WATER TANKER RATE FIX: ವಾಟರ್ ಟ್ಯಾಂಕರ್ ಕಳ್ಳಾಟಕ್ಕೆ ಬ್ರೇಕ್ ಹಾಕಿದ ಸರ್ಕಾರ: ಟ್ಯಾಂಕರ್ ನೀರಿಗೆ ದರ ಫಿಕ್ಸ್ ಮಾಡಿ ಆದೇಶ

ಬೆಂಗಳೂರು : ಬೆಂಗಳೂರು ನಗರದಲ್ಲಿ ನಿರಂತರವಾಗಿ ನಡೆಯುತ್ತಿದ್ದ ವಾಟರ್ ಟ್ಯಾಂಕರ್ ಕಳ್ಳಾಟಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದ್ದು, ಟ್ಯಾಂಕರ್ ನೀರಿಗೆ ದರ ಫಿಕ್ಸ್ ಮಾಡಿ‌‌‌‌‌‌ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರ ಈ ಹಿಂದೆಯೇ ಮೂರು ನಾಲ್ಕು ಬಾರಿ ಟ್ಯಾಂಕರ್ ಮಾಲೀಕರ ಜೊತೆ ಸಭೆ ನಡೆಸಿ ದರ ಫಿಕ್ಸ್ ಮಾಡಿ ಆದೇಶ ಹೊರಡಿಸಿದೆ. ಹೊಸ ದರ ಈ ಕೆಳಗಿನಿಂತಿದೆ.

6 ಸಾವಿರ ಲೀಟರ್ ಟ್ಯಾಂಕರ್​ಗೆ 600 ರೂ ದರ ನಿಗದಿ. ಇದು 5 ಕಿ..ಮೀಟರ್ ಒಳಗೆ ಮಾತ್ರ
6 ಸಾವಿರ ಲೀಟರ್ ಟ್ಯಾಂಕರ್ ಗೆ 750 ರೂ ದರ ನಿಗದಿ. 10.ಕಿ.ಮೀಟರ್ ವ್ಯಾಪ್ತಿಗೆ
8 ಸಾವಿರ ಲೀಟರ್ ಟ್ಯಾಂಕರ್ ಗೆ ₹ 700 ದರ ನಿಗದಿ‌‌ ಇದು 5 ಕಿ.ಮೀಟರ್ ಒಳಗೆ
8 ಸಾವಿರ ಲೀಟರ್ ಗೆ 850 ದರ ನಿಗದಿ 10 ಕಿ.ಮೀಟರ್ ವ್ಯಾಪ್ತಿಗೆ
1,200 ಲೀಟರ್ ಟ್ಯಾಂಕರ್ ಗೆ 1000 ದರ ನಿಗದಿ 5 ಕಿ.ಮೀಟರ್
1200 ಲೀಟರ್ ಟ್ಯಾಂಕರ್ ಗೆ 1200 ದರ ಫಿಕ್ಸ್ 10 ಕಿಲೋ
ಜಿಎಸ್ ಟಿ ಸೇರಿದಂತೆ ರಾಜ್ಯ ಸರ್ಕಾರ ದರ ಫಿಕ್ಸ್ ಮಾಡಿ ಆದೇಶ ಹೊರಡಿಸಿದೆ. ತಿಂಗಳ ಬಾಡಿಗೆ ಒಪ್ಪಿಕೊಳ್ಳುವವರಿಗೆ 510 ರೂ 5 ಕಿ.ಮೀಟರ್ ಗೆ, 10 ಕಿ.ಮೀಟರ್ ಹೋದರೆ 650 ದರ ಫಿಕ್ಸ್ ಮಾಡಿದೆ.

More News