ನವದೆಹಲಿ : ನೀವು ಎಲ್ಲಿಗೆ ಹೋಗುತ್ತೀರಿ- ಬಿಜೆಪಿಗೆ ಅಥವಾ ಜೈಲಿಗೆ..? ಬಿಜೆಪಿಗೆ ಸೇರಲು ನಿರಾಕರಿಸಿದವರನ್ನು ಮುಲಾಜಿಲ್ಲದೆ ಜೈಲಿಗೆ ಕಳುಹಿಸಲಾಗುತ್ತಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಆರೋಪ ಮಾಡಿರುವ ಅವರು, ಬಿಜೆಪಿಗೆ ಸೇರಿದರೆ ಇದೆಲ್ಲದದ್ದಕ್ಕೂ ಮುಕ್ತಿ ಸಿಗಲಿದೆ ಎಂದು ತಿಳಿಸಿದ್ದಾರೆ.
ED और मोदी सरकार की ये सच्चाई है। कैसे लोगों को ED से परेशान करवा के बीजेपी में शामिल किया जाता है। ED की रेड करवा के पूछा जाता है – कहाँ जाओगे – बीजेपी या जेल? जो बीजेपी जाने से मना कर देते हैं, उन्हें जेल भेज देते हैं। आज अगर सत्येंद्र जैन, मनीष सिसोदिया और संजय सिंह अगर बीजेपी… https://t.co/Xe1frCexDs
— Arvind Kejriwal (@ArvindKejriwal) March 6, 2024
ಟಿಎಂಸಿ ನಾಯಕ ತಪಸ್ ರಾಯ್ ಬಿಜೆಪಿ ಸೇರ್ಪಡೆ ಕುರಿತು ಅವರು ಪ್ರತಿಕ್ರಿಯೆ ನೀಡಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಡಿ ಮೂಲಕ ವಿರೋಧ ಪಕ್ಷಗಳ ನಾಯರಿಗೆ ಕಿರುಕುಳ ನೀಡುವ ಬಿಜೆಪಿಗೆ ಸೇರಲು ಬಲವಂತ ಮಾಡಲಾಗುತ್ತಿದೆ ಎಂದು ಟೀಕಿಸಿದ್ದಾರೆ.
ಎಎಪಿ ನಾಯಕರಾದ ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಅವರು ಇವತ್ತು ಬಿಜೆಪಿ ಸೇರಿದಂತೆ ಸಾಕು ನಾಳೆ ಅವರಿಗೆ ಜಾಮೀನು ಸಿಗುತ್ತದೆ, ನಾನೂ ಬಿಜೆಪಿ ಸೇರಿದರೆ ನನಗೆ ಇಡಿಯಿಂದ ಬರುವ ನೋಟಿಸ್ ನಿಲ್ಲುತ್ತದೆ ಎಂದು ಹೇಳಿದ್ದಾರೆ.
ಜಾರಿ ನಿರ್ದೇಶನಾಲಯ ಜಾರಿಗೊಳಿಸಿರುವ ಎಂಟೂ ಸಮನ್ಸ್ ಗಳು ಕಾನೂನು ಬಾಹಿರ ಎಂದು ಆರೋಪಿಸಿರುವ ಕೇಜ್ರಿವಾಲ್, ಮಾರ್ಚ್ 12ರ ನಂತರ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರು. ಇದೀಗ ಮತ್ತೆ ಇಡಿ ನ್ಯಾಯಾಲಯದ ಮೊರೆ ಹೋಗಿದ್ದು, ಗುರುವಾರ ವಿಚಾರಣೆ ನಡೆಸುವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ.