ಪ್ರಿಯಾಂಕಾ ಚೋಪ್ರಾ ದಾಂಪತ್ಯದಲ್ಲಿ ಬಿರುಕು: ವದಂತಿಗಳನ್ನು ನಿರಾಕರಿಸಿದ ಹಾಲಿವುಡ್ ತಾರೆ

ಮುಂಬೈ : ಕಳೆದ ಹಲವಾರು ತಿಂಗಳಿಂದ ಬಾಲಿವುಡ್, ಹಾಲಿವುಡ್ ನಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ ದಾಂಪತ್ಯದಲ್ಲಿನ ಬಿರುಕು ವಿಷಯಕ್ಕೆ ಕೊನೆಗೂ ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತೆರೆ ಎಳೆದಿದ್ದಾರೆ.
ನೆಟ್ ಫ್ಲಿಕ್ಸ್ ಕಾಮಿಡಿ ಸ್ಪೆಷಲ್ ಷೋವೊಂದರ ತುಣಕನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಅವರು ಎಲ್ಲಾ ವದಂತಿಗಳಿಗೆ ಫುಲ್ ಸ್ಟಾಪ್ ಹಾಕಿದ್ದಾರೆ.
ಪ್ರಿಯಾಂಕಾ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರಿನ ಮುಂದೆ ಇದ್ದ ಜೋನಸ್ ಎಂಬ ಪದವನ್ನು ತೆಗೆದುಹಾಕಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆಗ್ರಾಸವಾಗಿತ್ತು. ಹಾಗೆಯೇ ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದ ಪ್ರಿಯಾಂಕಾ
ಪಾಪ್ ಗಾಯಕ ನಿಕ್ ಜೋನಸ್ ಮತ್ತು ಪ್ರಿಯಾಂಕಾ ಚೋಪ್ರಾ ನಡುವೆ ಎಲ್ಲಾವೂ ಸರಿಯಿಲ್ಲ ಎಂಬ ವದಂತಿ ಸಾಕಷ್ಟು ಹರಿದಾಡಿತ್ತು. ಅದಕ್ಕೆ ಅವರು ಕಾಮಿಡಿ ಷೋ ನಲ್ಲಿ ಅವರು ಮಾತನಾಡಿದ್ದ ವಿಷಯವನ್ನು ಹಂಚಿಕೊಳ್ಳುವುದರ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ನಿಕ್ ಜೋನಸ್ ಮತ್ತು ತಮ್ಮ ನಡುವೆ ಹತ್ತು ವರ್ಷಗಳ ಅಂತರವಿದ್ದರೂ ಕೂಡ ಪರಸ್ಪರ ಹೇಗೆ ಅರ್ಥ ಮಾಡಿಕೊಂಡಿದ್ದೇವೆ, ಹಾಗೂ ವಿಚಾರಗಳನ್ನು ಯಾವ ರೀತಿಯಲ್ಲಿ ಹಂಚಿಕೊಳ್ಳುತ್ತಿದ್ದೇವೆ ಎನ್ನುವುದನ್ನು ವಿವರವಾಗಿ ಹಂಚಿಕೊಂಡಿದ್ದಾರೆ. ಯಶಸ್ವಿ ನಟಿಯೊಬ್ಬರ ವೃತ್ತಿ ಜೀವನ ಯಾವ ರೀತಿಯಲ್ಲಿ ಇರುತ್ತದೆ ಎಂಬುದನ್ನು ನಿಕ್ ಅರ್ಥ ಮಾಡಿಕೊಂಡಿದ್ದಾರೆ. ಹಾಗೆಯೇ ಅವರಿಂದಲೂ ಅನೇಕ ಮಾಹಿತಿಯನ್ನು ನಾನು ಕಲಿತಿದ್ದೇನೆ ಎಂದು ಪ್ರಿಯಾಂಕಾ ಹಂಚಿಕೊಂಡಿದ್ದಾರೆ.

More News