UNDERWATER METRO SERVICE : ದೇಶದ ಮೊದಲ ನೀರೊಳಗಿನ ಮೆಟ್ರೋ ಸೇವೆಗೆ ಪ್ರಧಾನಿ ಮೋದಿ ನಾಳೆ ಚಾಲನೆ

ಕೋಲ್ಕತ್ತಾ : ಭಾರತದ ಮೊದಲ ನದಿಯೊಳಗಿನ ಮೆಟ್ರೋ ಸೇವೆಯನ್ನು ಪ್ರಧಾನಿ ಮೋದಿ ನಾಳೆ ಉದ್ಘಾಟಿಸಲಿದ್ದಾರೆ. ಹೂಗ್ಲಿ ನದಿಯ ಅಡಿಯಲ್ಲಿ ನಿರ್ಮಿಸಲಾದ ಸುರಂಗವು ಪೂರ್ವ- ಪಶ್ಚಿಮ ಕಾರಿಡಾರ್ ನ ಹೌರಾ ಮೈದಾನ್ – ಎನ್ ಪ್ಲೇನೇಡ್ ಸಂಪರ್ಕಿಸಲಿದೆ.

ಹೌರಾ ಮೈದಾನ್-ಎನ್ಪ್ಲಾನೇಡ್ ಮೆಟ್ರೋ ಮಾರ್ಗ ಭಾರತದ ಯಾವುದೇ ಪ್ರಬಲ ನದಿಯ ಅಡಿಯಲ್ಲಿ ಮೊದಲ ಸಾರಿಗೆ ಸುರಂಗವನ್ನು ಹೊಂದಿದೆ. ಆದರೆ, ಹೌರಾ ಮೆಟ್ರೋ ನಿಲ್ದಾಣ ದೇಶದಲ್ಲಿಯೇ ಅತ್ಯಂತ ಆಳವಾದದ್ದು ಎನ್ನಲಾಗಿದೆ. ಹೂಗ್ಲಿ ನದಿಯು ಕೋಲ್ಕತ್ತಾ ಮತ್ತು ಹೌರಾ ಅವಳಿ ನಗರಗಳನ್ನು ಕ್ರಮವಾಗಿ ಪೂರ್ವ ಮತ್ತು ಪಶ್ಚಿಮ ದಂಡೆಗಳಲ್ಲಿ ಪ್ರತ್ಯೇಕಿಸುತ್ತದೆ. ಈ ಸಾಧನೆಯು ಎಂಜಿನಿಯರಿಂಗ್ ಜಾಣ್ಮೆಗೆ ಸಾಕ್ಷಿಯಾಗಿದೆ.

ಏಪ್ರಿಲ್‌ 9, 2003ರಲ್ಲಿ ಹೂಗ್ಲಿ ನದಿಯ ನೀರೊಳಗಿನ ಸುರಂಗದ ಅಡಿಯಲ್ಲಿ ಮೆಟ್ರೋ ರೈಲುಗಳ ಪ್ರಾಯೋಗಿಕ ಸಂಚಾರ ನಡೆಸಿತು. ಉದ್ಘಾಟನೆ ನಾಳೆ ನಡೆದರೂ ಪ್ರಯಾಣಿಕರ ಸೇವೆಗಳು ಒಂದಷ್ಟು ದಿನಗಳ ನಂತರ ಪ್ರಾರಂಭವಾಗುತ್ತದೆ ಮೆಟ್ರೋ ರೈಲ್ವೇ ಸಿಪಿಆರ್ ಒ ಕೌಶಿಕ್ ಮಿತ್ರಾ ತಿಳಿಸಿದ್ದಾರೆ.

More News

You cannot copy content of this page