿ ಹೇಳಿದ್ದೆ, ಯಾಕೆ ಸರ್ ಬರುತ್ತಿರಾ ಇದಕ್ಕೆ ಕೈ ಹಾಕ್ತಿರಾ ಅಂತಾ, ಚುನಾವಣೆಗೆ ನಿಂತಾಗ ಅವರು ಮಾತಾಡ್ತಾರೆ ನಾವು ಮಾತಾನಾಡುತ್ತೇವೆ, ವೈಯಕ್ತಿಕವಾಗಿ ನಮಗೆ ದ್ವೇಷ ಇಲ್ಲಾ ಎಂದರು.
ಕೃಷ್ಣಪ್ಪ, ಕೊದಂಡರಾಮಯ್ಯ, ದೇವೇಗೌಡರು ನಿಂತಾಗ ನಾವು ಬೆಂಬಲ ನೀಡಿಲ್ಲ. ಜಿಲ್ಲೆಯ ಜನರು ಕೈ ಹಿಡಿಯಲಿಲ್ಲ. ಈಗ ನಮ್ಮ ಪಕ್ಷದವರು ನಮ್ಮ ಜಾತಿಯವರು ಬರುತ್ತಾರೆ ಅಂತಾ ಮಾತಾಡಿದ್ರೆ ಯಾರಾದರೂ ಸಹಿಸುತ್ತಾರಾ ಎಂದು ಪ್ರಶ್ನಿಸಿದರು.
ಅದನ್ನ ಅವರು ಅರ್ಥಮಾಡಿಕೊಳ್ಳಬೇಕು, ಎಲ್ಲಾ ಜಿಲ್ಲೆಗೆ ಹೋಗೋದು ಕೈ ಹಾಕೊದು ಸರಿಯಲ್ಲ, ಚಾಮರಾಜನಗರ ಜಿಲ್ಲೆಯಲ್ಲಿ ಅವರನ್ನ ನಂಬಿಕೊಂಡು ಎರಡು ಕ್ಷೇತ್ರದಲ್ಲಿ ನಂಬಿ ಕೆಲಸ ಮಾಡಿದ ಕಾರ್ಯಕರ್ತರ ಕಥೆ ಏನಾಗಬೇಕು, ರಾಜಕೀಯದಲ್ಲಿ ಬರೀ ಚುನಾವಣೆ ಅಲ್ಲ ನಮ್ಮನ್ನು ನಂಬಿಕೊಂಡವರನ್ನ ರಕ್ಷಣೆ ಕೊಟ್ಟಿಕೊಂಡು ಹೋಗಬೇಕಾಗುತ್ತೆ ಎಂದು ವಿವರಿಸಿದರು.

More News

You cannot copy content of this page