ಬೆಂಗಳೂರು : ತಮಿಳುನಾಡಿಗೆ ನೀರನ್ನು ಬಿಟ್ಟಿಲ್ಲ. ತೊರೆಕಾಡನಹಳ್ಳಿಯಲ್ಲಿ ನೀರಿನ ಕೊರತೆ ಕಡಿಮೆ ಇತ್ತು. ನೀರಿನ ರಭಸ ಮತ್ತು ಅಗತ್ಯ ಲೆವೆಲ್ ನೀರು ಬೇಕಿದ್ದ ಕಾರಣ ನೀರು ಬಿಡುಗಡೆ ಮಾಡಿ ಬೆಂಗಳೂರು ನಗರಕ್ಕೆ ಪಂಪ್ ಮಾಡಿದ್ದೇವೆ. ತಮಿಳುನಾಡಿಗೆ ನೀರು ಬಿಡುವಷ್ಟು ಮೂರ್ಖರಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವು, ಬಿಜೆಪಿಯವರು ಈ ವಿಚಾರದಲ್ಲಿ ಸುಮ್ಮನೆ ಟೀಕೆ ಮಾಡುವುದಕ್ಕಾಗಿ ಟೀಕಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅನಂತ್ ಕುಮಾರ್ ಹೇಳಿಕೆ ಸ್ವಂತದ್ದಲ್ಲ, ಪಾರ್ಟಿಯದ್ದು
ಸಂಸದ ಅನಂತ್ ಕುಮಾರ್ ಹೇಳಿಕೆ ಬಿಜೆಪಿಯದ್ದು, ಇದು ವೈಯಕ್ತಿಕ ಹೇಳಿಕೆ ಅಂತ ಹೇಳಲು ಬರಲ್ಲ, ಅನಂತ್ ಕುಮಾರ್ ಇನ್ನು ಸಂಸದರು ಇದ್ದಾರೆ, ಇದು ಬಿಜೆಪಿ ಹೇಳಿಕೆ ಆಗುತ್ತದೆ ಎಂದು ಆರೋಪಿಸಿದರು.
ಅವರ ಅಜೆಂಡಾ ಆಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಡಿಕೆ ಸುರೇಶ್ ಮಾತನಾಡಿದಾಗ ಪ್ರಧಾನಿ ಮತ್ತು ಸಚಿವರು ಮಾತನಾಡಿದ್ರು, ಇದಕ್ಕೆ ಯಾಕೆ ಪ್ರಧಾನಿ ಮಾತನಾಡುತ್ತಿಲ್ಲ, ಅನಂತ್ ಕುಮಾರ್ ಮೇಲೆ ಕ್ರಮ ಯಾಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಸಂಜೆ ಎರಡನೇ ಪಟ್ಟಿ ವಿಚಾರವಾಗಿ ಸಭೆ
ಇಂದು ಸಂಜೆ ಎರಡನೇ ಪಟ್ಟಿ ವಿಚಾರವಾಗಿ ಸಭೆ ನಡೆಯಲಿದ್ದು, ನಾವು ಪಟ್ಟಿ ಸಿದ್ಧ ಮಾಡಿ ಕೇಂದ್ರಕ್ಕೆ ಕಳುಹಿಸುತ್ತೇವೆ, ನಾವು ಕಳುಹಿಸಿದ ಪಟ್ಟಿಯಲ್ಲಿ ಕೆಲವರನ್ನು ಒಪ್ಪಿಕೊಳ್ಳಬಹುದು, ಕೆಲ ಹೆಸರು ಕೈ ಬಿಡಬಹುದು ಎಂದರು.
ಬಿಜೆಪಿ ಪಟ್ಟಿ ಬಿಡುಗಡೆ ಆಗುವರೆಗೆ ನಾವು ಕಾಯಲ್ಲ, ಅವರ ರಾಜಕೀಯವೇ ಬೇರೆ, ನಮ್ಮ ರಾಜಕೀಯವೇ ಬೇರೆ ಎಂದು ಸ್ಪಷ್ಟಪಡಿಸಿದರು.




