ಬೆಂಗಳೂರು : ರಾಮೇಶ್ವರಂ ಕೆಫೆ ಬಾಂಬ್ ಬ್ಲ್ಯಾಸ್ಟ್ ಪ್ರಕರಣ ಸಂಬಂಧ ಕೆಲವರನ್ನು ವಶಕ್ಕೆ ಪಡೆದು ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆಯಲ್ಲಿ ಹಲವರನ್ನು ಕರೆದು ವಿಚಾರಣೆಗೆ ಒಳಪಡಿಸಲಾಗಿದೆ, ಅರೆಸ್ಟ್ ಅಂತ ಯಾರನ್ನೂ ಮಾಡಿಲ್ಲ ಎಂದು ತಿಳಿಸಿದರು.
ಕೆಲವರು ಅರೆಸ್ಟ್ ಅಂತ ತಿಳಿದುಕೊಂಡಿದ್ದಾರೆ. ಕೆಲವು ತನಿಖೆ ಅಂತ ತಿಳ್ಕೊಂಡಿದ್ದಾರೆ, ಸಿಎಂ ಕೂಡ ಅರೆಸ್ಟ್ ಅಂದು ಬಿಟ್ಟಿದ್ದಾರೆ, ಅರೆಸ್ಟ್ ಅಂತ ಅಲ್ಲ. ತನಿಖೆ ನಡೆಸುತ್ತಿದ್ದಾರೆ. ಅದು ಮುಂದುವರಿಯುತ್ತಿದೆ ಎಂದರು.
ಇನ್ನು ಕೆಲವು ಮಹತ್ವದ ಮಾಹಿತಿ ಲಭ್ಯವಾಗಿದೆ. ಯಾವ ಕಡೆ ಹೋಗಿದ್ದಾರೆ. ಬಟ್ಟೆ ಬದಲಾಯಿಸಿಕೊಂಡಿರೋ ಮಾಹಿತಿ ಸಿಕ್ಕಿದೆ ಎಂದರು,. ಆದಷ್ಟು ಶೀಘ್ರವಾಗಿ ಆತನನ್ನು ಹಿಡಿಯಲಾಗುವುದು ಎಂದು ತಿಳಿಸಿದ ಅವರು, ಬಸ್ ನಲ್ಲಿ ಪ್ರಯಾಣ ಮಾಡೋರೋದು ಗೊತ್ತಾಗಿದೆ. ಬೆಂಗಳೂರಿನಲ್ಲಿ ಇದ್ದಾರೆ. ಬೇರೆ ಕಡೆ ಹೋಗಿದ್ದಾರಾ ಪರಿಶೀಲನೆ ನಡೆಯುತ್ತಿದೆ ಎಂದರು.

ಆಸೀಡ್ ನಿಷೇಧ..?
ರಾಜ್ಯದಲ್ಲಿ ಆಸೀಡ್ ನಿಷೇಧ ಮಾಡೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಎರಡು ದಿನದಲ್ಲಿ ಡಿಜಿಯಿಂದ ಸರ್ಕಾರಕ್ಕೆ, ಇಲಾಖೆಗೆ ಪತ್ರ ಬರುತ್ತೆ, ಯಾರು ಬೇಕಾದ್ರೂ ಇಲ್ಲಿ ಹೋಗಿ ಬೇಕಾದ್ರೂ ಆಸೀಡ್ ಖರೀದಿ ಮಾಡುವ ಹಾಗೆ ಇಲ್ಲ, ಕೆಮಿಕಲ್ ಇಂಡಸ್ಟ್ರಿ ಅವರಿಗೆ ಮಾತ್ರ ಪರ್ಮಿಷನ್ ಸಿಗಬೇಕು, ಉಳಿದಂತೆ ನಿಷೇಧ ಮಾಡಬೇಕು ಅಂತ ಪತ್ರ ಬರೆಯುತ್ತೇವೆ ಎಂದರು.
ಒಂದೆರೆಡು ದಿನಗಳಲ್ಲಿ ಪಟ್ಟಿ ಬಿಡುಗಡೆ..!
ಕಾಂಗ್ರೆಸ್ ಚುನಾವಣೆ ಸಮಿತಿ ಸಭೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮಲ್ಲಿ ಎರಡು ಸಭೆ ಆಗಿವೆ, ಉಸ್ತುವಾರಿ ಸುರ್ಜೆವಾಲ ಹಾಗೇ ಸ್ಕ್ರಿನಿಂಗ್ ಕಮಿಟಿ ಸಭೆ ಆಗಿದೆ. ಪಟ್ಟಿಯನ್ನು ಇಂದು, ನಾಳೆ ಅಂತಿಮಗೊಳಿಸಿ, ದೆಹಲಿಯಲ್ಲಿ ಸೆಂಟ್ರಲ್ ಇಲೆಕ್ಷನ್ ಕಮಿಟಿಗೆ ಹೋಗುತ್ತೆ, ಎಐಸಿಸಿ ಅಧ್ಯಕ್ಷರು ಸೇರಿ 16 ಜನ ಇದ್ದಾರೆ, ನಮ್ಮ ರಾಜ್ಯದಿಂದ ಜಾರ್ಜ್ ಅವರು ಇದ್ದಾರೆ. ಖರ್ಗೆಯವರು ಅದ್ಯಕ್ಷರು ಆಗಿರೋದ್ರಿಂದ ಸುಲಭವಾಗಿ ನಡೆಯುತ್ತದೆ ಎಂದರು.
ಒಂದೇ ಪಟ್ಟಿಯಲ್ಲಿ ಎಲ್ಲಾ ಬಿಡುಗಡೆ ಮಾಡ್ತಾರೆ ಅಂತ ಹೇಳ್ತಾ ಇದ್ದಾರೆ, ಬೇರೆ ಪಕ್ಷದಿಂದ ಬರೋರೂ ಇದ್ದಾರೆ, ಹೀಗಾಗಿ ಸ್ವಲ್ಪ ಹೋಲ್ಡ್ ಮಾಡಬಹುದು, ಎರಡನೇ ಪಟ್ಟಿಯಲ್ಲಿ ಬಿಡಬಹುದು ಎಂದು ಪರಮೇಶ್ವರ್ ಅಭಿಪ್ರಾಯಪಟ್ಟರು.




