HARYANA CM KHATTAR RESIGNS: ಕ್ಷೀಪ್ರ ರಾಜಕೀಯ ಬೆಳವಣಿಗೆ: ಹರಿಯಾಣ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಮನೋಹರ್ ಲಾಲ್ ಖಟ್ಟರೆ

ಚಂಡೀಗಢ: ಹರಿಯಾಣ ರಾಜ್ಯದ ಮುಖ್ಯಮಂತ್ರಿ ಸ್ಥಾನ್ಕಕೆ ಮನೋಹರ್ ಲಾಲ್ ಖಟ್ಟರ್ ದಿಢೀರ್ ರಾಜೀನಾಮೆ ಸಲ್ಲಿಸಿದ್ದು, ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ.
ಖಟ್ಟರ್ ಅವರು ಇಂದು ರಾಜ್ಯಪಾಲರಾದ ಬಂಡಾರು ದತ್ತಾತ್ರೇಯ ಅವರನ್ನು ರಾಜಭವನದಲ್ಲಿ ಭೇಟಿಯಾಗಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿ, ತಮ್ಮ ಸಚಿವ ಸಂಪುಟವನ್ನು ವಿಸರ್ಜಿಸಿದ್ದಾರೆ. ಹರಿಯಾಣದಲ್ಲಿ ಬಿಜೆಪಿ ಮತ್ತು ಜನನಾಯಕ್ ಜನತಾಪಕ್ಷದ ನಡುವೆ ಲೋಕಸಭೆ ಚುನಾವಣಾ ಸೀಟು ಹಂಚಿಕೆಯಲ್ಲಿನ ಮಾತುಕತೆ ವಿಫಲವಾಗಿ ಉಭಯ ಪಕ್ಷಗಳ ನಡುವೆ ಉಂಟಾದ ಭಿನ್ನಾಭಿಪ್ರಾಯವೇ ಸಿಎಂ ರಾಜೀನಾಮೆಗೆ ಕಾರಣ ಎಂದು ತಿಳಿದುಬಂದಿದೆ.
ಇದೀಗ ಬಿಜೆಪಿ ಪಕ್ಷವು ಜೆಜೆಪಿ(ಜನನಾಯಕ್ ಜನತಾಪಕ್ಷ)ಯನ್ನು ತೊರೆದು ಪಕ್ಷೇತರ ಶಾಸಕರ ಸಹಾಯದೊಂದಿಗೆ ಮತ್ತೆ ಇಂದು ಸಂಜೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಇದಕ್ಕಾಗಿ ಎಲ್ಲಾ ರೀತಿಯ ಸರ್ಕಸ್ ಮಾಡುತ್ತಿದೆ ಎಂದು ತಿಳಿದುಬಂದಿದೆ.
ಹರಿಯಾಣ ವಿಧಾನಸಭೆಯಲ್ಲಿ ಒಟ್ಟು 90 ಸದಸ್ಯ ಬಲವನ್ನು ಹೊಂದಿದ್ದು, ಇದರಲ್ಲಿ ಬಿಜೆಪಿ 41 ಶಾಸಕರನ್ನು ಹೊಂದಿದೆ. ಕಾಂಗ್ರೆಸ್ 30 ಶಾಸಕರನ್ನು ಮತ್ತು ಜೆಜೆಪಿ 10 ಶಾಸಕರು, ಏಳು ಸ್ವತಂತ್ರ ಶಾಸಕರು ಮತ್ತು ಇಂಡಿಯನ್ ನ್ಯಾಷನಲ್ ಲೋಕದಳ ಮತ್ತು ಹರಿಯಾಣ ಲೋಕಿತ್ ಪಕ್ಷ ತಲಾ ಒಂದು ಸ್ಥಾನವನ್ನು ಹೊಂದಿದೆ.
ಇದೀಗ ಬಹುಮತಕ್ಕಾಗಿ ಬಿಜೆಪಿಗೆ ಇನ್ನು ಐವರು ಶಾಸಕರ ಅವಶ್ಯಕತೆಯಿದ್ದು, ಆರು ಪಕ್ಷೇತರ ಶಾಸಕರನ್ನು ತನ್ನತ್ತ ಸೆಳೆದುಕೊಂಡಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ಮತ್ತೆ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿ ಮತ್ತೆ ಅಧಿಕಾರಕ್ಕೇರಲಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಅರ್ಜುನ್ ಮುಂಡಾ ಮತ್ತು ಹಿರಿಯ ನಾಯಕ ತರುಣ್ ಚುಗ್ ಅವರನ್ನು ಬಿಜೆಪಿ ವರಿಷ್ಠರು ಚಂಡೀಗಢಕ್ಕೆ ಕಳುಹಿಸಿದ್ದಾರೆ. ಸಂಜೆ ನಡೆಯುವ ಸಭೆಯಲ್ಲಿ ಮನೋಹರ್ ಖಟ್ಟರ್ ಅವರೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲಿದ್ದಾರಾ ಅಥವಾ ನೂತನ ಮುಖ್ಯಮಂತ್ರಿ ಆಯ್ಕೆ ನಡೆಯಲಿದೆಯಾ ಎನ್ನುವುದು ಇದೀಗ ಕುತೂಹಲಕ್ಕೆಡೆ ಮಾಡಿದೆ.
ಇನ್ನೊಂದೆಡೆ ಖಟ್ಟರ್ ಅವರು ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿದ್ದು, ಎಲ್ಲಾದದ್ದಕ್ಕೂ ಸಂಜೆಯೊಳಗೆ ಸಂಪೂರ್ಣ ಚಿತ್ರಣ ಹೊರಬೀಳಲಿದೆ.

More News