ಕುಣಿಗಲ್ : ಬಿಗ್ ಬಾಸ್ ಸ್ಪರ್ಧಿ ತುಕಾಲಿ ಸಂತೋಷ್ ಇತ್ತೀಚೆಗೆ ಹೊಸ ಕಾರನ್ನು ಖರೀದಿಸಿ, ನನ್ನ ಕನಸು ನನಸಾಯಿತು ಎಂದು ಹೇಳಿಕೊಂಡಿದ್ದರು. ಆದರೆ, ಈ ಸಂತೋಷನಿಗೆ ಸಂತೋಷ ಜಾಸ್ತಿ ದಿನ ಉಳಿಯಲಿಲ್ಲ.
ಕಳೆದ ಮಾರ್ಚ್ 13 ರಂದು ಅವರು ಖರೀದಿಸಿದ ಕಾರು ಅಪಘಾತಕ್ಕೆ ಒಳಗಾಗಿತ್ತು. ಅಟೋ ಚಾಲಕ ಗಂಬೀರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅಟೋ ಚಾಲಕ ಜಗದೀಶ್ ಮೃತಪಟ್ಟಿದ್ದಾರೆ.

ಹೊಳೆನರಸೀಪುರದವರಾದ ತುಕಾಲಿ ಸಂತೋಷ್ ತಮ್ಮ ಹೊಸ ಕಾರಿನಲ್ಲಿ ತುಮಕೂರು ಕಡೆಯಿಂದ ಕುಣಿಗಲ್ ಮಾರ್ಗವಾಗಿ ಹೊಳೆನರಸೀಪುರಕ್ಕೆ ತೆರಳುತ್ತಿದ್ದರು. ಈ ವೇಳೆ ಕುಣಿಗಲ್ ನ ಕುರುಡಿಹಳ್ಳಿ ಸಮೀಪ ಕಾರು ಅಟೋ ರಿಕ್ಷಾಕ್ಕೆ ಡಿಕ್ಕಿ ಹೊಡಿದಿದೆ.
ಇದರಿಂದ ಅಟೋರಿಕ್ಷಾ ನುಜ್ಜುಗುಜ್ಜಾಗಿದ್ದು, ಅಟೋ ಚಾಲಕ ಜಗದೀಶ್ ತೀವ್ರವಾಗಿ ಗಾಯಗೊಂಡಿದ್ದ. ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಅಟೋ ಚಾಲಕ ಜಗದೀಶ್ ನನ್ನು ದಾಖಲಿಸಲಾಗಿತ್ತು. ಆದರೆ ಮಾರ್ಚ್ 14ರಂದು ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯವರು ತಿಳಿಸಿದ್ದಾರೆ. ಅವರಿಗೆ 40 ವರ್ಷ ವಯಸ್ಸಾಗಿತ್ತು.
ಹಲವು ರಿಯಾಲಿಟಿ ಶೋಗಳಿಂದ ತುಕಾಲಿ ಸಂತೋಷ್ ಖ್ಯಾತಿಯನ್ನು ಗಳಿಸಿದ್ದರು. ಬಿಗೆ ಬಾಸ್ ಸೀಸನ್ 10 ರಲ್ಲಿ ಪಾಲ್ಗೊಳ್ಳುವುದರ ಮೂಲಕ ಮತ್ತಷ್ಟು ಖ್ಯಾತಿಯನ್ನು ಹೆಚ್ಚಿಸಿಕೊಂಡರು.




