FIRST UNDER WATER TUNEL METRO: ದೇಶದ ಮೊದಲ ಜಲ ಸುರಂಗದ ಮೆಟ್ರೋ ಸೇವೆ ಕೋಲ್ಕತ್ತಾದಲ್ಲಿ ಉದ್ಘಾಟನೆ: ಪ್ರಧಾನಿಯಿಂದ ಅಧಿಕೃತ ಚಾಲನೆ

ಕೋಲ್ಕತ್ತಾ: ಕೋಲ್ಕತ್ತಾದಲ್ಲಿ ದೇಶದ ಮೊದಲ ಜಲ ಸುರಂಗ ಮೆಟ್ರೋ ಯೋಜನೆಯನ್ನು ಇಂದು ಉದ್ಘಾಟಿಸಲಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಯೋಜನೆಗೆ ಬುಧವಾರ ಚಾಲನೆ ನೀಡಿದರು.

ಕೋಲ್ಕತ್ತಾದ ಹೂಗ್ಲಿ ನದಿಯೊಳಗೆ ನಿರ್ಮಿಸಲಾಗಿರುವ ಸುರಂಗ ಮಾರ್ಗದ ಮೂಲಕ ಹೌರಾ ಮತ್ತು ಎಸಪ್ಲೇನೇಜ್ ನಡುವೆ ಈ ಮೆಟ್ರೋ ರೈಲು ಸಂಚರಿಸಲಿದೆ. ಜಲಸುರಂಗದ ಮೆಟ್ರೋ ರೈಲಿನಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ಪ್ರಯಾಣಿಸಿ ಪ್ರಧಾನಿ ನೂತನ ಮೆಟ್ರೋವನ್ನು ಉದ್ಘಾಟಿಸಿದರು.

ಈ ಯೋಜನೆಗೆ 4,965 ಕೋಟಿ ರೂಪಾಯಿಯನ್ನು ಖರ್ಚು ಮಾಡಲಾಗಿದ್ದು, ಕೋಲ್ಕತ್ತಾ ಮೆಟ್ರೋದ ಪೂರ್ವ – ಪಶ್ಚಿಮ ಕಾರಿಡಾರ್ ಎಂದೇ ಖ್ಯಾತಿಪಡೆದಿದೆ. ಈ ಸುರಂಗ 520 ಮೀಟರ್ ಉದ್ದ ಹೊಂದಿದೆ. ನೀರಿನೊಳಗೆ ಮೊಟ್ರೋ ರೈಲು ಸರಾಸರಿ 45 ಸೆಕಂಡ್ ಗಳಲ್ಲಿ ಸುಮಾರು 80 ಕಿ. ಮೀ ವೇಗದಲ್ಲಿ ಚಲಿಸಲಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ಯಾವುದೇ ಪ್ರಬಲ ನದಿಯ ಅಡಿಯಲ್ಲಿ ಮೊದಲ ಬಾರಿಗೆ ನಿರ್ಮಿಸಲಾಗಿರುವ ಸಾರಿಗೆ ಸುರಂಗ ಇದಾಗಿದ್ದು, ಹೂಗ್ಲಿ ನದಿಯ ಅಡಿಯಲ್ಲಿ ಹಾದುಹೋಗುವ ಈ ರೈಲು, ಕೋಲ್ಕತ್ತಾ ಮತ್ತು ಹೌರಾ ನಗರವನ್ನು ಸಂಪರ್ಕಿಸಲಿದೆ.

More News