15 ಅಧಿಕಾರಿಗಳ ಮನೆ ಮೇಲೆ ACB ಭರ್ಜರಿ ದಾಳಿ: ಚಿನ್ನಾಭರಣ, ಆಸ್ತಿಪಾಸ್ತಿ ಅಪಾರ ಪ್ರಮಾಣದ ದಾಖಲಾತಿ ಪತ್ತೆ

ಬೆಂಗಳೂರು : ರಾಜ್ಯದಲ್ಲಿ ಇಂದು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ನಾನಾ ಇಲಾಖೆಯ ಅಧಿಕಾರಿಗಳ ಮನೆ ಮತ್ತು ಕಚೇರಿಯ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ ನಡೆದ ಬಿಗ್ ಅಪರೇಷನ್ ನಲ್ಲಿ ಏಕಕಾಲದಲ್ಲಿ 15 ಅಧಿಕಾರಿಗಳ ಮನೆ ಮತ್ತು ಕಚೇರಿ ಮೇಲೆ ದಾಳಿ ನಡಸಲಾಗಿದೆ. ಒಟ್ಟು 60 ಸ್ಥಳಗಳಲ್ಲಿ ಭರ್ಜರಿ ಬೇಟೆಯಾಡಲಾಗಿದ್ದು, ಸಾಕಷ್ಟು ದಾಖಲಾತಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆದಾಯಮೀರಿ ಆಸ್ತಿಗಳಿಕೆ ಮತ್ತು ಭ್ರಷ್ಟಾಚಾರ ಹಿನ್ನೆಲೆ ಈ ದಾಳಿ ನಡೆದಿದ್ದು, ಕೆಎಸ್ ಲಿಂಗೇಗೌಡ, ಕಾರ್ಯನಿರ್ವಾಹಕ ಇಂಜಿನಿಯರ್, ಸ್ಮಾರ್ಟ್ ಸಿಟಿ, ಮಂಗಳೂರು, ಶ್ರೀನಿವಾಸ್ ಕೆ, ಕಾರ್ಯನಿರ್ವಾಹಕ ಇಂಜಿನಿಯರ್, ಹೆಚ್ ಎಲ್ ಬಿಸಿ, ಮಂಡ್ಯ, ಲಕ್ಷ್ಮೀನರಸಿಂಹಯ್ಯ, ರೆವೆನ್ಯೂ ಇನ್ಸ್ ಪೆಕ್ಟರ್, ದೊಡ್ಡಬಳ್ಳಾಪುರ, ವಾಸುದೇವ್, ಮಾಜಿ ಯೋಜನಾ ಅಧಿಕಾರಿ, ನಿರ್ಮಿತಿ ಕೇಂದ್ರ ಬೆಂಗಳೂರು, ಬಿ. ಕೃಷ್ಣಾರೆಡ್ಡಿ, ಜನರಲ್ ಮ್ಯಾನೇಜರ್, ನಂದಿನಿ ಡೈರಿ, ಬೆಂಗಳೂರು, ಟಿ ಎಸ್ ರುದ್ರೇಶಪ್ಪ, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಗದಗ, ಎ ಕೆ ಮಸ್ತಿ, ಸಹಕಾರ ಇಲಾಖೆ ಅಧಿಕಾರಿ, ಸವದತ್ತಿ ಬೈಲಹೊಂಗಲದಲ್ಲಿ ಕೆಲಸ, ಸದಾಶಿವ ಮರಲಿಂಗಣ್ಣನವರ್, ಹಿರಿಯ ಮೋಟರ್ ಇನ್ಸ್ ಪೆಕ್ಟರ್, ಗೋಕಾಕ್, ನೇತಾಜಿ ಹೀರಾಜಿ ಪಾಟೀಲ್, ಗ್ರೂಪ್ ಸಿ ನೌಕರ ಹೆಸ್ಕಾಂ, ಕೆ ಎಸ್ ಶಿವನಂದ್, ನಿವೃತ್ತ ಸಬ್ ರಿಜಿಸ್ಟರ್, ಬಳ್ಳಾರಿ, ಜುಲೈ 2021 ರಲ್ಲಿ ನಿವೃತ್ತಿ ಹೊಂದಿದ್ದ ಅಧಿಕಾರಿ, ರಾಜಶೇಖರ್, ಫಿಸಿಯೋಥೆರಪಿಸ್ಟ್ , ಸರ್ಕಾರಿ ಆಸ್ಪತ್ರೆ ಯಲಹಂಕ, ಎಲ್ ಸಿ ನಾಗರಾಜ್ , ಕೆಎಎಸ್, ಸಕಾಲ, ಬೆಂಗಳೂರು, ಜಿ ವಿ ಗಿರಿ, ಡಿಗ್ರೂಪ್ ನೌಕರ, ಬಿಬಿಎಂಪಿ , ಯಶವಂತಪುರ, ಎಸ್ ಎಂ ಬಿರಾದರ್, ಕಿರಿಯ ಅಭಿಯಂತರ, ಲೋಕೋಪಯೋಗಿ ಇಲಾಖೆ, ಜೇವರ್ಗಿ ಇವರುಗಳ ಮನೆ ಮತ್ತು ಕಚೇರಿಯ ಮೇಲೆ ಏಕಕಾಲಕ್ಕೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಒಟ್ಟು 408 ಅಧಿಕಾರಿಗಳಿಂದ 60 ಸ್ಥಳಗಳಲ್ಲಿ ದಾಳಿ
ಈ 15 ಅಧಿಕಾರಿಗಳ ಮೇಲೆ ಸಾರ್ವಜನಿಕರಿಂದ ನಿರಂತರ ದೂರುಗಳು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ, ದಾಳಿ ಸಂದರ್ಭದಲ್ಲಿ ಎಸಿಬಿ 8 ಜನ ಎಸ್ ಪಿ 100 ಜನ ಅಧಿಕಾರಿಗಳು, 300 ಜನ ಸಿಬ್ಬಂದಿ ಸೇರಿ ಒಟ್ಟು 408 ಜನರಿಂದ ದಾಳಿ ನಡೆದಿದೆ.

ಇದೊಂದು ಎಸಿಬಿ ಅಧಿಕಾರಿಗಳಿಂದ ನಡೆದ ಬೃಹತ್ ಮಟ್ಟದ ದಾಳಿಯಾಗಿದ್ದು, ಅಕ್ರಮ ಹಾಗೂ ದಾಖಲೆಗಳಿಲ್ಲದ ಹಣ ಪತ್ತೆಯಾಗಿದೆ, ದಾಳಿ ನಡೆಸಿದವರ ಮನೆಗಳಲ್ಲಿ ಕೆ‌.ಜಿ ಗಟ್ಟಲೆ ಚಿನ್ನಾಭರಣ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಬಿಎಂಪಿ ಎ ದರ್ಜೆ ನೌಕರಿ ಮಾಯಣ್ಣಗೂ ಬಿಗ್ ಶಾಕ್, ಮಾಯಣ್ಣ ಅಕೌಂಟ್ ಗಳನ್ನು ಪರಿಶೀಲನೆಯನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಬ್ಯಾಂಕ್ ಅಕೌಂಟ್ ಡಿಟೈಲ್ಸ್, ಕಾರುಗಳು, ಆಸ್ತಿ ಪತ್ರಗಳು ಪತ್ತೆಯಾಗಿವೆ. ಸಾಲ ಎಷ್ಟಿದೆ ..? ಎಲ್ಲೆಲ್ಲಿ ನಿವೇಶನಗಳಿವೆ ಎಂಬುದರ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇದರ ಜತೆಯಲ್ಲಿಯೇ ಮಾಯಣ್ಣ ಅವರ ಆಪ್ತರ ಮನೆ ಮೇಲೆಯೂ ದಾಳಿ ನಡೆದಿದೆ.

More News