MODI GOVERNMENT WANTS IT TO BE DONE AFTER ELECTION: ಮೋದಿ ಸರ್ಕಾರವು ತನ್ನ ಸಂಶಯಾಸ್ಪದ ಅಕ್ರಮ ವ್ಯವಹಾರಗಳನ್ನು ಮರೆಮಾಚಲು ಎಸ್ ಬಿಐ ಅನ್ನು ಬಳಸಿಕೊಳ್ಳುತ್ತಿದೆ: ಮಲ್ಲಿಕಾರ್ಜುನ ಖರ್ಗೆ

ನವದೆಹಲಿ : ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ಚುನಾವಣಾ ಬಾಂಡ್ ಗಳ ವಿವರಗಳನ್ನು ಬಹಿರಂಗಪಡಿಸಲು ಹೆಚ್ಚಿನ ಸಮಯ ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಈ ಕುರಿತು ಕೇಂದ್ರ ಸರ್ಕಾರದ ವಿರುದ್ದ ಕಠಿಣ ಶಬ್ದಗಳಿಂದ ಟೀಕಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೋದಿ ಸರ್ಕಾರವು ತನ್ನ ಸಂಶಯಾಸ್ಪದ ಅಕ್ರಮ ವ್ಯವಹಾರಗಳನ್ನು ಮರೆಮಾಚಲು ಎಸ್ ಬಿಐ (SBI)ಅನ್ನು ಬಳಸಿಕೊಂಡಿದೆ ಎಂದು ಆರೋಪಿಸಿದ್ದಾರೆ.

ಜೂನ್ 30ರವರೆಗೆ ರಾಜಕೀಯ ಪಕ್ಷಗಳು ನಗದೀಕರಿಸಿದ ಪ್ರತಿ ಚುನಾವಣಾ ಬಾಂಡ್ ಗಳ ವಿವರಗಳನ್ನು ಬಹಿರಂಗಪಡಿಸಲು ಸಮಯ ನೀಡಬೇಕೆಂದು ಕೋರಿ ಎಸ್ ಬಿಐ ಉನ್ನತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಮಾರ್ಚ್ 6ರೊಳಗೆ ಎಲ್ಲಾ ಮಾಹಿತಿಯನ್ನು ಭಾರತೀಯ ಚುನಾವಣಾ ಆಯೋಗಕ್ಕೆ ನೀಡಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶ ನೀಡಿತ್ತು.
ಲೋಕಸಭೆಯ ಅಧಿಕಾರಾವಧಿಯು ಜೂನ್ 16ಕ್ಕೆ ಕೊನೆಗೊಳ್ಳಲಿದೆ. ಜೂನ್ 30ರ ನಂತರ ಇದನ್ನು ಮಾಡಲು ಬಿಜೆಪಿ ಬಯಸುತ್ತಿದೆ ಎಂದು ಆರೋಪಿಸಿರುವ ಅವರು, ತನ್ನ ತಪ್ಪುಗಳನ್ನು ಮುಚ್ಚಿಹಾಕಲು ಮೋದಿ ಸರ್ಕಾರ ನಡೆಸುತ್ತಿರುವ ವ್ಯವಸ್ಥಿತ ತಂತ್ರ ಎಂದು ಆರೋಪಿಸಿದ್ದಾರೆ.

ಎಸ್ ಬಿಐ ಅನ್ನು ಮೋದಿ ಸರ್ಕಾರ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದ ಅವರು, ಮೋದಿ ಸರ್ಕಾರದ ಕಪ್ಪು ಹಣ ಪರಿವರ್ತನೆ ಯೋಜನೆ, ಚುನಾವಣಾ ಬಾಂಡ್ ಗಳನ್ನು ಅಸಂವಿಧಾನಿಕ, ಆರ್ ಟಿಐ ಉಲ್ಲಂಘನೆ ಮತ್ತು ಕಾನೂನು ಬಾಹಿರ ಎಂದು ಪರಿಗಣಿಸಿ ಸುಪ್ರೀಂಕೋರ್ಟ್ ರದ್ದುಗೊಳಿಸಿ, ಮಾರ್ಚ್ 6ರೊಳಗೆ ಎಲ್ಲಾ ದಾನಿಗಳ ವಿವರಗಳನ್ನು ಒದಗಿಸುವಂತೆ ಸೂಚನೆ ನೀಡಿತ್ತು.
ಹೆದ್ದಾರಿ, ಬಂದರು, ವಿಮಾನ ನಿಲ್ದಾಣ, ವಿದ್ಯುತ್ ಸ್ಥಾವರಗಳ ಗುತ್ತಿಗೆಯನ್ನು ಪ್ರಧಾನಿಗೆ ಹಸ್ತಾಂತರಿಸಿರುವ ಬಿಜೆಪಿಯ ಕರಾಳ ವ್ಯವಹಾರಗಳನ್ನು ಸರ್ಕಾರ ಅನುಕೂಲಕರವಾಗಿ ಮರೆಮಾಚುತ್ತಿದೆಯೇ ಎಂದು ಖರ್ಗೆ ಅವರು ಪ್ರಶ್ನಿಸಿದ್ದಾರೆ. ಕೇವಲ 24 ಗಂಟೆಗಳಲ್ಲಿ ಅಂಕಿಅಂಶಗಳನ್ನು ಬಹಿರಂಗಪಡಿಸಬಹುದು ಎಂದು ತಕ್ಷರು ಹೇಳುತ್ತಾರೆ. ಆದರೆ, ಎಸ್ ಬಿಐ ಇನ್ನೂ ನಾಲ್ಕು ತಿಂಗಳು ಕಾಲಾವಕಾಶ ಕೇಳಿರುವುದು ಏಕೆ ಎಂದು ಖರ್ಗೆ ಅವರು ಪ್ರಶ್ನಿಸಿದ್ದಾರೆ.

More News