ಹಾವೇರಿ: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ವ್ಯಾಪಾರಸ್ಥರ ಕೈವಾಡ ಇರಬಹುದು ಎಂದು ಬ್ಯಾಡಗಿ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಹಾವೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು 3 ಲಕ್ಷ ಕ್ವಿಂಟಾಲ್ ಗೂ ಅಧಿಕ ಮೆಣಸಿನಕಾಯಿ ಮಾರುಕಟ್ಟೆಗೆ ಬಂದಿದೆ. ಬಿಸಿಲು ಜಾಸ್ತಿಯಾಗಿರೋ ಕಾರಣ ದರ ಇಳಿಕೆಯಾಗಿದೆ, ಆದರೆ ೀ ಸಂದರ್ಭದಲ್ಲಿ ಹೀಗೆ ಯಾಕೆ ರೈತರು ಮಾಡಿದ್ರು ಅನ್ನೋ ಪ್ರಶ್ನೆ ಕಾಡುತ್ತಿದೆ ಎಂದು ಹೇಳಿದರು.
ಈ ಘಟನೆ ಹಿಂದೆ ವ್ಯಾಪಾರಸ್ಥರ ಕೈವಾಡ ಇದೆ ಎನ್ನುವ ಅನುಮಾನ ವ್ಯಕ್ತಪಡಿಸಿತದ ಅವರು, ಇಂತಹ ಘಟನೆ ಬ್ಯಾಡಗಿ ಮಾರುಕಟ್ಟೆಯಲ್ಲಿ ಯಾವತ್ತೂ ನಡೆದಿರಲಿಲ್ಲ, ಇದರಿಂದ ನನಗೆ ತುಂಬಾ ನೋವಾಗಿದೆ, ನಾನು ನನ್ನ ವರ್ತಕರ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸುರೇಶ್ ಗೌಡ ಪಾಟೀಲ್ ಪ್ರಕಟಿಸಿದರು.
ಮರು ಟೆಂಡರ್ ಆರಂಭ
ನಿನ್ನೆ ಟೆಂಡರ್ ನಡೆದ ಸಂದರ್ಭದಲ್ಲಿ ಗಲಾಟೆ ನಡೆದಿದ್ದರಿಂದ ಇಂದು ಮತ್ತೊಮ್ಮೆ ಮರು ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ಮಾರುಕಟ್ಟೆಯಲ್ಲಿ ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು, ಮಧ್ಯಾಹ್ನದ ಬಳಿಕ ದರ ನಿಗದಿಯಾಗಲಿದೆ.
ಬಿಗಿ ಪೊಲೀಸ್ ಬಂದೋಬಸ್ತ್
ನಿನ್ನೆ ನಡೆದ ಅಹಿತಕರ ಘಟನೆ ಇಂದು ಮರುಕರುಳಿಸ ಬಾರದು ಎಂಬ ಉದ್ದೇಶದಿಂದ ಮಾರುಕಟ್ಟೆ ಮತ್ತು ಬ್ಯಾಡಗಿ ಪಟ್ಟಣಕ್ಕೆ ಆಗಮಿಸುವ ಮಾರ್ಗದಲ್ಲಿ ಬಿಗಿ ತಪಾಸಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ.
ಮೆಣಸಿನಕಾಯಿ ತುಂಬಿದ ಲಾರಿಗಳು, ವಾಹನಗಳು ನಿಲುಗಡೆ ಮಾಡಿ ತಪಾಸಣೆಯನ್ನು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿಯೇ ನೂರಾರು ವಾಹನಗಳು ನಿಂತಿದ್ದು ಕಂಡುಬಂದಿದೆ.
ಈ ವೇಳೆ ಮುನ್ನುಗ್ಗಲು ಬಂದ ವಾಹನಗಳಿಗೆ ಕಲ್ಲು ತೂರುವ ಯತ್ನಿಸಲಾಗಿದ್ದು, ಟಾಟಾ ಏಸ್ ವಾಹನದ ಚಾಲಕನಿಗೆ ಕಲ್ಲಿನಿಂದ ಹಲ್ಲೆ ಮಾಡುವ ಯತ್ನಿಸಲಾಗಿದೆ. ಕೈಯಲ್ಲಿ ಕಲ್ಲು ಹಿಡಿದು ಜಗಳಕ್ಕೆ ನಿಂತ ಆಂದ್ರ ಮೂಲದ ರೈತರು ಸರದಿಯಲ್ಲಿ ಬರುವಂತೆ ತಾಕೀತು ಮಾಡುತ್ತಿದ್ದುದು ಕಂಡುಬಂದಿತ್ತು.
ಇನ್ನೊಂದೆಡೆ ಬ್ಯಾಡಗಿ ವರ್ತಕರ ಸಂಘದ ಬಳಿ ವರ್ತಕ ಸಂಘದ ಅಧ್ಯಕ್ಷ ಸುರೇಶ್ ಗೌಡ ಪಾಟೀಲ್ & ಡಿಸಿ, ಹಾವೇರಿ ಎಸ್ಪಿ, ಎಸಿ, ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣನವರ ಹಾಗೂ ಇತರ ನಾಯಕರು ಭಾಗಿಯಾಗಿದ್ದಾರೆ.
ನಿನ್ನೆ ಘಟಕ ಒಂದು ಕುತಂತ್ರವಾಗಿದ್ದು ದರ ಇಳಿಕೆಯಾಗಿಲ್ಲ
ವರ್ತಕ ಸಂಘದ ಉಪಾಧ್ಯಕ್ಷ AR ನಧಾಪ್ ಸುದ್ದಿಗಾರರೊಂದಿಗೆ ಮಾತನಾಡಿ, ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ದರ ಇಳಿಕೆಯಾಗಿಲ್ಲ, ನಿನ್ನೆ ನಡೆದ ಘಟನೆ ಇದು ಒಂದು ಕುತಂತ್ರಯಾಗಿದೆ ಎಂದು ಆರೋಪಿಸಿದ್ದಾರೆ.
75 ವರ್ಷಗಳಿಂದ ನಾನು ಇಲ್ಲಿ ಟೆಂಡರ್ ಹಾಕ್ತಾ ಇದ್ದೇನೆ, ಇಂತಹ ಪ್ರಕರಣ ಇಷ್ಟು ವರ್ಷದಲ್ಲಿ ನಾನು ನೋಡೇ ಇಲ್ಲ, ಮಾರುಕಟ್ಟೆ ದರ ಇಳಿಕೆಯಾಗಿಲ್ಲ ಇದು ಉಹಾಪೋಹ ಎಂದರು. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಉನ್ನತಿ ಕಂಡು ಹೀಗೆ ಕೆಲ ಕಿಡಗೇಡಿಗಳು ಕೃತ್ಯವೆಸಗಿದ್ದಾರೆ ಎಂದು ಆರೋಪಿಸಿದರು.