ಧರ್ಮಶಾಲಾ : ಟೆಸ್ಟ್ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ 700 ವಿಕೆಟ್ ಗಳನ್ನು ಪೆಡುಯುವದರ ಮೂಲಕ ವಿಶ್ವದಾಖಲೆ ಸ್ಥಾಪಿಸಿದ್ದಾರೆ.

ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ನಡುವೆ ಐದನೇ ಟೆಸ್ಟ್ ಪಂದ್ಯ ಧರ್ಮಶಾಲಾದಲ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇಲ್ಲಿ ಅವರು ಇಂದು ಈ ಸಾಧನೆ ಮಾಡಿ ಮಾಡಿರುವುದು ವಿಶೇಷವಾಗಿದ್ದು, ಇದರಿಂದ ಅವರು 700 ವಿಕೆಟ್ ಪಡೆದ ಮೂರನೇ ಬೌಲಕ್ ಎಂದ ಖ್ಯಾತಿಗೆ ಪತ್ರರಾಗಿದ್ದಾರೆ.

ಇಂದು ಅವರು ಎರಡು ವಿಕೆಟ್ ಪಡೆಯುವುದರ ಮೂಲಕ ಈ ಖ್ಯಾತಿಗೆ ಪಾತ್ರರಾಗಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 700 ವಿಕೆಟ್ ಪಡೆದ ವಿಶ್ವದ ಮೊದಲ ವೇಗದ ಬೌರಲ್ ಎಂಬ ಖ್ಯಾತಿಗೆ ಜೇಮ್ಸ ಆ್ಯಂಡರ್ಸನ್ ಪಾತ್ರರಾಗಿದ್ದಾರೆ.
ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಮತ್ತು ಆಸ್ಟ್ರೇಲಿಯಾದ ಶೇನ್ ವಾರ್ನ್ ಅವರು 700ಕ್ಕೂ ಹೆಚ್ಚು ವಿಕೆಟ್ ಗಳನ್ನು ಪಡೆದ ಸ್ಪಿನ್ನರ್ ಬೌಲರ್ ಗಳಾಗಿದ್ದಾರೆ. ಆದರೆ, ಆಂಡರ್ಸನ್ ಅವರು ವೇಗದ ಬೌಲರ್ ಆಗಿ ಈ ಸಾಧನೆ ಮಾಡಿದ್ದು ವಿಶೇಷವಾಗಿದೆ.

41 ವರ್ಷ ವಯಸ್ಸಿನ ಜೇಮ್ಸ್ ಆಂಡರ್ಸನ್ ಅವರು 187 ಟೆಸ್ಟ್ ಪಂದ್ಯಗಳನ್ನು ಆಡಿ 700 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. 2003ರಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಟೆಸ್ಟ್ ಕೆರಿಯರ್ ಪ್ರಾರಂಭಿಸಿದ ಜೇಮ್ಸ್ ಆ್ಯಂಡರ್ಸನ್ ಇದುವರೆಗೂ 39873* ಎಸೆತಗಳನ್ನು ಎಸೆದಿದ್ದಾರೆ. 18568* ರನ್ ಗಳನ್ನು ನೀಡಿ ಒಟ್ಟು 700 ವಿಕೆಟ್ ಕಬಳಿಸಿದ್ದಾರೆ. 32 ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದರೆ, ಮೂರು ಬಾರಿ ಹತ್ತು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
