ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ 7ನೇ ವೇತನ ಆಯೋಗದ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಇದನ್ನು ಕೂಡಲೇ ಕಾಲಮಿತಿಯೊಳಗೆ ಅನುಷ್ಠಾನವಾಗಬೇಕು, ಇಲ್ಲದಿದ್ದಲ್ಲಿ ಹೋರಾಟ ನಿಶ್ಚಿತ ಎಂದು ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೌಕರರ ಸಹನೆಯ ಕಟ್ಟೆ ಒಡೆದು ಹೋಗಿದೆ, ಈಗಾಗಲೇ ತಡವಾಗಿದೆ, ಮತ್ತೆ ಕಾಯೋ ಪ್ರಶ್ನೆಯೇ ಇಲ್ಲ, ಚುನಾವಣೆ ನೀತಿ ಸಂಹಿತೆಯ ನಂತರ ಕಾಯೋ ಮಾತೇ ಇಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ನೌಕರರ ಸಹನೆಗೂ ಒಂದು ಮಿತಿ ಇದೆ, ಈಗಾಗಲೇ ಎರಡು ಬಾರಿ ಆಯೋಗದ ವರದಿ ಮುಂದೂಡಿಕೆಯಾಗಿದೆ, ಚುನಾವಣೆ ಮುಗಿಯುತ್ತಿದ್ದಂತೆ 7ನೇ ವೇತನ ಆಯೋಗದ ವರದಿ ಅನುಷ್ಠಾನ ಆಗಲೇಬೇಕು, ಆದಷ್ಟು ಬೇಗ ವರದಿ ಅನುಷ್ಠಾನಗೊಳಿಸುವಂತೆ ಅವರು ಆಗ್ರಹಿಸಿದರು.
ಸರ್ಕಾರ ಕಾಲಾಹರಣ ಮಾಡದೇ ವರದಿ ಅನುಷ್ಟಾನ ಮಾಡಬೇಕು, ನೀತಿ ಸಂಹಿತೆಯ ಅವಧಿಯಲ್ಲೂ ವೇತನ ಆಯೋಗದ ವರದಿ ಅನುಷ್ಠಾನ ಮಾಡಿದ ಉದಾಹರಣೆಗೆ ಇದೆ, ಮುಂದೂಡೋ ಮಾತೇ ಇಲ್ಲ, ಕೂಡಲೇ ಅನುಷ್ಠಾನ ಮಾಡಬೇಕು, ಎರಡು ವರ್ಷವೆಲ್ಲಾ ಕಾಯೋ ಪ್ರಶ್ನೆಯೇ ಇಲ್ಲ, ಕೊಟ್ಟ ಮಾತನ್ನ ಸರ್ಕಾರ ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಇಲ್ಲವಾದಲ್ಲಿ ನೌಕರರ ಸಂಘ ಸಶಕ್ತವಾಗಿದೆ ಹೋರಾಟ ಮಾಡುತ್ತೇವೆ, ನಾವು ಕೇಳಿದ್ದು ಶೇ. 35 ರಷ್ಟು ವೇತನ ಹೆಚ್ಚಳ ಆದರೆ, ಪ್ರಸ್ತಾವನೆ ಶೇ. 27.7ರಷ್ಟು ಕೊಟ್ಟಿದ್ದಾರೆ, ಇದು ನಮ್ಮ ನೌಕರರಿಗೆ ಅಸಮಾಧಾನ ತಂದಿದೆ, ಸರ್ಕಾರ ಕಾಲಮಿತಿಯೊಳಗೆ ವರದಿ ಅನುಷ್ಟಾನ ಮಾಡುತ್ತೆ ಎಂಬ ಭರವಸೆ ಇದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಷಡಕ್ಷರಿ ಹೇಳಿದರು.