ಬೆಂಗಳೂರು : ನನ್ನ ಜೀವನದಲ್ಲಿ ಮೊದಲ ಬಾರಿ ವಿಧಾನಸೌಧ ಮೆಟ್ಟಿಲುಗಳ ಬಳಿ ನಿಂತು ಮಾತನಾಡುತ್ತಿದ್ದೇನೆ, ಇದಕ್ಕೆ ಕಾರಣ ಕಾಂಗ್ರೆಸ್ ಪಕ್ಷ, ನಮ್ಮ ತಾಯಿ ಕಾಲದಿಂದ ಬಡವರ ಪಕ್ಷ ಅಂದ್ರೆ ಕಾಂಗ್ರೆಸ್ ಎಂದು ನಟ, ನಿರ್ದೇಶಕ ಸಾಧುಕೋಕಿಲ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಷ್ಠಾವಂತನಾಗಿ ಪಕ್ಷದ ಜೊತೆಗಿದ್ದು ಕೆಲಸ ಮಾಡಿದರ ಫಲವಾಗಿ ನನಗೆ ಕರ್ನಾಟಕ ಫಿಲಂ ಅಕಾಡೆಮಿ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು.
ನನಗೆ ಒಂದೊಂದೇ ಮೆಟ್ಟಿಲು ಹತ್ತಿ ಅಂತಾ ಸಿಎಂ, ಡಿಸಿಎಂ ಹೇಳಿದ್ದಾರೆ ಅದರಂತೆ ಮಾಡುತ್ತಿದ್ದೇನೆ, ಅಕಾಡೆಮಿಯಲ್ಲಿ ತುಂಬಾ ಕೆಲಸಗಳು ಇವೆ, ಅವುಗಳನ್ನು ನಿಷ್ಠೆಯಿಂದ ಮಾಡುತ್ತೇನೆ ಎಂದರು.
ಎಂಪಿ ಟಿಕೇಟ್ ಗಾಗಿ ಸಾಧುಕೋಕಿಲ ಮನವಿ
ಬೆಂಗಳೂರು ಸೆಂಟ್ರಲ್ ಟಿಕೆಟ್ ಆಕಾಂಕ್ಷಿ ವಿಚಾರವಾಗಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಾನು ಒಬ್ಬ ಜನರಲ್ ಕಂಪಾರ್ಟ್ಮೆಂಟ್, ನಾನೊಬ್ಬ ಕಲಾಬಿದ, ಎಲ್ಲರನ್ನೂ ಸಮಾನತೆಯಿಂದ ನೋಡುತ್ತಿದ್ದೇನೆ, ನಾನು ಯಾವ ಜಾತಿಗೂ ಸೇರಿಲ್ಲ, ಸೇರಿಸಬೇಡಿ ಎಂದು ಮನವಿ ಮಾಡಿದರು.
ಕ್ರಿಶ್ಚಿಯನ್ ಸಮುದಾಯ ಬೆಂಗಳೂರಿನಲ್ಲಿ 15 ಲಕ್ಷ ಜನ ಇದ್ದಾರೆ, ಸೆಂಟ್ರಲ್ ನಲ್ಲಿ ಕ್ರಿಶ್ಚಿಯನ್ನರಿಗೆ ಟಿಕೆಟ್ ಕೊಡಿ ಎಂದಿದ್ದೇನೆ. ನನ್ನ ಹೆಸರು ಮುಂಚೂಣಿಯಲ್ಲಿ ಇಟ್ಟುಕೊಂಡಿದ್ದಾರೆ, ಟಿಕೆಟ್ ಕೊಟ್ರೆ ನನಗೆ ಕೊಡಿ ಎಂದಿದ್ದೇನೆ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದರು.




