ಧರ್ಮಶಾಲಾ : ಧರ್ಮಶಾಲಾದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ವಿರುದ್ಧ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಡಿಯೂ ಮುನ್ನೆಡೆಯನ್ನು ಕಾಯ್ದುಕೊಂಡಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅವರು ಶತಕ ಸಿಡಿಸಿದರು.

ಕೊನೆಯ ಟೆಸ್ಟನ ಎರಡನೇ ದಿನವಾದ ಶುಕ್ರವಾರ ಊಟದ ವಿರಾಮದ ವೇಳೆಗೆ ಇಬ್ಬರೂ ಬ್ಯಾಟರ್ ಗಳು ಶತಕ ಸಿಡಿಸಿ ಸಂಭ್ರಮಿಸಿದರು. ಇಂಗ್ಲೆಂಡ್ ಬೌಲರ್ ಗಳನ್ನು ಆತ್ಮವಿಶ್ವಾಸದಿಂದ ಎದುರಿಸಿದ ಅವರು ಶತಕ ಗಳಿಸಿದರೆ.
ಇಂಗ್ಲೆಂಡ್ ನ ಮೊದಲ ಇನ್ನಿಂಗ್ಸ್ ನಲ್ಲಿ 218ಕ್ಕೆ ಆಲೌಟ್ ಆಗಿತ್ತು. ಕುಲದೀಪ್ ಯಾದವ್ ಮತ್ತು ಆರ್ ಅಶ್ವಿನ್ ಅವರ ಸ್ಪಿನ್ ದಾಳಿಯನ್ನು ಎದುರಿಸಲಾಗದೆ ಪೆವಿಲಿಯನ್ ಸೇರಿಕೊಂಡಿದ್ದರು. ನಿನ್ನೆ ಭಾರತ 30 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿ ದಿನದಾಟ ಮುಗಿಸಿತ್ತು.

ಯಶಸ್ವಿ ಜೈಸ್ವಾಲ್ 57 ರನ್ ಬಾರಿಸಿ ಔಟಾಗಿದ್ದರು. ಇಂದು ಆಟ ಮುಂದುವರೆಸಿದ್ದ ರೋಹಿತ್ ಮತ್ತು ಗಿಲ್, ರೋಹಿತ್ 12 ನೇ ಟೆಸ್ಟ್ ಶತಕ ಬಾರಿಸಿದರು. ಗಿಲ್ ಅವರು ನಾಲ್ಕನೇ ಶತಕ ಬಾರಿಸಿದರು.
ಕರ್ನಾಟಕದ ದೇವದತ್ತ ಪಡಿಕ್ಕಲ್ ಅವರು ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದು, ಅವರು ಮತ್ತು ಸರ್ಪರಾಜ್ ಖಾನ್ ಕೂಡ ಇಬ್ಬರು ಉತ್ತಮವಾಗಿ ಆಟವಾಡುತ್ತಿದ್ದಾರೆ. ಮಧ್ಯಾಹ್ನದ ವೇಳೆಗೆ ಸರ್ಪರಾಜ್ ಖಾನ್ 56 ರನ್ ಗಳಿಸಿದರೆ, ದೇವದತ್ತ 44 ರನ್ ಬಾರಿಸಿ ಆಟವಾಡುತ್ತಿದ್ದರು.