WHY MP PRATAP SIMHA NOT RESIGNED..?: ಬಿಜೆಪಿಯವರು ದ್ವೇಷ ಪ್ರೇಮಿಗಳು ನಾವು ದೇಶ ಪ್ರೇಮಿಗಳು :ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಹುಬ್ಬಳ್ಳಿ: ಪಾಕ್ ಪರ ಘೋಷಣೆ ಕೂಗಿದವರನ್ನು ನಾವು ಖಂಡಿಸುತ್ತೇವೆ. ಇದು ಯಾರು ಒಪ್ಪುವ ಮಾತಲ್ಲ, ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಇಂದು ನೂತನ ಪ್ರಾದೇಶಿಕ ಸಾರಿಗೆ ಕಚೇರಿ ಉದ್ಘಾಟನೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದೆ. ಬಿಜೆಪಿ ಪೂರ್ವಜರು ಅಂದ್ರೆ ಆರ್.ಎಸ್.ಎಸ್, ವಿಶ್ವ ಹಿಂದೂ ಪರಿಷತ್ ಯಾರು ಸ್ವತಂತ್ರ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಸ್ವತಂತ್ರದ ಹಕ್ಕು ದೇಶದ ಜನರಿಗೆ ಕೊಟ್ಟಿದೆ ಕಾಂಗ್ರೆಸ್ ಪಕ್ಷ, ನಮಗೆ ಇದಷ್ಟು ದೇಶಾಭಿಮಾನ ಬಿಜೆಪಿಯವರಿಗೆ ಇಲ್ಲ. ಅವರು ದ್ವೇಷ ಪ್ರೇಮಿಗಳು ನಾವೇ ನಿಜವಾದ ದೇಶ ಪ್ರೇಮಿಗಳು ಎಂದರು.

ವಿಧಾನಸೌಧದಲ್ಲಿ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿರುವ ವಿಚಾರವಾಗಿ ಈಗಾಗಲೇ ಎಫ್ಎಸ್ಎಲ್ ವರದಿ ಅಧಿಕೃತ ಎಂದು ಗೃಹ ಮಂತ್ರಿಗಳು ಹೇಳಿದ್ದಾರೆ. ಅದರಂತೆ ಕ್ರಮ ಜರುಗಿಸಲಾಗಿದ್ದು, ಮುಂದೆ ಕೋರ್ಟ್ ಈ ಪ್ರಕ್ರಿಯೆ ನೋಡಿಕೊಳ್ಳಲಿದೆ ಎಂದರು.
ಈ ಹಿಂದೆ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತ ಪಾಕಿಸ್ತಾನ ಪರ ಘೋಷಣೆ ಕೂಗಿದಾಗ ಬಿಜೆಪಿಯವರು ಏನೂ ಮಾಡುತ್ತಿದ್ದರು, ಆಗ ಯಾಕೆ ಘಟನೆಯನ್ನು ಖಂಡಿಸಿಲ್ಲ, ಪಾರ್ಲಿಮೆಂಟ್’ನಲ್ಲಿ ಗ್ಯಾಸ್ ಬಾಂಬ್ ಹಾಕಿದ್ದರು, ಆಗ ಯಾಕೆ ಬಿಜೆಪಿ ಖಂಡಿಸಿಲ್ಲ, ಪ್ರತಾಪ್ ಸಿಂಹ ಯಾಕೆ ನೈತಿಕತೆ ಹೊತ್ತು ರಾಜೀನಾಮೆ ಕೊಡಲು ಬಿಜೆಪಿಯವರು ಒತ್ತಾಯಿಸಲಿಲ್ಲ, ಈ ಕುರಿತು ಮಾತನಾಡಿದರೇ ಬಿದ್ದು ಹೋಗುತ್ತದೆ ಎನ್ನುವುದಕ್ಕೆ ಬಾಯಲ್ಲಿ ಬೆಣ್ಣೆ ಇಟ್ಟುಕೊಂಡಿದ್ದಾರಾ? ಎಂದು ಪ್ರಶ್ನೆ ಮಾಡಿದರು.

ರಾಜಕಾರಣಿಗಳು ಬಂದಾಗ ಜನ ಕೂಡುವುದು ಸಾಮಾನ್ಯ, ಅದರಲ್ಲಿ ಯಾರೋ ಒಬ್ಬರು ಕೂಗಿದರೇ ನಾವು ಕೂಗಿದ ಹಾಗೇಯೇ? ಎಂದು ಪ್ರಶ್ನೆ ಮಾಡಿದರು.
ಬಿಜೆಪಿ ಕುಬೇರರ ಪಕ್ಷ
ಬಿಜೆಪಿ ಕುಬೇರರ ಪಕ್ಷವಾಗಿದ್ದು, ಸುಮಾರು 4 ಸಾವಿರ ಕೋಟಿಗಿಂತ ಹೆಚ್ಚು ಆಸ್ತಿ ಹೊಂದಿದೆ ಎಂದು ಆರೋಪಿಸಿದರು. ಕೇವಲ 9 ವರ್ಷದಲ್ಲಿ ಇಷ್ಟೊಂದು ಶ್ರೀಮಂತ ಪಕ್ಷ ಹೇಗಾಯಿತು ಎಂದು ಪ್ರಶ್ನಿಸಿದರು.
ನಮ್ಮ ಪಕ್ಷದಲ್ಲಿ ದುಡಿಯುವವರ ಕೈಯಲ್ಲಿದೆ, ಇತಿಹಾಸದಲ್ಲೇ ದುಡ್ಡು ತಗೊಂಡು ಪಾರ್ಲಿಮೆಂಟ್, ಅಸೆಂಬ್ಲಿ ಸೀಟ್ ಕೊಟ್ಟಿರೋದು ಆರೋಪ ಇದೆಯಾ? ಎಂದು ಮರುಪ್ರಶ್ನಿಸಿದರು.
ನಮ್ಮಲ್ಲಿ ಬಹಳ ಜನ ಇದ್ದಾರೆ, ಸೀಟ್ ಸಿಗದಿದ್ದಾಗ ಆ ರೀತಿ ಹತಾಶರಾಗಿ ಹೇಳಿದ್ದಾರೆ, ಅದಕ್ಕೆ ಹೆಚ್ಚು ಒತ್ತು ಕೊಡೋದು ಬೇಡ, ಲೋಕಸಭಾ ಚುನಾವಣೆ ಟಿಕೆಟ್ ಆದಷ್ಟು ಬೇಗ ಅನೌನ್ಸ್ ಆಗುತ್ತೆ ಎಂದರು.

More News