RAM CHARAN FANS ANGRY WITH SHAH RUKH KHAN: ಶಾರುಕ್ ಖಾನ್, ಟಾಲಿವುಡ್ ನಟ ರಾಮ್ ಚರಣ್ ಗೆ ‘ಇಡ್ಲಿ’ ಎಂದಿದ್ದಾರಾ..?: ಸಿಟ್ಟಿಗೆದ್ದ ಅಭಿಮಾನಿಗಳು..

ಗುಜರಾತ್ : ಬಾಲಿವುಡ್ ಖ್ಯಾತ ನಟ ಶಾರುಕ್ ಖಾನ್ ವಿರುದ್ಧ ಟಾಲಿವುಡ್ ನಟ ರಾಮ್ ಚರಣ್ ತೇಜ್ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ. ತಮ್ಮ ನೆಚ್ಚಿನ ನಟನನ್ನು ಶಾರುಕ್ ಖಾನ್ ಇಡ್ಲಿ ವಜಾ ರಾಮ್ ಚರಣ್ ಕಹಾ ಹೇ ತು ಎಂದು ಕರೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಿಲೈಯನ್ಸ್ ನ ಮುಖೇಶ್ ಅಂಬಾನಿ ಅವರ ಪುತ್ರ ಅನಂತ ಅಂಬಾನಿ- ರಾಧಿಕಾ ಮರ್ಚೆಂಟ್ ಮದುವೆ ಪೂರ್ವ ಕಾರ್ಯಕ್ರಮದಲ್ಲಿ ಸಾಕಷ್ಟು ನಟ-ನಟಿಯರು ಸೇರಿದಂತೆ ಗಣ್ಯರು ಪಾಲ್ಗೊಂಡದ್ದರು. ಈ ಸಂದರ್ಭದಲ್ಲಿ ತೆಲುಗಿನ ಜಪ್ರಿಯ ಹಾಡು ರಾಮಚರಣ್ ತೇಜ್ ಅವರ ಸಿನಿಮಾದ ನಾಟು ನಾಟು ಹಾಡಿಗೆ ಶಾರುಕ್ ಖಾನ್ ಮತ್ತು ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಹೆಜ್ಜೆ ಹಾಕಿದ್ದರು.

ನೃತ್ಯ ಆದ ಬಳಿಕ ವೇದಿಕೆಗೆ ಶಾರುಕ್ ಅವರು ರಾಮ್ ಚರಣ್ ಅವರನ್ನು ಬರಹೇಳಿದ್ದಾರೆ. ಅವರು ಬರುತ್ತಿದ್ದಂತೆ ಇಡ್ಲಿ ಎಂಬ ಪದವನ್ನು ಬಳಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮ್ ಚರಣ್ ಅವರ ಮೇಕಪ್ ಆರ್ಟಿಸ್ಟ್ ಝೀಬಾ ಹಾಸನ್ ಕೂಡ ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಮ್ ಚರಣ್ ನಂತರ ಶ್ರೇಷ್ಠ ನಟರನ್ನು ಅಗೌರವದಿಂದ ಕಾಣುವುದು ಸರಿಯಲ್ಲ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನವನ್ನು ಅವರು ಹೊರಹಾಕಿದ್ದಾರೆ. ಆದರೆ ಇನ್ನು ಕೆಲವು ಅಭಿಮಾನಿಗಳು ಶಾರುಕ್ ಪರ ಬ್ಯಾಟ್ ಬೀಸಿದ್ದು, ರಾಮ್ ಚರಣ್ ಅವರು ವೇದಿಕೆಗೆ ಬರುತ್ತಿದ್ದಂತೆಯೇ ನಮಸ್ಕರಿಸಿದ್ದಾರೆ ಎಂದಿದ್ದಾರೆ.

More News

You cannot copy content of this page