ನವದೆಹಲಿ : 2018ರಲ್ಲಿ ಚುನಾವಣಾ ಬಾಂಡ್ ಗಳನ್ನು ಪರಿಚಯಿಸಿದಾಗಿನಿಂದ ಬಿಜೆಪಿಯು ಗರಿಷ್ಠ ಹಣ 6986.5 ಕೋಟಿ ರೂಪಾಯಿಗಳನ್ನು ಸ್ವೀಕರಿಸಿದೆ ಎಂದು ಚುನಾವಣಾ ಆಯೋಗದ ಅಂಕಿಅಂಶಗಳು ಬಹಿರಂಗಪಡಿಸಿವೆ.
ಮೊದಲನೇ ಸ್ಥಾನದಲ್ಲಿ ಕೇಂದ್ರದ ಆಡಳಿತರೂಢ ಬಿಜೆಪಿ ಇದ್ದರೆ ನಂತರದ ಸ್ಥಾನದಲ್ಲಿ ಪಶ್ಚಿಮಬಂಗಾಳದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ 1397 ಕೋಟಿ ರೂಪಾಯಿಯನ್ನು ಪಡೆದುಕೊಂಡು ಎರಡನೇ ಸ್ಥಾನದಲ್ಲಿದೆ. ಕಾಂಗ್ರೆಸ್ ಮೂರನೇ ಸ್ಥಾನ ಪಡೆದುಕೊಂಡಿದ್ದು, 1334 ರೂಪಾಯಿ ಸ್ವೀಕರಿಸಿದೆ, ಬಿಆರ್ ಎಸ್ 1322 ಕೋಟಿ ರೂಪಾಯಿ ಸ್ವೀಕರಿಸಿದೆ.
ಒಡಿಶಾದ ಆಡಳಿತ ಪಕ್ಷ ಬಿಜೆಡಿ 944.5 ಕೋಟಿ ರೂಪಾಯಿ ಸ್ವೀಕರಿಸುವುದರ ಮೂಲಕ ನಾಲ್ಕನೇ ಸ್ಥಾನದಲ್ಲಿದೆ. ಡಿಎಂಕೆ656.5 ಕೋಟಿ ರೂಪಾಯಿ, ಮತ್ತು ಆಂಧ್ರಪ್ರದೇಶದ ವೈಎಸ್ ಆರ್ ಕಾಂಗ್ರೆಸ್ 442.8 ಕೋಟಿ ರೂಪಾಯಿ ಮೈಲ್ಯದ ಬಾಂಡ್ ಗಳನ್ನು ಸ್ವೀಕರಿಸಿವೆ.
ಜೆಡಿಎಸ್ 89.75 ಕೋಟಿ ರೂಪಾಯಿ ಮೌಲ್ಯದ ಬಾಂಡ್ ಗಳನ್ನು ಸ್ವೀಕರಿಸಿದೆ.




