WHY HAVE BJP SHOUTED PRO PAKISTAN SLOGAN: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆಯನ್ನ ಬಿಜೆಪಿಯವರೇ ಯಾಕೆ ಕೂಗಿರಬಾರದು: ಸಚಿವ ಶರಣಬಸಪ್ಪ ದರ್ಶನಾಪೂರಗೆ ಪ್ರಶ್ನೆ

ಹುಬ್ಬಳ್ಳಿ : ದಲಿತ ಸಿಎಮಂ ಆದ್ರೆ ತಪ್ಪೇನು, ಬರೀ ಕಾಂಗ್ರೆಸ್ ನಲ್ಲಿ ಅಲ್ಲ, ಎಲ್ಲ ಪಕ್ಷದಲ್ಲಿ ಆಗಬೇಕು‌. ಕಾಂಗ್ರೆಸ್ ಪಕ್ಷ ಯಾವಾಗಲೂ ದಲಿತರಿಗೆ ಅಲ್ಪ ಸಂಖ್ಯಾತರಿಗೆ ಶಕ್ತಿ ಕೊಡೋ ಕೆಲಸ ಮಾಡಿದೆ, ಮುಖ್ಯಮಂತ್ರಿ ಹುದ್ದೆ ಇವಾಗ ಖಾಲಿ‌ ಇಲ್ಲ, ದಲಿತ ಸಿಎಂ ಕುರಿತು ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ‌ಸಚಿವ ಶರಣಬಸಪ್ಪ ದರ್ಶನಾಪೂರ್ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಆಗೋ ಆಸೆ ಎಲ್ಲರಿಗೂ ಇರುತ್ತೆ, ಲಿಂಗಾಯತರು, ಒಕ್ಕಲಿಗರು, ರಾಜಣ್ಣ ಎಲ್ಲರೂ ಅವರು ಸಮಾಜದ ಪರ ಕೇಳುತ್ತಾರೆ, ಅದರಲ್ಲಿ ತಪ್ಪೇನು ಇಲ್ಲ, ಆದ್ರೆ ಮುಖ್ಯಮಂತ್ರಿ ತೀರ್ಮಾನ ಮಾಡೋದು ಹೈಕಮಾಂಡ್ ಎಂದರು.
ಬಿಜೆಪಿ ಸುಮ್ನೆ ಮುಸ್ಲಿಂ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ ಅವರು, ವಿಧಾನಸೌಧದಲ್ಲಿ ಪಾಕಿಸ್ತಾನ ಘೋಷಣೆ ವಿಚಾರ. ಅಲ್ಲಿ ನಾಸಿರ್ ಏನು ಘೋಷಣೆ ಕೂಗಿದ್ದಾರಾ, ನಾವ ಕೂಗಿದೇವಾ. ಬಿಜೆಪಿಯವರೇ ಯಾಕೆ ಕೂಗಿರಬಾರದು ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಯಾರೇ ಅಂದರೂ ತಪ್ಪು. ಯಾರೇ ಆದರೂ ಒದ್ದು ಒಳಗೆ ಹಾಕಬೇಕು. ಸಂಸತ್ ನ ಒಳಗೆ ಹೋಗಿದ್ದು ದೇಶ ವಿರೋಧಿ ಚಟುವಟಿಕೆ ಅಲ್ವಾ. ಯಾಕಂದ್ರೆ ಅವರು ಹಿಂದೂ ಇದ್ರು‌. ಬಿಜೆಪಿ ಅಭಿವೃದ್ಧಿ ಬಗ್ಗೆ ಮಾತಾಡಿಲ್ಲ. ಎಮೋಷನಲ್ ವಿಚಾರದ ಮೇಲೆ ಚುನಾವಣೆ ನಡೆಸುತ್ತಿದೆ ಎಂದು ಆರೋಪಿಸಿದರು.
ಸಂವಿಧಾನ ಬದಲಾವಣೆ ಮಾತಾಡ್ತಾ ಇರೋದು ಕೂಡಾ ದೇಶದ್ರೋಹ ಹೇಳಿಕೆ, ಇವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದರು.

More News