TOMORROW LOKA SABHA ELECTION DATE FIX: ನಾಳೆ ಮಧ್ಯಾಹ್ನ ಕೇಂದ್ರ ಚುನಾವಣಾ ಆಯೋಗದಿಂದ ಸಾರ್ವತ್ರಿಕ ಚುನಾವಣೆಯ ದಿನಾಂಕ ಘೋಷಣೆ

ನವದೆಹಲಿ : ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ನಾಳೆ ಮಧ್ಯಾಹ್ನ ದೇಶದ ಸಾರ್ವತ್ರಿಕ ಚುನಾವಣೆಗೆ ಡೇಟ್ ಫಿಕ್ಸ್ ಆಗಲಿದೆ.
ನಾಳೆ ಮಧ್ಯಾಹ್ನ ಮೂರು ಗಂಟೆಗೆ ಕೇಂದ್ರ ಚುನಾವಣಾ ಆಯೋಗದಿಂದ ಸುದ್ದಿಗೋಷ್ಠಿ ಕರೆಯಲಾಗಿದ್ದು, ನಾಳೆಯಿಂದಲೇ ಅಧಿಸೂಚನೆಯನ್ನು ಚುನಾವಣಾ ಆಯೋಗ ಪ್ರಕಟಿಸುವ ಸಾಧ್ಯತೆಗಳಿವೆ.


ದೆಹಲಿಯ ವಿಜ್ಙಾನಭವನದಲ್ಲಿ ನಡೆಯಲಿರುವ ಪತ್ರಿಕಾಗೋಷ್ಛಿಯಲ್ಲಿ ಮತದಾನದ ದಿನಾಂಕ, ಫಲಿತಾಂಶದ ದಿನಾಂಕವನ್ನು ಘೋಷಣೆ ಮಾಡಲಿದ್ದು, ನಾಳೆಯಿಂದ ನೀತಿ‌ಸಂಹಿತೆ ಜಾರಿ ಸಾಧ್ಯತೆಇದೆ.
ಹಾಗೆಯೇ ದೇಶದಲ್ಲಿ ಒಂದೇ ಹಂತದಲ್ಲಿ‌ ಚುನಾವಣೆ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

More News